Advertisement

ಜಯಲಲಿತಾ ಅಂತ್ಯಸಂಸ್ಕಾರಕ್ಕೆ 1 ಕೋಟಿ ರೂ. ಖರ್ಚು

11:48 AM Oct 22, 2018 | Team Udayavani |

ಚೆನ್ನೈ: ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಅಂತ್ಯಸಂಸ್ಕಾರಕ್ಕೆ ತಮಿಳುನಾಡು ಸರಕಾರ ಬರೋಬ್ಬರಿ 93.33 ಲಕ್ಷ ರೂ. ಖರ್ಚು ಮಾಡಿರುವ ವಿಚಾರ ಮಾಹಿತಿ ಹಕ್ಕು ಅರ್ಜಿಯೊಂದರಿಂದ ಬಹಿರಂಗಗೊಂಡಿದೆ. ಮಧುರೈಯ ಸಯೀದ್‌ ತಮೀಮ್‌ ಎಂಬವರು ಸಲ್ಲಿಸಿದ್ದ ಅರ್ಜಿಗೆ ಉತ್ತರಿಸಿರುವ ಸರಕಾರದ ಸಾರ್ವಜನಿಕ ಸಂಪರ್ಕಾಧಿಕಾರಿ ಈ ಮಾಹಿತಿ ನೀಡಿದ್ದಾರೆ. ಅದೇ ಅರ್ಜಿಯಲ್ಲಿ, ಜಯಲಲಿತಾ ಅವರ ನಿಧನ ವಾರ್ತೆಯನ್ನು ತಡವಾಗಿ ಬಹಿರಂಗ ಪಡಿಸಲಾಗಿತ್ತೇ ಎಂಬ ಪ್ರಶ್ನೆಯನ್ನು ಅಲ್ಲಗಳೆಯಲಾಗಿದ್ದು, ಚೆನ್ನೈಯ ಅಪೊಲೊ ಆಸ್ಪತ್ರೆಗೆ ದಾಖಲಾಗಿದ್ದಾಗ ಅವರ ಚಿಕಿತ್ಸೆ ಖರ್ಚನ್ನು ತಮಿಳುನಾಡು ಸರಕಾರ ಭರಿಸಿಲ್ಲ ಎಂದಿದ್ದಾರೆ. “ಜಯಲಲಿತಾ ಅವರ ಶಾಸಕತ್ವದ ಪಿಂಚಣಿ ಯಾರಿಗೆ ಹೋಗುತ್ತಿದೆ’ ಎಂಬ ಪ್ರಶ್ನೆಗೆ ಉತ್ತರವಾಗಿ, ಈ ಬಗ್ಗೆ ತಮಿಳುನಾಡು ವಿಧಾನಸಭೆಯ ಕಾರ್ಯದರ್ಶಿಯನ್ನು ಸಂಪರ್ಕಿಸ ಬೇಕೆಂದು ಸೂಚಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next