Advertisement

ಜಯಲಕ್ಷ್ಮೀ ಕೋ-ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯನ್ನು ಬ್ಯಾಂಕ್‌ ಆಗಿಸೋಣ

04:25 PM Aug 01, 2017 | |

ಮುಂಬಯಿ: ಕರ್ಮ ಭೂಮಿಯಲ್ಲಿ ಸಾಂಘಿಕವಾಗಿ ಬೆಳೆದ ನಾವು ಮರಾಠಿಗರ ಸಹಯೋಗಕ್ಕೆ ಸದಾ ಋಣಿಯಾಗಿರಬೇಕು. ತಮ್ಮೆಲ್ಲರ ಸಹಕಾರ, ಸಮಾಜ ಬಂಧುಗಳ ಅನನ್ಯ ಸೇವೆಯಿಂದ ಒಂದೂವರೆ ದಶಕಗಳಿಂದಲೂ ಕಾರ್ಯನಿರತವಾಗಿರುವ  ಜಯಲಕ್ಷ್ಮೀ ಕ್ರೆಡಿಟ್‌ ಸೊಸೈಟಿಯನ್ನು ಶೀಘ್ರವೇ ಬ್ಯಾಂಕ್‌ನ್ನಾಗಿ  ಪರಿವರ್ತಿಸಬೇಕಾಗಿದೆ. ಇದಕ್ಕೆ ಒಕ್ಕಲಿಗರ ಸಂಘ ಹಾಗೂ ಜಯಲಕ್ಷ್ಮೀ ಸೊಸೈಟಿಯ ಸರ್ವ ಸದಸ್ಯರ ಹಿತೈಷಿಗಳ ಸಹಯೋಗ ಅತ್ಯವಶ್ಯವಾಗಿದೆ. ಆವಾಗಲೇ ಸಮಾಜದ ಆರ್ಥಿಕ ಶಕ್ತಿ ಬಲವರ್ಧನೆಗೊಳ್ಳುವುದು ಎಂದು ಕರ್ನಾಟಕದ ಕೆ. ಆರ್‌. ಪೇಟೆ ಶಾಸಕ, ಜಯಲಕ್ಷಿ¾à ಕೋ. ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ  ಕಾರ್ಯಾಧ್ಯಕ್ಷ ಡಾ| ನಾರಾಯಣ ಆರ್‌. ಗೌಡ ತಿಳಿಸಿದರು.

Advertisement

ಜು. 30 ರಂದು ಅಂಧೇರಿ ಪೂರ್ವದ ಜೆ. ಬಿ. ನಗರದ ಸತ್ಯನಾರಾಯಣ ಗೋಯೆಂಕಾ ಭವನ‌ದ‌ಲ್ಲಿ ಜರಗಿದ ಜಯಲಕ್ಷ್ಮೀ ಪಥಸಂಸ್ಥೆಯ17ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸೊಸೈಟಿಯ 2018-2021ನೇ  ಸಾಲಿಗೆ ನೂತನ ಕಾರ್ಯಾಧ್ಯಕ್ಷರನ್ನಾಗಿ ರಂಗಪ್ಪ ಸಿ. ಗೌಡ, ಉಪ ಕಾರ್ಯಾಧ್ಯಕ್ಷರಾಗಿ  ಎ. ಕೆಂಪೇ ಗೌಡ, ಕಾರ್ಯದರ್ಶಿಯಾಗಿ ಕೆ. ರಾಜೇ ಗೌಡ ಮತ್ತು ಕೋಶಾಧಿಕಾರಿಯಾಗಿ ಮುತ್ತೇ ಎಸ್‌. ಗೌಡ ಇವರನ್ನು ಸಭೆಯಲ್ಲಿ  ಆಯ್ಕೆಮಾಡಲಾಯಿತು. ಹೆಚ್ಚುವರಿ ನಿರ್ದೇಶಕರನ್ನಾಗಿ ಸುನೀಲ್‌ ಕೆ. ಅವಾಡ್‌ ಮತ್ತು ಸೂರತ್‌ ಎನ್‌. ಯಾದವ್‌ ಅವರನ್ನು ನೇಮಿಸಲಾಯಿತು. ನಿರ್ಗಮನ ಕಾರ್ಯಾಧ್ಯಕ್ಷ ನಾರಾಯಣ ಗೌಡ ಅವರು ನೂತನ ಪದಾಧಿಕಾರಿಗಳ ಹೆಸರು ಘೋಷಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಗೌರವ್ವಾನಿತ ಗಣ್ಯರು ಗಳಾಗಿ ಉದ್ಯಮಿಗಳಾದ ಸದ್ದು ಗಾಯಕ್ವಾಡ್‌, ಶಿವರಾಮ ಜೆ. ಗೌಡ, ಸುಂದರ ಪೂಜಾರಿ, ಜಯರಾಮ ಗೌಡ ಸಾಕಿನಾಕ ಹಾಗೂ ಸೊಸೆ„ಟಿಯ ಉಪಾಧ್ಯಕ್ಷ ಕೆ. ರಾಜೇ ಗೌಡ, ಕಾರ್ಯದರ್ಶಿ ರಂಗಪ್ಪ ಸಿ. ಗೌಡ, ನಿರ್ದೇಶಕರಾದ ಚಂದನ್‌ ಸಿ. ಚಾರಿ, ಮುತ್ತೇ ಎಸ್‌. ಗೌಡ, ಎ. ಕೆಂಪೇ ಗೌಡ (ರಾಮಣ್ಣ) ಗೊಂಡೇನಹಳ್ಳಿ, ಅನುಸೂಯಾ ಆರ್‌. ಗೌಡ, ದೇವಕಿ ನಾರಾಯಣ ಗೌಡ, ಸುನಂದಾ ಆರ್‌. ಗೌಡ, ರಾಹುಲ್‌ ಯು. ಲಗಡೆ ಮತ್ತು ಭಾರತಿ ಎಸ್‌. ಗಾಯಕ್ವಾಡ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು.  

ಸಭಿಕರ ಪರವಾಗಿ  ಪ್ರತಾಪ್‌ ಸಿಂಗ್‌ ಹಾಗೂ ಕಾಂಗ್ರೆಸ್‌ ನೇತಾರ ಚಂದ್ರ ಶೆಟ್ಟಿ ಸಲಹೆ, ಸೂಚನೆಗಳನ್ನು ನೀಡಿದರು.

Advertisement

ಒಕ್ಕಲಿಗರ ಧೀಶಕ್ತಿ ದೈವೈಕ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಮಹಾಗುರು ಮತ್ತು ಧನಲಕ್ಷ್ಮೀ ಮಾತೆಯ ಪ್ರತಿಮೆಗೆ ಮಲ್ಲಿಕಾರ್ಜುನ ಸ್ವಾಮೀಜಿ ಕಾಂಜೂರ್‌ಮಾರ್ಗ್‌ ಪೂಜೆ ನೆರವೇರಿಸಿ ಸಭೆಗೆ ಚಾಲನೆ ನೀಡಿದರು. ಮಹಿಳಾ ನಿರ್ದೇಶಕಿಯರು ಮಾತೆ ಜಯಲಕ್ಷ್ಮೀಗೆ ಆರತಿ ನೆರವೇರಿಸಿದರು.

ನೌಕರ ವೃಂದದ ಪ್ರದೀಪ್‌ಕುಮಾರ್‌ ಆರ್‌. ಗೌಡ, ಆಶಾರಾಣಿ ಬಿ. ಗೌಡ, ರವಿ ಎಸ್‌. ಗೌಡ, ಗಣೇಶ್‌ ಸಿ. ಗೌಡ ಹಾಗೂ ದೈನಂದಿನ ಹಣ ಸಂಗ್ರಹ ಪ್ರತಿನಿಧಿಗಳಾದ ಮಿನಲ್‌ ಪಿ. ದೌಂಡ್‌, ಮಂಜೇ ಎಂ. ಗೌಡ, ರವಿಕುಮಾರ್‌ ಎನ್‌. ಗೌಡ, ಪ್ರವೀಣ್‌ ಜಿ. ಧನವಡೆ, ಶಂಕರ್‌ ಆರ್‌. ಗೌಡ, ಸದಾಶಿವ ಎಸ್‌. ಸಫಲಿಗ, ಗೀತಾ ಕೆ. ಕರ್ಕೇರ ಉಪಸ್ಥಿತರಿದ್ದು  ಸದಸ್ಯರ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ವಿದ್ಯಾರ್ಥಿ ವೇತನ ವಿತರಿಸಿ ಸೊಸೈಟಿಯ ಉನ್ನತಿಗಾಗಿ ಶ್ರಮಿಸಿದ ಸರ್ವರ ಅನುಪಮ ಸೇವೆ ಪ್ರಶಂಸಿಸಿ ಅಭಿನಂದಿಸಿದರು.

ಸೊಸೈಟಿಯ ಪ್ರಬಂಧಕ ಪರಶುರಾಮ್‌ ಕೆ. ದೌಂಡ್‌ ಸ್ವಾಗತಿಸಿ ಗತ ಸಾಲಿನ ವಾರ್ಷಿಕ ಮಹಾಸಭೆಯ ವರದಿ ವಾಚಿಸಿದರು. ಮಾ| ಪ್ರಜ್ವಲ್‌ ಗೌಡ ಹಾಗೂ ಕು| ಭೂಮಿಕಾ ಗೌಡ ಗಣೇಶಸ್ತುತಿಗೈದರು. 

ಲೆಕ್ಕಾಧಿಕಾರಿ ಶಿಲ್ಪಾ ಎಸ್‌. ಮಾಂಡವಾRರ್‌ ಲೆಕ್ಕಪತ್ರಗಳ ಮಾಹಿತಿಯನ್ನಿತ್ತರು. ಆಶಾರಾಣಿ ಬಿ. ಗೌಡ  ವಾರ್ಷಿಕ ಕಾರ್ಯಚಟುವಟಿಕೆಗಳ ವಿವರ ನೀಡಿದರು. ಪ್ರಕಾಶ್‌ ಎನ್‌. ವಾಡ್ಕರ್‌ ಅವರು ಅಂತರಿಕ ಲೆಕ್ಕಪತ್ರಗಳ ಮತ್ತು ವಾರ್ಷಿಕ ವ್ಯವಹಾರದ ಮಾಹಿತಿ ನೀಡಿದರು. ಶಿವಕುಮಾರ್‌ ಎಚ್‌. ಗೌಡ ವಾರ್ಷಿಕ ಬಜೆಟ್‌ ಮಂಡಿಸಿದರು.  ಕೆ.ರಾಜೇ ಗೌಡ ಸಭಾ ಕಲಾಪ ನಿರ್ವಹಿಸಿ ಅತಿಥಿಗಳನ್ನು ಪರಿಚಯಿಸಿ ಕೃತಜ್ಞತೆ  ಸಲ್ಲಿಸಿದರು.

ಸಹಕಾರಿ ಸಂಸ್ಥೆಗಳು ಆರ್ಥಿಕ ಸಬಲತೆಗೆ ಸ್ಪಂದಿಸಿದಾಗಲೇ ಇಡೀ  ಸಮಾಜದ‌ ಉನ್ನತಿ ಸಾಧ್ಯವಾಗುವುದು. ಆದುದರಿಂದ ಭವಿಷ್ಯತ್ತಿನ ಜನಾಂಗವನ್ನೇ ಕೇಂದ್ರೀಕರಿಸಿ ಯುವಜನತೆಯಲ್ಲಿ ಆರ್ಥಿಕ ವ್ಯವಸ್ಥೆಯನ್ನು ರೂಪಿಸುವುದರ ಜೊತೆಗೆ ಸ್ವಂತಿಕೆಯ ಬ್ಯಾಂಕನ್ನು ರಚಿಸುವ ಉದ್ದೇಶ ನಾವಿರಿಸಿದ್ದೇವೆ.  ಈ ಮೂಲಕ  ಯುವ ಪೀಳಿಗೆಗೆ ಕೇವಲ ಆರ್ಥಿಕ ನೆರವು ನೀಡುವುದು ಮಾತ್ರವಲ್ಲದೆ ಸ್ವತಂತ್ರ ಉದ್ಯಮಿಗಳಾಗುವ ಮನೋಭಾವ ಮೂಡಿಸಿ ಪ್ರೋತ್ಸಾಹಿಸುವ ಉದ್ದೇಶ ನಮ್ಮ ಪಥ ಸಂಸ್ಥೆ ಹೊಂದಿದೆ. ಇಂತಹ ಮಹಾನ್‌ ಯೋಜನೆಗೆ ಸ್ವಸಮುದಾಯವಾದ ಒಕ್ಕಲಿಗ ಬಂಧು ಗಳೆಲ್ಲರೂ ಸ್ಪಂದಿಸಬೇಕು.  ಶೆೇರು ದಾರರಿಗೆ ಈ ಬಾರಿಯೂ ಸೊಸೈಟಿಯು ಶೇ. 9 ರಷ್ಟು ಡಿವಿಡೆಂಡ್‌  ನೀಡಲಿದೆ 

– ರಂಗಪ್ಪ ಸಿ. ಗೌಡ (ನೂತನ ಕಾರ್ಯಾಧ್ಯಕ್ಷ :  ಜಯಲಕ್ಷ್ಮೀ ಕೋ. ಆಪರೇಟಿವ್‌ ಕ್ರೆಡಿಟ್‌ ಸೊಸೈಟಿ)

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next