ಜಾನಪದ ಕ್ರೀಡೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ಕರಾವಳಿ ಕಾಲೇಜು ಸಮೂಹ ಸಂಸ್ಥೆಗಳ ಅಧ್ಯಕ್ಷ ಗಣೇಶ್ ರಾವ್ ಎಸ್. ಹೇಳಿದರು.
Advertisement
ಮನ್ಕುತೋಟ ಗುತ್ತು ದಿ| ಜೆ. ಜಯ ಗಂಗಾಧರ ಶೆಟ್ಟಿ ಅವರ ಸ್ಮಾರಕಾರ್ಥ ಜಪ್ಪಿನಮೊಗರು ನೇತ್ರಾವತಿ ನದಿ ತೀರದಲ್ಲಿ ರವಿವಾರ ಆಯೋಜಿಸಿದ್ದ ಹೊನಲು ಬೆಳಕಿನ ಜಯ- ವಿಜಯ ಜೋಡುಕರೆ ಕಂಬಳದ ಉದ್ಘಾಟನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಕಾರ್ಯದರ್ಶಿ ಎಂ. ಸುಂದರ ಶೆಟ್ಟಿ ಮಾತನಾಡಿ, ದಿ| ಜಯ ಗಂಗಾಧರ ಶೆಟ್ಟಿ ಅವರು ಕಂರ್ಬಿಸ್ಥಾನ ವೈದ್ಯನಾಥ ದೈವಸ್ಥಾನದ ಆಡಳಿತ ಮೊಕ್ತೇಸರರಾಗಿ 40 ವರ್ಷ ಸೇವೆ ಸಲ್ಲಿಸುವ ಮೂಲಕ ಕಂರ್ಬಿಸ್ಥಾನ ವೈದ್ಯನಾಥ ದೈವಸ್ಥಾನದ ಜೀರ್ಣೋದ್ಧಾರದ ರೂವಾರಿಯಾಗಿ ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದರು. ಜಾತಿ, ಮತ, ಧರ್ಮ ಮರೆತು ಎಲ್ಲರೊಂದಿಗೆ ಒಡನಾಟ ಹೊಂದಿದ್ದ ಜಯ ಗಂಗಾಧರ ಶೆಟ್ಟಿ ಅವರ ಸ್ಮರಣಾರ್ಥ ಆರನೇ ವರ್ಷದ ಕಂಬಳ ಆಯೋಜಿಸಿದ್ದೇವೆ ಎಂದರು.
Related Articles
ಕಾರ್ಯಕ್ರಮವನ್ನು ದೇರೆಬೈಲ್ ವಿಟ್ಠಲ ದಾಸ್ ತಂತ್ರಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್, ಬಿಜೆಪಿ ಮುಖಂಡ ಬದ್ರಿನಾಥ ಕಾಮತ್, ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಕಾರ್ಯದರ್ಶಿ ಎಂ. ಸುಂದರ ಶೆಟ್ಟಿ, ಕಂಕನಾಡಿ ಶ್ರೀ ಬೈದರ್ಕಳ ಕ್ಷೇತ್ರ ಗರೋಡಿ ಅಧ್ಯಕ್ಷ ಚಿತ್ತರಂಜನ್ ಗರೋಡಿ, ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನ ಮಾಜಿ ಆಡಳಿತ ಮೊಕ್ತೇಸರ ಬಾಲಕೃಷ್ಣ ಕೊಟ್ಟಾರಿ, ಹರಿಯಪ್ಪ ಶೆಟ್ಟಿ, ರಾಮಕೃಷ್ಣ ಕಡೆಕಾರ್, ಭುಜಂಗ ಶೆಟ್ಟಿ, ಟಿ. ಪ್ರವೀಣ್ ಚಂದ್ರ ಆಳ್ವ, ಪಿ.ಆರ್. ಶೆಟ್ಟಿ ಸಹಿತ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
Advertisement
ಮಕ್ಕಳಲ್ಲಿ ಉತ್ಸಾಹಕಂಬಳವನ್ನು ವೀಕ್ಷಿಸಲು ಈ ಬಾರಿ ಸುತ್ತಮುತ್ತಲಿನ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ರವಿವಾರ ಶಾಲಾ ಕಾಲೇಜುಗಳಿಗೆ ರಜಾ ದಿನವಾದ್ದರಿಂದ ಮಕ್ಕಳ ಸಂಖ್ಯೆ ಹೆಚ್ಚಾಗಿತ್ತು. 90 ಜೋಡಿ ಕೋಣಗಳು ಭಾಗಿ
ಜಪ್ಪಿನಮೊಗರಿನಲ್ಲಿ ನಡೆದ ಹೊನಲು ಬೆಳಕಿನ ಜಯ-ವಿಜಯ ಜೋಡುಕರೆ ಕಂಬಳದಲ್ಲಿ 90 ಜೋಡಿ ಕೋಣಗಳು ಭಾಗವಹಿಸಿದ್ದವು.