Advertisement

ಮೀಸಲಾತಿ ಸಿಕ್ಕರೆ ಅಭಿನಂದನೆ ಇಲ್ಲವಾದಲ್ಲಿ ಧರಣಿ ಮುಂದುವರಿಕೆ : ಜಯ ಮೃತ್ಯುಂಜಯ ಸ್ವಾಮೀಜಿ

07:08 PM Sep 01, 2021 | Team Udayavani |

ಚಿಕ್ಕಮಗಳೂರು : ಪಂಚಮಸಾಲಿ ಲಿಂಗಾಯಿತ ಸಮುದಾಯಕ್ಕೆ 2ಎ ಮೀಸಲಾತಿ ಸರ್ಕಾರ ಕೇಳಿದ ಅವಧಿಯೊಳಗೆ ಸಿಗುತ್ತದೆ ಎಂಬ ನಂಬಿಕೆ ಇದೆ ಒಂದು ವೇಳೆ ಮೀಸಲಾತಿ ಕೊಡುವುದು ತಡವಾದರೆ ಅಂದು ನಿಂತ ಧರಣಿ ಮತ್ತೆ ಆರಂಭವಾಗಲಿದೆ ಎಂದು ಜಯ ಮೃತ್ಯುಂಜಯ ಸ್ವಾಮೀಜಿ ಸರಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

Advertisement

ಚಿಕ್ಕಮಗಳೂರಿನಲ್ಲಿ ಮೀಸಲಾತಿ ವಿಚಾರವಾಗಿ ಮಾತನಾಡಿದ ಸ್ವಾಮೀಜಿಗಳು, ಮುಖ್ಯಮಂತ್ರಿ ಬೊಮ್ಮಾಯಿ ಅವರ ಮೇಲೆ ಸಂಪೂರ್ಣ ವಿಶ್ವಾಸವಿದೆ, ನಮ್ಮ ಪಾದಯಾತ್ರೆಗೆ ಬೆಂಬಲ ಕೊಟ್ಟ ಸಚಿವರಲ್ಲಿ ಬೊಮ್ಮಾಯಿ ಕೂಡ ಒಬ್ಬರು, ಈ ಸಮುದಾಯದ ಕಷ್ಟ-ಸುಖ-ನೋವು, ವಿದ್ಯಾರ್ಥಿಗಳ ಬವಣೆ ಏನೆಂಬುದು ಅವರಿಗೆ ಗೊತ್ತು ಅವರೇ ಬಂದು ಆಶೀರ್ವಾದ ಪಡೆದು ವಿಶ್ವಾಸವಿಡಿ ಮಾಡಿಕೊಡುತ್ತೇನೆ ಎಂದಿದ್ದಾರೆ.

ನಮ್ಮ ಅಭಿಯಾನವು 1ನೇ ತಾರೀಖಿನಂದು ಬೆಂಗಳೂರು ತಲುಪಲಿದೆ ಅಂದು ಮೀಸಲಾಗಿತಿ ಸಿಕ್ಕರೆ ಅಭಿನಂದನಾ ಸಮಾರಂಭ ನಡೆಸುತ್ತೇವೆ , ಒಂದು ವೇಳೆ ಸಿಗದಿದ್ದರೆ ಧರಣಿ ಮುಂದುವರಿಕೆ ಅನಿವಾರ್ಯ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ :ಏರ್‌ ಇಂಡಿಯಾ ಖರೀದಿದಾರರಿಗೆ ಕಾನೂನು ಕಟ್ಟಳೆಗಳಿಂದ ವಿನಾಯಿತಿ : ಕೇಂದ್ರ ಸರ್ಕಾರದ ಕೊಡುಗೆ

Advertisement

Udayavani is now on Telegram. Click here to join our channel and stay updated with the latest news.

Next