Advertisement

Property: ಜಯಾ, ಅಮಿತಾಬ್‌ ಆಸ್ತಿ 1578 ಕೋಟಿ

12:22 AM Feb 15, 2024 | Team Udayavani |

ಲಕ್ನೋ: ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಅಭ್ಯರ್ಥಿಯಾಗಿರುವ ಜಯಾ ಬಚ್ಚನ್‌ ಮತ್ತು ಪತಿ-ನಟ ಅಮಿತಾಭ್‌ ಬಚ್ಚನ್‌ ಅವರು ಒಟ್ಟು 1578 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ದಂಪತಿ ಬಳಿ 17 ಐಷಾರಾಮಿ ಕಾರುಗಳು, 130 ಕೋಟಿ ರೂ.ಗೂ ಅಧಿಕ ಬ್ಯಾಂಕ್‌ ಠೇವಣಿ, ಚಿನ್ನಾಭರಣ ಹೊಂದಿದ್ದಾರೆ.

Advertisement

ಈ ಬಗ್ಗೆ ಅವರು ಮಂಗಳವಾರ ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಈ ಅಂಶವನ್ನು ಉಲ್ಲೇಖೀಸಿದ್ದಾರೆ. 2022-23ನೇ ಸಾಲಿನಲ್ಲಿ ಜಯಾ ಬಚ್ಚನ್‌ ಅವರು 1.63 ಕೋಟಿ ರೂ. ಮೌಲ್ಯದ ವೈಯಕ್ತಿಕ ಆಸ್ತಿ ಹೊಂದಿರುವ ಬಗ್ಗೆ ಘೋಷಣೆ ಮಾಡಿದ್ದರು. ಅದೇ ವರ್ಷ ಅವರ ಪತಿ ಅಮಿತಾಭ್‌ ಬಚ್ಚನ್‌ ಅವರು 273. 74 ಕೋಟಿ ರೂ. ಮೊತ್ತದ ಆಸ್ತಿಯನ್ನು ಹೊಂದಿದ್ದಾರೆ. ಜಯಾ ಬಚ್ಚನ್‌ 10 ಕೋಟಿ ರೂ, ಅಮಿತಾಭ್‌ 120. 45 ಕೋಟಿ ರೂ. ಮೊತ್ತವನ್ನು ಬ್ಯಾಂಕ್‌ನಲ್ಲಿ ಠೇವಣಿಯಾಗಿ ಇರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next