ಹೊಸದಿಲ್ಲಿ: ಐಪಿಎಲ್ 2023ರ ಫೈನಲ್ ನಲ್ಲಿ ಏಷ್ಯಾ ಕಪ್ ಆತಿಥ್ಯ ವಹಿಸುವ ದೇಶ ಅಥವಾ ದೇಶಗಳ ಕುರಿತು ಅಂತಿಮ ನಿರ್ಧಾರವನ್ನು ತೆಗೆದು ಕೊಳ್ಳಲಾಗುವುದು, ಇದರಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಉನ್ನತ ಗಣ್ಯರು ಭಾಗವಹಿಸಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ ಶಾ ಗುರುವಾರ ಹೇಳಿದರು.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಏಷ್ಯಾ ಕಪ್ 2023 ಅನ್ನು ಆಯೋಜಿಸಲು ‘ಹೈಬ್ರಿಡ್ ಮಾದರಿ’ಯನ್ನು ಪ್ರಸ್ತಾಪಿಸಿದೆ. ಭಾರತದ ಪಂದ್ಯಗಳು ದುಬೈ ಅಥವಾ ಶ್ರೀಲಂಕಾದಲ್ಲಿ ನಡೆಯಲಿದ್ದು, ಉಳಿದ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿವೆ.
“ಸದ್ಯದಂತೆ, ಏಷ್ಯಾ ಕಪ್ ನ ಆತಿಥ್ಯಕ್ಕೆ ಸಂಬಂಧಿಸಿದಂತೆ ನಿರ್ಧಾರವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ನಾವು ಐಪಿಎಲ್‌ನಲ್ಲಿ ಬ್ಯುಸಿಯಾಗಿದ್ದೇವೆ. ಶ್ರೀಲಂಕಾ ಕ್ರಿಕೆಟ್, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಉನ್ನತ ಗಣ್ಯರು ಐಪಿಎಲ್ ಫೈನಲ್ ವೀಕ್ಷಿಸಲು ಬರುತ್ತಿದ್ದಾರೆ. ನಾವು ಚರ್ಚೆ ನಡೆಸಿ ಸೂಕ್ತ ಸಮಯದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಜಯ್ ಶಾ ಪಿಟಿಐಗೆ ತಿಳಿಸಿದ್ದಾರೆ.
ಇದನ್ನೂ ಓದಿ:ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮನ್ ಗೆ Z+ ಭದ್ರತೆ: Z+ ಸೆಕ್ಯುರಿಟಿ ಎಂದರೇನು?
ಭಾರತೀಯ ಕ್ರಿಕೆಟ್ ತಂಡವು ಕೇಂದ್ರ ಸರ್ಕಾರದ ಅನುಮತಿಯಿಲ್ಲದೆ ನೆರೆಯ ದೇಶಕ್ಕೆ ಪ್ರಯಾಣಿಸದ ಕಾರಣ, ಪಿಸಿಬಿ ಅಧ್ಯಕ್ಷ ನಜಮ್ ಸೇಥಿ ಅವರು ತಮ್ಮ ದೇಶದಲ್ಲಿ ನಾಲ್ಕು ಪಂದ್ಯಗಳನ್ನು ಆಯೋಜಿಸುವ ‘ಹೈಬ್ರಿಡ್ ಮಾದರಿ’ಯನ್ನು ಪ್ರಸ್ತಾಪಿಸಿದ್ದರು.