Advertisement

ಸಹಾಯಕ್ ಪದ್ಧತಿ ಮಾಹಿತಿ ಬಯಲುಗೊಳಿಸಿದ್ದ ಯೋಧ ಶವವಾಗಿ ಪತ್ತೆ

06:55 PM Mar 03, 2017 | Team Udayavani |

ಮುಂಬೈ: ಖಾಸಗಿ ವೆಬ್ ಸೈಟ್ ವೊಂದು ಇತ್ತೀಚೆಗೆ ನಡೆಸಿದ್ದ ಕುಟುಕು ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯಲ್ಲಿ ಈಗಲೂ ಬ್ರಿಟಿಷ್ ಕಾಲದಲ್ಲಿ ಚಾಲ್ತಿಗೆ ಬಂದಿದ್ದ “ಸಹಾಯಕ್’ ಪದ್ಧತಿಯ ಕುರಿತ ಮಾಹಿತಿ ಬಯಲು ಮಾಡಿದ್ದ 33 ವರ್ಷದ ಯೋಧ ನಿಗೂಢವಾಗಿ ಸಾವನ್ನಪ್ಪಿರುವ ಅಂಶ ಬೆಳಕಿಗೆ ಬಂದಿದೆ.

Advertisement

ಮಹಾರಾಷ್ಟ್ರದ ದಿಯೋಲಾಲಿ ಕಂಟೋನ್ಮೆಂಟ್ ನಲ್ಲಿ ಕೇರಳ ಮೂಲದ ರಾಯ್ ಮ್ಯಾಥ್ಯೂ(33ವರ್ಷ) ಗನ್ನರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ರಾಯ್ ಭಾರತೀಯ ಸೇನೆಯಲ್ಲಿರುವ ಸಹಾಯಕ್ (ಗುಲಾಮಗಿರಿ) ಪದ್ಧತಿ ಬಗ್ಗೆ ಅಭಿಪ್ರಾಯವ್ಯಕ್ತಪಡಿಸಿದ್ದ.

ಬಳಿಕ ಕಳೆದ ಶನಿವಾರದಿಂದ ರಾಯ್ ಮ್ಯಾಥ್ಯೂ ನಿಗೂಢವಾಗಿ ನಾಪತ್ತೆಯಾಗಿದ್ದ, ಶನಿವಾರ ಬ್ಯಾರಕ್ಸ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ರಾಯ್ ಶವ ಪತ್ತೆಯಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಸೇನೆಯಲ್ಲಿ ಅಧಿಕಾರಿಗಳು ಸಹಾಯಕ್ ಪದ್ಧತಿಯನ್ನು ಹೇಗೆ ಜೀವಂತವಾಗಿರಿಸಿಕೊಂಡಿದ್ದಾರೆ ಎಂಬ ವಿವರವನ್ನು ರಾಯ್ ಬಿಚ್ಚಿಟ್ಟಿದ್ದ. ತಮ್ಮ ಹಿರಿಯ ಅಧಿಕಾರಿಗಳ ಮನೆಯ ನಾಯಿ ಜೊತೆ ಯೋಧರು ಹೋಗುವ, ಬಟ್ಟೆಗಳನ್ನು ಶುಚಿಗೊಳಿಸುವ ಹಾಗೂ ಅಧಿಕಾರಿಗಳ ಮಕ್ಕಳನ್ನು ಶಾಲೆಗೆ ಬಿಟ್ಟು ಬರುವ ವಿವರ ಹೊರಹಾಕಿದ್ದರು.

ಸೇನೆಯಲ್ಲಿ ಅಧಿಕಾರಿಗಳು ಯೋಧರನ್ನು ಈ ರೀತಿ ಸಹಾಯಕ್ ಹೆಸರಿನಲ್ಲಿ ಗುಲಾಮರನ್ನಾಗಿ ಬಳಸಿಕೊಳ್ಳುತ್ತಿದ್ದಾರೆಂದು ತೀವ್ರ ವಿವಾದಕ್ಕೆ ಒಳಗಾಗಿತ್ತು. 

ರಾಯ್ ಆತ್ಮಹತ್ಯೆಗೆ ಶರಣಾಗಿರುವುದಾಗಿ ರಕ್ಷಣಾ ಸಚಿವಾಲಯ ತಿಳಿಸಿದೆ. ಅಷ್ಟೇ ಅಲ್ಲ ಸಹಾಯಕ್ ಪದ್ಧತಿ ಬಗ್ಗೆ ಏನೂ ಗೊತ್ತಿಲ್ಲದ ರಾಯ್ ಬಳಿ ಸರಣಿಯಾಗಿ ಮಾಧ್ಯಮದವರು ಪ್ರಶ್ನೆಗಳನ್ನು ಕೇಳಿದ್ದರ ಪರಿಣಾಮ ನೇಣಿಗೆ ಶರಣಾಗಿರುವ ಸಾಧ್ಯತೆ ಇದ್ದಿರುವುದಾಗಿ ಪ್ರಾಥಮಿಕ ತನಿಖಾ ವರದಿಯಿಂದ ತಿಳಿದು ಬಂದಿದೆ ಎಂದು ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next