ಮುಂಬಯಿ: ಜುಹೂ-ಅಂಧೇರಿ -ವಸೋìವಾ-ವಿಲೇಪಾರ್ಲೆ ಪರಿಸರದಲ್ಲಿ ಆರ್ಥಿಕವಾಗಿ ತೊಂದರೆಯಲ್ಲಿರುವ ಬಂಟ ಬಾಂಧವರ ಏಳ್ಗೆಗಾಗಿ ಶ್ರಮಿಸುತ್ತಿರುವ ಜವಾಬ್ 22 ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ, ಹಾಗೂ ಇತರ ಸೇವೆಗಳ ಮೂಲಕ ಜವಾಬ್ ಪರಿವಾರದ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಜವಾಬ್ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ ನುಡಿದರು.
ಜ. 5 ರಂದು ಅಂಧೇರಿ ಪಶ್ಚಿಮದ ಗ್ರೀನ್ ಎಕರ್ ಸಮೀಪದ ಲೋಖಂಡ್‌ವಾಲಾ ಕಾಂಪ್ಲೆಕ್ಸ್ ರೆಸಿಡೆಂಟ್ಸ್ ಅಸೋಸಿಯೇಶನ್ ಮೈದಾನದಲ್ಲಿ ದಿ| ನ್ಯಾಯವಾದಿ ಆನಂದ ವಿ. ಶೆಟ್ಟಿ ವೇದಿಕೆಯಲ್ಲಿ ಜರಗಿದ ಜವಾಬ್‌ನ 22 ನೇ ವಾರ್ಷಿಕ ಸ್ನೇಹ ಸಮ್ಮಿಲನ ಅಧ್ಯಕ್ಷತೆ ವಹಿಸಿ ಮಾತನಾಡಿ, 22 ವರ್ಷಗಳ ಸುದೀರ್ಘ ಅವಧಿಯಲ್ಲಿ ಜವಾಬ್ ಅಭಿವೃದ್ದಿಗೆ ಕಾರಣರಾದ ಮಾಜಿ ಅಧ್ಯಕ್ಷರುಗಳು, ವಿಶ್ವಸ್ಥರು, ಕಾರ್ಯಕಾರಿ ಸಮಿತಿ ಸದಸ್ಯರ ಅವಿರತ ಪರಿಶ್ರಮದ ಕಾರ್ಯ ಅಭಿನಂದನೀಯವಾಗಿದೆ ಎಂದು ನುಡಿದು ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸಿದ ಅವರು, ಜವಾಬ್ ಪರಿವಾರದ ಮಹಿಳೆಯರು ಮತ್ತು ಯುವಕರ ಆಸಕ್ತಿ ಸ್ಪೂರ್ತಿದಾಯಕವಾಗಿದೆ. ಮಹಿಳೆಯರಿಗಾಗಿ ಮಹಿಳಾ ವಿಭಾಗ, ಯುವ-ಯುವತಿಯರಿಗಾಗಿ ಯುವ ವಿಭಾಗವನ್ನು ಈಗಾಗಲೇ ಆರಂಭಿಸಲಾಗಿದ್ದು, ಎರಡೂ ವಿಭಾಗಗಳು ಜವಾಬ್ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿದೆ. ವಾರ್ಷಿಕ ಸ್ನೇಹ ಸಮ್ಮಿಲನಕ್ಕೆ ಆಗಮಿಸಿದ ಜವಾಬ್ ಪರಿವಾರಕ್ಕೆ, ಆಮಂತ್ರಿತರಿಗೆ ಕೃತಜ್ಞತೆ ಸಲ್ಲಿಸಿ ಎಲ್ಲರ ಸಹಕಾರ ಸದಾಯಿರಲಿ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಜವಾಬ್‌ನ ಮಾಜಿ ಅಧ್ಯಕ್ಷ, ವಿಶ್ವಸ್ಥ, ವಿಸ್ವಾತ್ ಕೆಮಿಕಲ್ಸ್‌ನ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಬಿ. ವಿವೇಕ್ ಶೆಟ್ಟಿ, ಪ್ರತಿಷ್ಠಿತ ಆರ್ಯಭಟ ಪ್ರಶಸ್ತಿ ಪುರಸ್ಕೃತ ಹುರ್ಲಾಡಿ ರಘುವೀರ್ ಶೆಟ್ಟಿ, ತುಂಗಾ ಹಾಸ್ಪಿಟಲ್‌ನ ರಾಜೇಶ್ ಬಿ. ಶೆಟ್ಟಿ ಇವರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಮ್ಮಾನಿಸಿ ಶುಭಹಾರೈಸಿದರು.
ವಿಶೇಷ ಆಮಂತ್ರಿತರುಗಳಾಗಿ ಆಗಮಿಸಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ, ಬೋಂಬೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ನ್ಯಾಯವಾದಿ ಸುಭಾಶ್ ಬಿ. ಶೆಟ್ಟಿ, ಬಂಟರ ಸಂಘ ಮುಂಬಯಿ ಮಾಜಿ ಅಧ್ಯಕ್ಷ ಹಾಗೂ ಬಂಟ್ಸ್ ನ್ಯಾಯ ಮಂಡಳಿಯ ಗೌರವಾಧ್ಯಕ್ಷ ಎಂ. ಡಿ. ಶೆಟ್ಟಿ, ಬಂಟರ ಸಂಘ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್. ಹೆಗ್ಡೆ, ಮುಲುಂಡ್ ಬಂಟ್ಸ್‌ನ ಉಪಾಧ್ಯಕ್ಷ ಪಲಿಮಾರು ವಸಂತ್ ಶೆಟ್ಟಿ, ಮಾತೃಭೂಮಿ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು, ಆಹಾರ್‌ನ ಅಧ್ಯಕ್ಷ ಸಂತೋಷ್ ಶೆಟ್ಟಿ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷ ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ಬಂಟ್ಸ್ ಛೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟಿÅàಸ್ ಅಧ್ಯಕ್ಷ ಕೆ. ಸಿ. ಶೆಟ್ಟಿ, ಬೋಂಬೆ ಬಂಟ್ಸ್ ಅಸೋಸಿಯೇಶನ್ ಉನ್ನತ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ನ್ಯಾಯವಾದಿ ರತ್ನಾಕರ ವಿ. ಶೆಟ್ಟಿ, ಬಂಟ್ಸ್ ಲಾ ಫಾರಂ ಅಧ್ಯಕ್ಷ ನ್ಯಾಯವಾದಿ ಡಿ. ಕೆ. ಶೆಟ್ಟಿ, ಮೀರಾ-ಡಹಾಣೂ ಬಂಟ್ಸ್‌ನ ಗೌರವಾಧ್ಯಕ್ಷ ವಿರಾರ್ ಶಂಕರ್ ಶೆಟ್ಟಿ, ಬಂಟ್ಸ್ ಫಾರಂ ಮೀರಾರೋಡ್ ಇದರ ಗೌರವಾಧ್ಯಕ್ಷ ಐ. ಚಂದ್ರಹಾಸ್ ಶೆಟ್ಟಿ, ಪ್ಲಾಟಿನಂ ಗ್ರೂಪ್ ಆಫ್ ಕನ್‌ಸ್ಟÅಕ್ಷನ್‌ನ ವಾಸ್ತವ್ ವಕೀಲ್, ಅಂಧೇರಿ ಪಾನೇರಿ ಸಾರೀಸ್‌ನ ಜಯೇಶ್ ಶೆಟ್ಟಿ, ಜವಾಬ್‌ನ ವಿಶ್ವಸ್ಥರುಗಳಾದ ರಘು ಎಲ್. ಶೆಟ್ಟಿ, ಬಿ. ವಿವೇಕ್ ಶೆಟ್ಟಿ, ಜಯರಾಮ ಎನ್. ಶೆಟ್ಟಿ, ಮಹೇಶ್ ಎಸ್. ಶೆಟ್ಟಿ, ರಮೇಶ್ ಯು. ಶೆಟ್ಟಿ, ಬಿ. ಆರ್. ಪೂಂಜಾ, ಆನಂದ ಪಿ. ಶೆಟ್ಟಿ, ಸಿಎ ರವೀಂದ್ರ ಎನ್. ಶೆಟ್ಟಿ, ರತ್ನಾಕರ ರೈ, ರಘುರಾಮ ಕೆ. ಶೆಟ್ಟಿ, ಶೇಖರ್ ಎ. ಶೆಟ್ಟಿ, ನಾಗೇಶ್ ಎನ್. ಶೆಟ್ಟಿ, ಪಾಂಡುರಂಗ ಎನ್. ಶೆಟ್ಟಿ, ಅಶೋಕ್ ಕುಮಾರ್ ರಾಜು ಶೆಟ್ಟಿ, ಸ್ನೇಹ ಸಮ್ಮಿಲನ ಪ್ರಾಯೋಜಕರಾದ ಅರುಣ್ ಎಸ್. ಶೆಟ್ಟಿ, ಸಂತೋಷ್ ಜಿ. ಶೆಟ್ಟಿ, ರತ್ನಾಕರ ಶೆಟ್ಟಿ, ಕ್ಯಾಪ್ಟನ್ ಸರ್ವೋತ್ತಮ ಶೆಟ್ಟಿ, ಸತೀಶ್ ಶೆಟ್ಟಿ ಪೆನಿನ್ಸೂಲಾ ಇವರನ್ನು ಗೌರವಿಸಲಾಯಿತು.
ಆರಂಭದಲ್ಲಿ ಅಧ್ಯಕ್ಷರು, ನಿಕಟಪೂರ್ವ ಅಧ್ಯಕ್ಷರು, ಪದಾಧಿಕಾರಿಗಳು ಜ್ಯೋತಿ ಬೆಳಗಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಜ್ಯೋತಿ ರಮಣ್ ಶೆಟ್ಟಿ, ಸುಜಾತಾ ಶೆಟ್ಟಿ ಪ್ರಾರ್ಥನೆಗೈದರು. ಜವಾಬ್ ಉಪಾಧ್ಯಕ್ಷ ಸಿಎ ಐ. ಆರ್. ಶೆಟ್ಟಿ ಜವಾಬ್ ಪರಿವಾರದ ಧ್ಯೇಯೋದ್ಧೇಶಗಳ ಬಗ್ಗೆ ವಿವರಿಸಿ ಸ್ವಾಗತಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಶೆಟ್ಟಿ ಜವಾಬ್‌ನ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿದರು.
ಸ್ನೇಹ ಸಮ್ಮಿಲನ ಸಮಾರಂಭವನ್ನು ಕವಿತಾ ಐ. ಆರ್. ಶೆಟ್ಟಿ ನಿರ್ವಹಿಸಿದರು. ಜವಾಬ್ ಕೋಶಾಧಿಕಾರಿ ಅಶೋಕ್ ಕುಮಾರ್ ರಾಜು ಶೆಟ್ಟಿ ವಂದಿಸಿದರು. ಜವಾಬ್ ಪರಿವಾರದ ಸದಸ್ಯರು ಹಾಗೂ ಮಕ್ಕಳಿಂದ ನೃತ್ಯ ವೈವಿಧ್ಯ ನಡೆಯಿತು. ಮಾಜಿ ಅಧ್ಯಕ್ಷ ಶಂಕರ್ ಟಿ. ಶೆಟ್ಟಿ, ಸತ್ಯಶಾಲಿನಿ ಅಶೋಕ್ ಶೆಟ್ಟಿ, ಸುನೀತಾ ವೆಂಕಟೇಶ್ ಶೆಟ್ಟಿ, ಸುಮತಿ ರಘುರಾಮ ಶೆಟ್ಟಿ ಅವರು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರ್ವಹಿಸಿದರು.
ಜವಾಬ್ ಪರಿವಾರದ ದೈವ ಭಂಡಾರ ಮೆರವಣಿಗೆ ಬಂದ ಆನಂತರ ದೈವದ ನುಡಿ, ದೈವ ನಲಿಕೆ ನಡೆಯಿತು. ಜವಾಬ್‌ನ ಮಾಜಿ ಅಧ್ಯಕ್ಷ ಶಂಕರ್ ಟಿ. ಶೆಟ್ಟಿ ದೈವ ಮದಿಪು ನುಡಿದರು. ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಮಧುಕರ ಎ. ಶೆಟ್ಟಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಶಿವರಾಮ ನಾಯ್ಕ, ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ಉಪಾಧ್ಯಕ್ಷ ಸಿಎ ಐ. ಆರ್. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಶೆಟ್ಟಿ ಕೆ., ಗೌರವ ಕೋಶಾಧಿಕಾರಿ ಅಶೋಕ್ ಕುಮಾರ್ ಆರ್. ಶೆಟ್ಟಿ, ಜತೆ ಕಾರ್ಯದರ್ಶಿ ಟಿ. ವಿಶ್ವನಾಥ ಶೆಟ್ಟಿ, ಜತೆ ಕೋಶಾಧಿಕಾರಿ ಶೇಖರ್ ಹೆಗ್ಡೆ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಮಧುಕರ ಎ. ಶೆಟ್ಟಿ, ಉಪಸ್ಥಿತರಿದ್ದರು. ಸಮಾರಂಭದ ಬಳಿಕ ಮನಿಷಾ ಕ್ಯಾಟರರ್ನ ವಾಮನ್ ಶೆಟ್ಟಿ ತಂಡದವರಿಂತ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಬಂಟ ಬಾಂಧವರು ಉಪಸ್ಥಿತರಿದ್ದರು.
ಚಿತ್ರ-ವರದಿ: ಪ್ರೇಮನಾಥ್ ಶೆಟ್ಟಿ ಮುಂಡ್ಕೂರು