Advertisement

ಜವಾಬ್‌ ವತಿಯಿಂದ ಡಾ|ಹರೀಶ್‌ ಶೆಟ್ಟಿ ಇವರಿಂದ ವಿಶೇಷ ಉಪನ್ಯಾಸ

09:03 PM Mar 26, 2019 | Vishnu Das |

ಮುಂಬಯಿ: ಜುಹೂ-ಅಂಧೇರಿ-ವಸೋìವಾ-ವಿಲೇಪಾರ್ಲೆ ಅಸೋಸಿಯೇಶನ್‌ ಆಫ್‌ ಬಂಟ್ಸ್‌-ಜವಾಬ್‌ ಇದರ ಆಶ್ರಯದಲ್ಲಿ ಮಾ. 24ರಂದು ಪೂರ್ವಾಹ್ನ 10ರಿಂದ ಅಂಧೇರಿ ಪಶ್ಚಿಮದ ಲಿಂಕ್‌ರಸ್ತೆ, ಸ್ಟಾರ್‌ ಬಜಾರ್‌ ಮುಂಭಾಗದಲ್ಲಿರುವ ಹೊಟೇಲ್‌ ಪ್ಯಾಪಿಲಾನ್‌ ಪಾರ್ಕ್‌ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಖ್ಯಾತ ಮನೋರೋಗ ತಜ್ಞ ಡಾ| ಹರೀಶ್‌ ಶೆಟ್ಟಿ ಅವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

Advertisement

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜವಾಬ್‌ನ ಅಧ್ಯಕ್ಷ ಜಯಪ್ರಕಾಶ್‌ ಶೆಟ್ಟಿ ಅವರು ಮಾತನಾಡಿ, ಜವಾಬ್‌ ಸಮಾಜ ಬಾಂಧವರಿಗಾಗಿ ಅನೇಕ ಸಮಾಜಪರ ಕಾರ್ಯಕ್ರಮಗಳನ್ನು ಇಲ್ಲಿಯವರೆಗೆ ಆಯೋಜಿಸುತ್ತಾ ಬಂದಿದೆ. ನಮ್ಮ ಪರಿಸರದವರೇ ಆದ ಡಾ| ಹರೀಶ್‌ ಶೆಟ್ಟಿ ಅವರು ಖ್ಯಾತ ಮನೋ ವೈದ್ಯರಾಗಿ, ವಾಗ್ಮಿಯಾಗಿ ಪ್ರಸಿದ್ಧರಾಗಿದ್ದು, ಅವರ ಮಾರ್ಗದರ್ಶನ, ಉಪನ್ಯಾಸದಿಂದ ಅನೇಕ ಮಂದಿ ಆರೋಗ್ಯವಂತರಾಗಿ ಉತ್ತಮ ಜೀವನವನ್ನು ನಡೆಸುತ್ತಿದ್ದಾರೆ. ಉತ್ತಮ ವಿಚಾರಗಳೊಂದಿಗೆ ಸದೃಢ ಮತ್ತು ಆರೋಗ್ಯವಂತ ಸಮಾಜ ನಮ್ಮದಾಗಲಿ. ಇಂತಹ ಕಾರ್ಯಕ್ರಮಗಳು ಸದಾ ಜರಗುತ್ತಿರುವುದರಿಂದ ಸಮಾಜ ಬಾಂಧವರು ಒಂದೆಡೆ ಸೇರಿ ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಿದೆ ಎಂದು ನುಡಿದು ಶುಭಹಾರೈಸಿದರು.

ಪ್ರತಿಯೊಬ್ಬರಲ್ಲೂ ನಗುನಗುತ್ತಾ ಮಾತನಾಡಿ
ಸೆಲ್ಪ್ ನೆಗ್ಲೆಟ್‌, ಸೆಲ್ಪ್ ಲವ್‌ ಆ್ಯಂಡ್‌ ಸೆಲ್ಪ್ ಇಂಟಲಿಜೆನ್ಸ್‌ ಎಂಬ ವಿಷಯದ ಬಗ್ಗೆ ಡಾ| ಹರೀಶ್‌ ಶೆಟ್ಟಿ ಅವರು ಇಂಗ್ಲೀಷ್‌ ಮತ್ತು ಕನ್ನಡದಲ್ಲಿ ವಿಶೇಷ ಉಪನ್ಯಾಸ ನೀಡಿ, ಜೀವಿಸಲು ಉಸಿರಾಡುವುದು ಹೇಗೆಯೋ ಆದೇ ರೀತಿ ಪ್ರತಿಯೊಬ್ಬರಿಗೂ ತಮ್ಮ ಆರೋಗ್ಯದ ಬಗ್ಗೆ ಗಮನ ನೀಡಬೇಕು. ನಿಯಮಿತ ಆಹಾರದಿಂದ ಶರೀರದ ಸಮತೋಲನವನ್ನು ಕಾಪಾಡಿಕೊಳ್ಳಬಹುದು. ಮದ್ಯಪಾನ ಮತ್ತು ಧೂಮಪಾನದಿಂದ ದೂರವಿರಿ. ಇಲ್ಲಸಲ್ಲದ ವಿಷಯಗಳನ್ನು ತಲೆಯಿಂದ ದೂರವಿರಿಸಿ ಒತ್ತಡ ರಹಿತರಾಗಿರಿ. ನಿಮ್ಮ ಮನೆಗಲ್ಲಿ ಸಮಸ್ಯೆಗಳಿದ್ದರೆ ಮುಕ್ತವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ಟಿವಿ ನೋಡುತ್ತಾ ಊಟ ಮಾಡುವುದು ಸರಿಯಲ್ಲ. ಮಕ್ಕಳಿಗೆ ನಿಮ್ಮೊಂದಿಗೆ ಕೂರಿಸಿ ಊಟ ಮಾಡಲು ಹೇಳಿ. ನಗು ಎಲ್ಲಾ ಕಾಯಿಲೆಗಳನ್ನು ದೂರಗೊಳಿಸುತ್ತದೆ. ಪ್ರತಿಯೊಬ್ಬರಲ್ಲೂ ನಗುನಗುತ್ತಾ ಮಾತನಾಡಿ. ಪ್ರತಿಯೊಬ್ಬರು ಆರೋಗ್ಯವಂತರಾಗಿ ಸುಂದರವಾದ ಜೀವನವನ್ನು ತಮ್ಮದಾಗಿಸಿಕೊಳ್ಳಿ ಎಂದು ಕರೆ ನೀಡಿದರು.

ಜವಾಬ್‌ನ ಉಪಾಧ್ಯಕ್ಷ ಸಿಎ ಐ. ಆರ್‌. ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಜವಾಬ್‌ ಪರಿವಾರದ ಸದಸ್ಯರಿಗೆ ಉಪಯುಕ್ತವಾಗುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇದರ ಸದುಪಯೋಗವನ್ನು ಸದಸ್ಯ ಬಾಂಧವರು ಪಡೆಯಬೇಕು. ಮನುಷ್ಯನಿಗೆ ಮುಖ್ಯವಾಗಿ ಆರೋಗ್ಯ ಮುಖ್ಯ. ಆದ್ದರಿಂದ ಆರೋಗ್ಯದೆಡೆಗೆ ಹೆಚ್ಚಿನ ಗಮನ ನೀಡಬೇಕು ಎಂದು ನುಡಿದರು.
ಜವಾಬ್‌ನ ಗೌರವ ಪ್ರಧಾನ ಕಾರ್ಯದರ್ಶಿ ಕಿಶೋರ್‌ ಕುಮಾರ್‌ ಶೆಟ್ಟಿ ಕಡಂದಲೆ ಅವರು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಪರಿಸರ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಸದುಪಯೋಗವನ್ನು ಪಡೆದರು.

ವೇದಿಕೆಯಲ್ಲಿ ಜವಾಬ್‌ನ ಕೋಶಾಧಿಕಾರಿ ಅಶೋಕ್‌ ಕುಮಾರ್‌ ಆರ್‌. ಶೆಟ್ಟಿ, ಜತೆ ಕಾರ್ಯದರ್ಶಿ ಟಿ. ವಿಶ್ವನಾಥ್‌ ಶೆಟ್ಟಿ, ಜತೆ ಕೋಶಾಧಿಕಾರಿ ಎಚ್‌. ಶೇಖರ್‌ ಹೆಗ್ಡೆ ಉಪಸ್ಥಿತರಿದ್ದರು. ಜವಾಬ್‌ ಪರಿವಾರದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸಂಸ್ಥೆಯ ಮಾಜಿ ಅಧ್ಯಕ್ಷರುಗಳು, ವಿಶ್ವಸ್ತರುಗಳು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next