Advertisement

ಜವಾಬ್‌ ವಾರ್ಷಿಕೋತ್ಸವ: ಸ್ನೇಹ ಸಮ್ಮಿಲನ, ಸಮ್ಮಾನ

01:57 PM Feb 14, 2018 | |

ಮುಂಬಯಿ: ಜುಹೂ-ಅಂಧೇರಿ- ವಸೋìವಾ-ವಿಲೇಪಾರ್ಲೆ (ಜವಾಬ್‌) ಸಂಸ್ಥೆಯ ವಾರ್ಷಿಕೋತ್ಸವ ಮತ್ತು ಸ್ನೇಹ ಸಮ್ಮಿಲನ ಸಮಾರಂಭವು ಫೆ. 3 ರಂದು ಸಂಜೆ ಅಂಧೇರಿ ಪಶ್ಚಿಮದ ಲೋಖಂಡ್‌ವಾಲ ಕಾಂಪ್ಲೆಕ್ಸ್‌ ರೆಸಿಡೆಂಟಲ್‌ ಅಸೋಸಿಯೇಶನ್‌ ಮೈದಾನದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅದ್ದೂರಿ ಯಾಗಿ ಜರಗಿತು.

Advertisement

ಜವಾಬ್‌ನ ಅಧ್ಯಕ್ಷ ಜಯಪ್ರಕಾಶ್‌ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಾಧಕಿ ಸಿಮೋನ್‌ ಆಳ್ವ ಅವರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು. ಜವಾಬ್‌ನ ನೂತನ  ವಿಶ್ವಸ್ತರಾಗಿ ನೇಮಕಗೊಂಡಿರುವ  ಆಶೋಕ್‌ ಕುಮಾರ್‌  ರಾಜು ಶೆಟ್ಟಿ ಇವರನ್ನು ಗೌರವಿಸಲಾ ಯಿತು. ವಿವಿಧ ಕ್ಷೇತ್ರಗಳ ಸಾಧಕರನ್ನು ಅಭಿನಂದಿಸಲಾಯಿತು.

ಜವಾಬ್‌ನ ಉಪಾಧ್ಯಕ್ಷ ಸಿಎ ಐ. ಆರ್‌. ಶೆಟ್ಟಿ, ಗೌರವ  ಪ್ರಧಾನ ಕಾರ್ಯದರ್ಶಿ ಕಿಶೋರ್‌ ಕುಮಾರ್‌  ಶೆಟ್ಟಿ ಕೆ., ಗೌರವ  ಕೋಶಾಧಿಕಾರಿ ಅಶೋಕ್‌ ಕುಮಾರ್‌ ಆರ್‌. ಶೆಟ್ಟಿ ,  ಜೊತೆ ಕಾರ್ಯದರ್ಶಿ  ಟಿ. ವಿಶ್ವನಾಥ್‌ ಶೆಟ್ಟಿ,  ಜೊತೆ ಕೋಶಾಧಿಕಾರಿ ಶೇಖರ್‌ ಹೆಗ್ಡೆ,  ಸಾಂಸ್ಕೃತಿಕ  ಸಮಿತಿ  ಕಾರ್ಯಾಧ್ಯಕ್ಷ  ಮಧುಕರ್‌  ಎ. ಶೆಟ್ಟಿ, ಸಂಸ್ಥೆಯ ಇತರ ಪದಾಧಿಕಾರಿಗಳಾದ  ನಿಧಿ ಸಂಗ್ರಹ  ಸಮಿತಿ ಕಾರ್ಯಾಧ್ಯಕ್ಷ  ರಘು ಎಲ್‌ ಶೆಟ್ಟಿ,  ಸದಸತ್ವ  ನೋಂದಾವಣಿ  ಕಾರ್ಯಾಧ್ಯಕ್ಷ  ರಮೇಶ್‌ ಎಲ್‌. ಶೆಟ್ಟಿ,  ಪ್ರಚಾರ ಮಾಧ್ಯಮ  ಸಮಿತಿಯ  ಕಾರ್ಯಾಧ್ಯಕ್ಷ  ಮಹೇಶ್‌  ಎಸ್‌.  ಶೆಟ್ಟಿ, ಮಾಜಿ  ಅಧ್ಯಕ್ಷರು  ಹಾಗೂ ವಿಶ್ವಸ್ತರುಗಳಾದ ದಿವಾಕರ್‌ ಎಂ. ಶೆಟ್ಟಿ,  ವಿ. ವಿವೇಕ್‌ ಶೆಟ್ಟಿ,  ರಮೇಶ್‌  ಯು.  ಶೆಟ್ಟಿ,  ಆನಂದ್‌ ಪಿ. ಶೆಟ್ಟಿ, ರಘು ಎಲ್‌. ಶೆಟ್ಟಿ, ನಾಗೇಶ್‌ ಎನ್‌. ಶೆಟ್ಟಿ,  ಮಾಜಿ ಅಧ್ಯಕ್ಷರುಗಳಾದ  ಡಾ| ಸದಾನಂದ  ವಿ. ಶೆಟ್ಟಿ ,  ಬಿ. ಡಿ. ಶೆಟ್ಟಿ,  ವಿಶ್ವನಾಥ ಎಸ್‌. ಹೆಗ್ಡೆ,  ಶಂಕರ್‌ ಟಿ. ಶೆಟ್ಟಿ, ಎನ್‌ ಸಿ. ಶೆಟ್ಟಿ, ಬಿ. ಶಿವರಾಮ ನಾಯ್ಕ,  ವಿಶ್ವಸ್ತರುಗಳಾದ ಗೀತಾ ಎಂ. ಶೆಟ್ಟಿ, ಜಯರಾಮ್‌ ಎಲ್‌. ಶೆಟ್ಟಿ,  ಮಹೇಶ್‌ ಎಸ್‌. ಶೆಟ್ಟಿ,  ಬಿ. ಆರ್‌. ಪೂಂಜ, ದಿವಾಕರ್‌ ಎಸ್‌. ಶೆಟ್ಟಿ, ಕೃಷ್ಣ ವೈ.  ಶೆಟ್ಟಿ,  ಸುಧಾಕರ ಶೆಟ್ಟಿ, ಸಿಎ ರವೀಂದ್ರ  ಎಸ್‌. ಶೆಟ್ಟಿ,  ರತ್ನಾಕರ ರೈ, ರಘುರಾಮ  ಕೆ. ಶೆಟ್ಟಿ,  ಶೇಖರ್‌ ಎ. ಶೆಟ್ಟಿ,  ಪಾಂಡುರಂಗ ಎಸ್‌. ಶೆಟ್ಟಿ,  ಸುಬ್ಬಯ್ಯ ವಿ. ಶೆಟ್ಟಿ, ಮನ್‌ ಮೋಹನ್‌  ಆರ್‌. ಶೆಟ್ಟಿ,  ಭರತ್‌ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. 

ಕವಿತಾ ಐ. ಆರ್‌. ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು. ವಿವಿಧ ಸಂಘಟನೆಗಳ ಪದಾಧಿಕಾರಿಗಳನ್ನು, ಗಣ್ಯರನ್ನು ಶಾಲು ಹೊದೆಸಿ, ಪುಷ್ಪಗುಚ್ಚವನ್ನಿತ್ತು ಗೌರವಿಸಲಾಯಿತು. ರೂಪಾ ಪ್ರಭಾಕರ ಶೆಟ್ಟಿ ಮತ್ತು ಅನುಪಮಾ ಶೈಲೇಶ್‌ ಶೆಟ್ಟಿ ಅವರು ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಿಸಿದರು. ತಶ್ವಿ‌, ಉನ್ನತಿ, ವೈಷ್ಣವಿ ಅವರು ಪ್ರಾರ್ಥನೆಗೈದರು. ಗೌರವ ಕೋಶಾಧಿಕಾರಿ ಅಶೋಕ್‌ ಕುಮಾರ್‌ ಆರ್‌. ಶೆಟ್ಟಿ ವಂದಿಸಿದರು. 

ಚಿತ್ರ- ವರದಿ: ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು.

Advertisement
Advertisement

Udayavani is now on Telegram. Click here to join our channel and stay updated with the latest news.

Next