Advertisement

Shah Rukh Khan; ಬಾಲಿವುಡ್ ದಾಖಲೆ ಅಳಿಸಿದ ‘ಜವಾನ್’; ಒಂದೇ ದಿನದಲ್ಲಿ 150 ಕೋಟಿ ಕಲೆಕ್ಷನ್

12:05 PM Sep 08, 2023 | Team Udayavani |

ಬಾಲಿವುಡ್ ಮಂದಿ ಅತ್ಯಂತ ಕುತೂಹಲದಿಂದ ಕಾಯುತ್ತಿದ್ದ ಶಾರುಖ್- ಅಟ್ಲೀ ಕಾಂಬಿನೇಶನ್ ನ ‘ಜವಾನ್’ ಚಿತ್ರವು ಸೆ.7ರಂದು ವಿಶ್ವಾದ್ಯಂತ ತೆರೆಗೆ ಬಂದಿದೆ. ತಮಿಳು ನಿರ್ದೇಶಕ ಅಟ್ಲೀ ನಿರ್ದೇಶನದ ಚಿತ್ರದಲ್ಲಿ ಕಿಂಗ್ ಖಾನ್ ಶಾರುಖ್ ಖಾನ್, ನಯನತಾರಾ, ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Advertisement

ಗುರುವಾರ ತೆರೆಕಂಡ ಜವಾನ್ ಚಿತ್ರವು ಒಂದೇ ದಿನ ಬರೋಬ್ಬರಿ 150 ಕೋಟಿ ರೂ ಕಲೆಕ್ಷನ್ ಮಾಡಿದೆ ಎಂದು ವರದಿ ಹೇಳಿದೆ. ‘ಜವಾನ್’ ತನ್ನ ಮೊದಲ ದಿನದಲ್ಲೇ ಇತಿಹಾಸವನ್ನು ಸೃಷ್ಟಿಸಿ ಬ್ಲಾಕ್ಬಸ್ಟರ್ ಆಗಿದೆ. ವರದಿಗಳ ಪ್ರಕಾರ, ಶಾರುಖ್ ನಟನೆಯ ಚಿತ್ರವು ಭಾರತದಲ್ಲಿ 75 ಕೋಟಿ ರೂ ಗಳಿಸಿದೆ. ವಿಶ್ವದಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಈ ಚಿತ್ರ 150 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಹೀಗಾಗಿ ‘ಜವಾನ್’ ಈಗ ಬಾಲಿವುಡ್‌ ನ ಮೊದಲ ದಿನದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರವಾಗಿದೆ.

ಮೊದಲ ದಿನದಲ್ಲಿ ಚಿತ್ರವು ಭಾರತದಲ್ಲಿ ಎಲ್ಲಾ ಭಾಷೆಗಳಲ್ಲಿ ಒಟ್ಟಾಗಿ 75 ಕೋಟಿ ರೂ ಸಂಪಾದಿಸಿದೆ. ಅದರಲ್ಲೂ ಹಿಂದಿ ಭಾಷೆಯಲ್ಲಿ ಅದು ಶೇ.58.67 ರಷ್ಟು ಗಳಿಕೆ ಮಾಡಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ:Silicon City ಜನರಿಗೆ ಮಾಲಿನ್ಯ ಕಂಟಕ! ಗಾಳಿ ಗುಣಮಟ್ಟ ಕುಸಿತದಿಂದ ಹೃದಯ ಸಂಬಂಧಿ ಕಾಯಿಲೆ

‘ಜವಾನ್’ ಗುರುವಾರ ಆಸ್ಟ್ರೇಲಿಯಾದಲ್ಲಿ AUD 400,000 ಗಳಿಸಿತು. ಇದು ಆಸ್ಟ್ರೇಲಿಯಾದ ಬಾಕ್ಸ್ ಆಫೀಸ್‌ ನಲ್ಲಿ ಅಗ್ರಸ್ಥಾನ ಗಳಿಸಿದ ಮೊದಲ ಭಾರತೀಯ ಚಿತ್ರವಾಗಿದೆ. ಈತನ್ಮಧ್ಯೆ, ನ್ಯೂಜಿಲ್ಯಾಂಡ್‌ ನಲ್ಲಿ, ಚಿತ್ರವು NZ$ 79,805 (Rs 39.13 ಲಕ್ಷ) ಗಳಿಸಿದ್ದು, ಜರ್ಮನಿಯಲ್ಲಿ, ‘ಜವಾನ್’ 1.30 ಕೋಟಿ ರೂಪಾಯಿಗಳೊಂದಿಗೆ 3 ನೇ ಸ್ಥಾನದಲ್ಲಿದೆ. ಉತ್ತರ ಅಮೆರಿಕಾ, ಯುಕೆ ಮತ್ತು ಕೆನಡಾದಲ್ಲಿಯೂ ಚಿತ್ರವು ಉತ್ತಮ ಕಲೆಕ್ಷನ್ ಮಾಡುತ್ತಿದೆ.

Advertisement

ಜವಾನ್ ಚಿತ್ರವು ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಸೆ.7ರಂದು ತೆರೆಕಂಡಿದೆ. ಚಿತ್ರವನ್ನು ಅಟ್ಲೀ ನಿರ್ದೇಶನ ಮಾಡಿದ್ದು, ರೆಡ್ ಚಿಲ್ಲೀಸ್ ಬ್ಯಾನರ್ ನಡಿ ಗೌರಿ ಖಾನ್ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಶಾರುಖ್ ಖಾನ್ ಜತೆ ನಯನತಾರಾ, ವಿಜಯ್ ಸೇತುಪತಿ, ಸಾನ್ಯಾ ಮಲ್ಹೋತ್ರಾ ಮತ್ತು ಪ್ರಿಯಾಮಣಿ ನಟಿಸಿದ್ದಾರೆ. ದೀಪಿಕಾ ಪಡುಕೋಣೆ ಅವರು ಅತಿಥಿ ನಟರಾಗಿ ಚಿತ್ರದ ಭಾಗಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next