Advertisement
ಇದು ಕಂಡು ಬಂದದ್ದು ದಿ ಯಜ್ಡಿ ಜಾವ ಓನರ್ ಕ್ಲಬ್ ಆಫ್ ಇಂಡಿಯಾದ ಮಂಗಳೂರು ಶಾಖೆ ವತಿಯಿಂದ 15ನೇ ಇಂಟರ್‌ನ್ಯಾಷನಲ್ ಜಾವ ಡೇ ಅಂಗವಾಗಿ ನಗರದ ಕಾರ್‌ಸ್ಟ್ರೀಟ್‌ನ ಬಿಇಎಂ ಹೈಸ್ಕೂಲ್‌ನ ಮೈದಾನದಲ್ಲಿ ಆಯೋಜಿಸಲಾದ ಹಳೆಯ ಬೈಕ್‌ಗಳ ಪ್ರದರ್ಶನದಲ್ಲಿ.
ಕಾರ್ಗಿಲ್ ಯುದ್ಧವನ್ನು ಸ್ಮರಿಸಲಾಯಿತು. ದ.ಕ. ಜಿಲ್ಲಾ ಮಾಜಿ ಸೈನಿಕ ಸಂಘದ ಮಾಜಿ ಅಧ್ಯಕ್ಷ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ ಸೇರಿದಂತೆ ಆರು ಮಂದಿ ಮಾಜಿ ಸೈನಿಕರನ್ನು ಅಭಿನಂದಿಸಲಾಯಿತು. ಸಂಘದ ಸದಸ್ಯರು ಬೈಕ್‌ನಲ್ಲಿ ಲೇಹ್ ಲಡಾಕ್ ಪ್ರಯಾಣ ಸಂದರ್ಭ ಕಾರ್ಗಿಲ್ ವೀರ ಯೋಧರ ಸಾಧನೆ, ಹೋರಾಟ ಮನತಟ್ಟಿದ ಹಿನ್ನೆಲೆಯಲ್ಲಿ ವೀರ ಯೋಧರ ಸ್ಮರಣೆ ನಡೆಯಿತು ಎನ್ನುತ್ತಾರೆ ಸಂಘದ ಸಂಚಾಲಕ ಶಾನ್ ಫೆರ್ನಾಂಡಿಸ್. ಸದಸ್ಯರಿಗೆ ಕಾರ್ಗಿಲ್ ಕುರಿತ ರಸಪ್ರಶ್ನೆ ನಡೆದು ಬಹುಮಾನ ವಿತರಿಸಲಾಯಿತು. ಯಜ್ಡಿ ಮತ್ತು ಜಾವ ಬೈಕ್ ಮೆಕಾನಿಕ್‌ಗಳನ್ನು ಗುರುತಿಸಿ ಗೌರವಿಸಲಾಯಿತು.
Related Articles
ಇಲ್ಲಿ ಪ್ರದರ್ಶನಗೊಂಡ ಸುಮಾರು 70 ಬೈಕ್‌ಗಳ ಪೈಕಿ 10 ಬೈಕ್‌ಗಳು ಅಶೋಕನಗರದ ನಿವಾಸಿ ಉದ್ಯಮಿ ಸೂರಜ್ ಹೆನ್ರಿ ಅವರಿಗೆ ಸೇರಿದ್ದಾಗಿತ್ತು. ಸೂರಜ್ ಹೆನ್ರಿ ಅವರಿಗೆ ಬೈಕ್‌ಗಳೆಂದರೆ ಅಪಾರ ಪ್ರೀತಿ. 2008ರಿಂದ ಬೈಕ್‌ಗಳ ಸಂಗ್ರಹಣೆಗೆ ಅವರು ತೊಡಗಿದ್ದು, ಪ್ರಸ್ತುತ ಮೂವತ್ತಕ್ಕೂ ಹೆಚ್ಚು ಬೈಕ್‌ಗಳನ್ನು ಹೊಂದಿದ್ದಾರೆ. ಅತ್ಯಂತ ಹಳೆಯ ಮತ್ತು ಅಪರೂಪದ ಬೈಕ್‌ಗಳಾದ 1942ರ ಏರಿಯಲ್, ಇನ್ನೊಸೆಂಟಿ 48, ಲಕ್ಷ್ಮೀ, ಸುವೇಗ, ಲೂನಾ ಟಿಎಫ್‌ಆರ್, ವೆಸ್ಪಾ, ಲೂಂಬಿ, ಯಜ್ಡಿ 175, ರಾಜ್‌ದೂತ್, ಯಮಹಾ ಆರ್‌ಡಿ 50 ಮೊದಲಾದ ಬೈಕ್‌ಗಳ ಸಂಗ್ರಹ ಇವರಲ್ಲಿದೆ. ತನ್ನ ಹಳೆಯ ಬೈಕ್‌ನಲ್ಲಿ ಸೂರಜ್ ಅವರು ಲಡಾಕ್, ಕಾರ್ಗಿಲ್, ಊಟಿ ಮುಂತಾದ ಕಡೆಗಳಲ್ಲಿ ಸುತ್ತಾಡಿ ಬಂದಿದ್ದಾರೆ. 2015ರಲ್ಲಿ ಬೆಂಗಳೂರಿನಲ್ಲಿ ನಡೆದ ಲಿಮ್ಕಾ ದಾಖಲೆಯಲ್ಲಿ 437 ಮಂದಿ ಭಾಗವಹಿಸಿದ್ದರು. ಈಗ ಗಿನ್ನಿಸ್ ರೆಕಾರ್ಡ್‌ಗೂ ಪ್ರಯತ್ನ ಮಾಡಿದ್ದು, ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.
Advertisement