Advertisement

ಜೇವರ್ಗಿ: ಕ್ವಾರಂಟೈನ್‌ ಕೇಂದ್ರಕ್ಕೆ ನರಿಬೋಳ ಭೇಟಿ

11:46 AM May 18, 2020 | Naveen |

ಜೇವರ್ಗಿ: ಪಟ್ಟಣದ ಲೋಕೋಪಯೋಗಿ ಇಲಾಖೆ ಕಚೇರಿ ಸಮೀಪದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ರವಿವಾರ ಭೇಟಿ ನೀಡಿ, ಪರಿಶೀಲಿಸಿದರು.

Advertisement

ಮುಂಬೈ, ಪುಣೆ ಸೇರಿದಂತೆ ಅನ್ಯ ರಾಜ್ಯಗಳಿಂದ ಜೇವರ್ಗಿಗೆ ಬಂದಿರುವವರ ಪೈಕಿ 143 ಜನರನ್ನು ಪಟ್ಟಣದ ಮೊರಾರ್ಜಿ ವಸತಿ ಶಾಲೆಯಲ್ಲಿ ಕ್ವಾರಂಟೈನ್‌ ಮಾಡಲಾಗಿದ್ದು, ಇವರಿಗೆ ಕುಡಿಯುವ ನೀರಿನ ವ್ಯವಸ್ಥೆ, ಊಟ, ಸ್ವಚ್ಛತೆ, ಶೌಚಾಲಯ ಸೇರಿದಂತೆ ಯಾವುದೇ ಸಮಸ್ಯೆಯಾಗದಂತೆ ಹಾಗೂ ದಿನಕ್ಕೆ ಎರಡು ಬಾರಿ ಆರೋಗ್ಯ ತಪಾಸಣೆ ನಡೆಸಬೇಕೆಂದು ಸ್ಥಳದಲ್ಲಿದ್ದ ಸಿಬ್ಬಂದಿಗೆ ನರಿಬೋಳ ಸೂಚಿಸಿದರು.

ಇದೇ ವೇಳೆ ಮುಂಬೈದಿಂದ ಬಂದಿರುವ ತಾಲೂಕಿನ ರೇವನೂರ ಗ್ರಾಮದ ಏಳು ದಿನದ ಬಾಣಂತಿ ಜ್ಯೋತಿ ರಮೇಶ ಪವಾರ ಹಾಗೂ ಗೀತಾ ಅನೀಲ ಪವಾರ ಅವರನ್ನು ಭೇಟಿಯಾದ ನರಿಬೋಳ ಆರೋಗ್ಯ ವಿಚಾರಿಸಿ ಹೋಂ ಕ್ವಾರಂಟೈನ್‌ ಮಾಡುವಂತೆ ತಾಲೂಕಾಡಳಿತಕ್ಕೆ ಆಗ್ರಹಿಸಿದರು. ಇದಕ್ಕೆ ತಹಶೀಲ್ದಾರ್‌ ಸಿದರಾಯ ಭೋಸಗಿ ಪ್ರತಿಕ್ರಿಯಿಸಿದ್ದು, ಬಾಣಂತಿ ಹಾಗೂ ಒಂಭತ್ತು ತಿಂಗಳ ಗರ್ಭಿಣಿಯ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಗಮನಿಸಿ ಹೋಂ ಕ್ವಾರಂಟೈನ್‌ ಗೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.

ನರಿಬೋಳ ಭೇಟಿ ಸಂದರ್ಭದಲ್ಲಿ ವಸತಿ ಶಾಲೆ ಪ್ರಾಂಶುಪಾಲ ನವೀದ್‌ ಅಂಜುಮ್‌ ಸಲ್ಮಾ, ಬಿಜೆಪಿ ಯುವ ಮುಖಂಡರಾದ ಶಿವಪ್ರಸಾದ ಅರಳಿ, ಅಕºರ್‌ಸಾಬ ಮುಲ್ಲಾ, ಶರಣು ವಡಗೇರಿ, ಬಸವರಾಜ ಡಿವಾಳಕರ್‌ ಹಾಗೂ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next