Advertisement

ಡೈಮಂಡ್‌ ಲೀಗ್‌: ನೀರಜ್‌ ಅರ್ಹತೆ

06:00 AM Jul 28, 2018 | |

ಹೊಸದಿಲ್ಲಿ: ಪ್ರತಿಷ್ಠಿತ ಡೈಮಂಡ್‌ ಲೀಗ್‌ ಫೈನಲ್‌ ಕೂಟಕ್ಕೆ ಭಾರತದ ಉದಯೋನ್ಮುಖ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ಆಯ್ಕೆಯಾಗಿದ್ದಾರೆ. ಈ ಪಂದ್ಯಾವಳಿ ಆ. 20ರಿಂದ ಆರಂಭವಾಗಲಿದೆ. ಕಾಮನ್ವೆಲ್ತ್‌ ಗೇಮ್ಸ್‌ ಚಾಂಪಿಯನ್‌ ಆಗಿರುವ ನೀರಜ್‌ ಚೋಪ್ರಾ ಇದೇ ತಿಂಗಳಲ್ಲಿ ನಡೆದ ರಬಾಟ್‌ (ಮೊರೊಕ್ಕೊ) ಕೂಟದಲ್ಲಿ 5ನೆ ಯವರಾಗಿ ಸ್ಪರ್ಧೆ ಮುಗಿಸಿದ್ದರು. 83.32 ಮೀ.ಗಳ ಅತ್ಯುತ್ತಮ ಸಾಧನೆಗೈದಿದ್ದರು. ಇಲ್ಲಿ ಅವರಿಗೆ 4 ಡೈಮಂಡ್‌ ಲೀಗ್‌ ಅಂಕಗಳು ಲಭಿಸಿದ್ದವು.

Advertisement

ವಿಶ್ವ ಚಾಂಪಿಯನ್‌ ಜೊಹಾನೆಸ್‌ ವೆಟರ್‌, ಒಲಿಂಪಿಕ್‌ ಚಾಂಪಿಯನ್‌ ಥಾಮಸ್‌ ರೋಹರ್‌, 2017ರ ಐಎಎಎಫ್ ಡೈಮಂಡ್‌ ಲೀಗ್‌ ಚಾಂಪಿ ಯನ್‌ ಜಾಕುಬ್‌ ವಾಡ್ಲೆಕ್‌, ಜರ್ಮನ್‌ ಚಾಂಪಿಯನ್‌ ಆಂಡ್ರಿಯಾಸ್‌ ಹಾಫ್ಮನ್‌, ಎಸ್ತೋನಿಯಾದ ದಾಖಲೆವೀರ ಮ್ಯಾಗ್ನಸ್‌ ಕಿರ್ಟ್‌ ಕೂಡ ಡೈಮಂಡ್‌ ಲೀಗ್‌ ಫೈನಲ್‌ಗೆ ಆಯ್ಕೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next