Advertisement

ಜಾವಗಲ್: ಗಂಗಾ ಜಯಂತಿ

10:28 AM May 12, 2019 | Suhan S |

ಜಾವಗಲ್: ಜಾವಗಲ್ ಹೋಬಳಿಯ ನಾನಾ ಗ್ರಾಮಗಳಲ್ಲಿ ಗಂಗಾ ಜಯಂತಿ ಯನ್ನು ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ಜಾವಗಲ್ನ ಗಂಗಾ ಪರಮೇಶ್ವರಿ ದೇವಾಲಯದಲ್ಲಿ ಮುಂಜಾನೆ ಅಭಿಷೇಕ, ಪುಷ್ಪಾಲಂಕಾರ, ಅರ್ಚನೆ, ವಿಶೇಷ ಪೂಜೆ, ಮಹಾ ಮಂಗಳಾರತಿ ನಡೆಸಲಾಯಿತು. ಜಾವ ಗಲ್ ಲಕ್ಷ್ಮೀನರಸಿಂಹ ದೇವಾಲಯ ದಿಂದ ಗ್ರಾಮ ದೇವತೆಗಳಾದ ಕರಿಯಮ್ಮ, ದೊಡ್ಡಮ್ಮ, ಪ್ಲೇಗಿನಮ್ಮ, ವೀರಭದ್ರಸ್ವಾಮಿ ಹಾಗೂ ಕೆಂಚಪ್ಪ ದೇವರುಗಳೊಂದಿಗೆ ಪುಟಾಣಿ ಹೆಣ್ಣು ಮಗುವಿಗೆ ಗಂಗೆಯನ್ನು ಹೊರಿಸಿ ಪೂಜೆ ಸಲ್ಲಿಸಿ ನಡೆಮುಡಿಯೊಂದಿಗೆ ಗಂಗಾ ಪರಮೇಶ್ವರಿ ದೇವಾಲಯದವರೆಗೆ ಮಂಗಳವಾದ್ಯದೊಂದಿಗೆ ಮೆರವಣಿಗೆ ನಡೆಸಲಾಯಿತು.

Advertisement

ನೇರ್ಲಿಗೆ ಗ್ರಾಮದ ಗಂಗಾಮತ ಸಮಾಜ ಬಾಂಧವರು ಅದ್ದೂರಿಯಿಂದ ಗಂಗಾ ಜಯಂತಿ ಯನ್ನು ಆಚರಿಸಿದರು. ಗ್ರಾಮ ದೇವತೆ ಗಳಾದ ಕರಿಯಮ್ಮ, ಚಿಕ್ಕಮ್ಮ, ದೂತ ರಾಯ, ವೀರಭದ್ರಸ್ವಾಮಿ, ಅಂತರ ಗಟ್ಟಮ್ಮ, ಹೊಲದಮ್ಮ ದೇವಿಯ ಉತ್ಸವ ಮೂರ್ತಿಗಳೊಂದಿಗೆ ಅಲಂಕೃತ ವಾಹನ ದಲ್ಲಿ ಗಂಗಾ ಪರಮೇಶ್ವರಿ ದೇವಿ ಮೆರವಣಿಗೆ ನಡೆಸಲಾಯಿತು.

ಹೋಬಳಿಯ ಉಂಡಿಗನಾಳು, ಮೂಡನಹಳ್ಳಿ, ಕುರಾದಹಳ್ಳಿ, ಅರಕೆರೆ, ಕರಗುಂದ, ಕಲ್ಯಾಡಿ ಮತ್ತಿತರ ಗ್ರಾಮಗಳಲ್ಲೂ ಗಂಗಾಮತ ಸಮಾಜ ಬಾಂಧವರು ಗಂಗಾ ಜಯಂತಿಯನ್ನು ಆಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next