ಮುಂಬಯಿ: ನಗರದ ಬಂಟರ ಪ್ರಾದೇಶಿಕ ಸಂಘಟನೆಗಳಲ್ಲಿ ಒಂದಾಗಿರುವ ಪ್ರತಿಷ್ಠಿತ ಸಂಸ್ಥೆ ಜುಹೂ- ಅಂಧೇರಿ- ವಸೋìವಾ- ವಿಲೇ ಪಾರ್ಲೆ ಅಸೋಸಿಯೇಶನ್ ಆಫ್ ಬಂಟ್ಸ್ ಜವಾಬ್ ಇದರ 13ನೇ ನೂತನ ಅಧ್ಯಕ್ಷರಾಗಿ 2017-2020 ರ ಅವಧಿಗೆ ಜಯಪ್ರಕಾಶ್ ಬಿ. ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅ. 1ರಂದು ಸಂಜೆ ಅಂಧೇರಿ ಪಶ್ಚಿಮದ ಜುಹೂ-ವಸೋìವಾ ಲಿಂಕ್ ರಸ್ತೆಯಲ್ಲಿರುವ ರಿನಾಯ್‌ಸನ್ಸ್ ಫೆಡರೇಶನ್ ಕ್ಲಬ್‌ನಲ್ಲಿ ಜವಾಬ್‌ನ ಅಧ್ಯಕ್ಷ ಬಿ. ಶಿವರಾಮ ನಾೖಕ್ ಇವರ ಅಧ್ಯಕ್ಷತೆಯಲ್ಲಿ ಜರಗಿದ ಜವಾಬ್‌ನ 16ನೇ ವಾರ್ಷಿಕ ಮಹಾಸಭೆಯಲ್ಲಿ ಜಯಪ್ರಕಾಶ್ ಬಿ. ಶೆಟ್ಟಿ ಅವರನ್ನು ಮುಂದಿನ 2 ವರ್ಷಗಳ ಕಾರ್ಯಾವಧಿಗೆ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಚುನಾವಣ ಅಧಿಕಾರಿ ನ್ಯಾಯ ವಾದಿ ಮಾಧವ ಶೆಟ್ಟಿ ಅವರು ಜಯಪ್ರಕಾಶ್ ಬಿ. ಶೆಟ್ಟಿ ಅವರನ್ನು ಅಧ್ಯಕ್ಷರನ್ನಾಗಿ ಹಾಗೂ 26 ಸದಸ್ಯ ರನ್ನು ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಅವಿರೋಧವಾಗಿ ಆಯ್ಕೆಮಾಡಲಾಗಿದೆ ಎಂದು ಘೋಷಿಸಿದರು. ಜವಾಬ್‌ನ ಅಧ್ಯಕ್ಷ ಶಿವರಾಮ ನಾೖಕ್ ಅವರು ನೂತನ ಅಧ್ಯಕ್ಷರಿಗೆ ಪುಷ್ಪಗುತ್ಛವನ್ನಿತ್ತು ಸ್ವಾಗತಿಸಿ ಅಭಿನಂದಿಸಿ ಶುಭಹಾರೈಸಿದರು.
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ರತ್ನಾಕರ ಎನ್. ಶೆಟ್ಟಿ, ಮೋಹನ್ ಎಸ್. ಶೆಟ್ಟಿ, ರಮೇಶ್ ಎನ್. ಶೆಟ್ಟಿ, ವಿಜಯ್ ಎನ್. ಶೆಟ್ಟಿ, ಪ್ರಭಾಕರ ಕೆ. ಶೆಟ್ಟಿ, ಜಗದೀಶ್ ವಿ. ಶೆಟ್ಟಿ, ಟಿ. ಶಿವರಾಮ ಶೆಟ್ಟಿ, ಎಚ್. ಶೇಖರ್ ಹೆಗ್ಡೆ, ರಾಜೇಶ್ ಶೆಟ್ಟಿ, ಟಿ. ವಿಶ್ವನಾಥ್ ಶೆಟ್ಟಿ, ಸಿಎ ಐ. ಆರ್. ಶೆಟ್ಟಿ, ಸತೀಶ್ ಎಂ. ಭಂಡಾರಿ ವೈ., ನ್ಯಾಯವಾದಿ ಡಿ. ಕೆ. ಶೆಟ್ಟಿ, ಸುರೇಂದ್ರ ಕೆ. ಶೆಟ್ಟಿ, ವಾಮನ್ ಎಸ್. ಶೆಟ್ಟಿ, ಡಾ| ಪ್ರಭಾಕರ ಶೆಟ್ಟಿ ಬಿ., ಶ್ರೀಧರ್ ಡಿ. ಶೆಟ್ಟಿ, ಪ್ರವೀಣ್ ಕುಮಾರ್ ಆರ್. ಶೆಟ್ಟಿ, ವೆಂಕಟೇಶ್ ಎನ್. ಶೆಟ್ಟಿ, ಬಿ. ಆರ್. ಪೂಂಜ, ಮಧುಕರ ಎ. ಶೆಟ್ಟಿ, ಕಿಶೋರ್ ಕುಮಾರ್ ಶೆಟ್ಟಿ ಕೆ., ಮಹೇಶ್ ಎಸ್. ಶೆಟ್ಟಿ, ಅಶೋಕ್ ಕುಮಾರ್ ಆರ್. ಶೆಟ್ಟಿ, ಪಿ. ಭಾಸ್ಕರ ಎಸ್. ಶೆಟ್ಟಿ, ಭಾಸ್ಕರ್ ಶೆಟ್ಟಿ ಕಾರ್ನಾಡ್ ನೇಮಕಗೊಂಡಿದ್ದಾರೆ. ಜವಾಬ್‌ನ ಎಲ್ಲ ಮಾಜಿ ಅಧ್ಯಕ್ಷರು, ಕಾರ್ಯಕಾರಿ ಸಮಿತಿಯ ಶಾಶ್ವತ ಸದಸ್ಯರನ್ನಾಗಿ ನೇಮಿಸಲಾಯಿತು. ಅವರೆಲ್ಲರು ನೂತನ ಅಧ್ಯಕ್ಷ ಹಾಗೂ ಕಾರ್ಯಕಾರಿ ಸಮಿತಿಯನ್ನು ಅಭಿನಂದಿಸಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜಯಪ್ರಕಾಶ್ ಶೆಟ್ಟಿ ಅವರು ಜವಾಬ್‌ನ ಸ್ಥಾಪಕ ಸದಸ್ಯರಾಗಿದ್ದು ಆರಂಭದಿಂದ ಇಂದಿನವರೆಗೂ ಹಲವಾರು ವಿವಿಧ ಹುದ್ದೆಗಳನ್ನು ಅಲಂಕರಿಸಿ ಸೇವೆ ಸಲ್ಲಿಸಿದ್ದಾರಲ್ಲದೆ, ಈ ಹಿಂದಿನ ಅವಧಿಯಲ್ಲಿ ಜವಾಬ್ ಉಪಾಧ್ಯಕ್ಷರಾಗಿಯೂ ಅವರ ಸೇವೆ ಗಮನೀಯವಾಗಿದೆ. ಹೊಟೇಲ್ ಉದ್ಯಮಿಯಾಗಿರುವ ಜಯಪ್ರಕಾಶ್ ಬಿ. ಶೆಟ್ಟಿ ಅವರು ಕೊಡುಗೈದಾನಿಯಾಗಿ, ಸಮಾಜ ಸೇವಕರಾಗಿ ಗುರುತಿಸಿಕೊಂಡವರು. ಪೆರ್ಣಂಕಿಲ ಪಡುಬೆಟ್ಟು ಪಡುಮನೆ ದಿ| ಲಲಿತಾ ಭೋಜ ಶೆಟ್ಟಿ ಹಾಗೂ ಕೌಡೂರು ಮುಲ್ಲಡ್ಕ ಭೋಜ ಶೆಟ್ಟಿ ಅವರ ಪುತ್ರರಾಗಿದ್ದು, ಪತ್ನಿ ಲಲಿತಾ ಶೆಟ್ಟಿ ಮತ್ತು ಮಕ್ಕಳಾದ ಶಾಶ್ವತ್ ಮತ್ತು ಶಶಾಂಕ್ ಅವರೊಂದಿಗೆ ಅಂಧೇರಿಯಲ್ಲಿ ನೆಲೆಸಿದ್ದಾರೆ. ಜವಾಬ್‌ನ ಪರಿವಾರದೊಂದಿಗೆ ಅನನ್ಯ ಸಂಬಂಧವನ್ನಿಟ್ಟುಕೊಂಡಿರುವ ಇವರು ಆರಂಭದಿಂದಲೂ ಸಕ್ರಿಯ ಕಾರ್ಯಕರ್ತರಾಗಿ ಎಲ್ಲರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ.
ಚಿತ್ರ-ವರದಿ: ಪ್ರೇಮನಾಥ್ ಶೆಟ್ಟಿ ಮುಂಡ್ಕೂರು