Advertisement

ಬಹುನಿರೀಕ್ಷಿತ ಜಾವಾ ಪೆರಾಕ್ ಬಾಬರ್ ಮಾರುಕಟ್ಟೆಗೆ: ಬೆಲೆ, ವಿನ್ಯಾಸದಲ್ಲಿದೆ ಅಚ್ಚರಿ !

10:13 AM Nov 17, 2019 | Mithun PG |

ಮುಂಬೈ: ದ್ವಿಚಕ್ರ ವಾಹನ  ತಯಾರಿಕೆಯಲ್ಲಿ ಹೊಸ ಹವಾ ಸೃಷ್ಟಿಸಿದ್ದ ಕಂಪನಿ ಎಂದರೇ ಜಾವಾ. ತನ್ನ ಆಕರ್ಷಕ ವಿನ್ಯಾಸಗಳಿಂದಲೇ ಗ್ರಾಹಕರ ಮನಗೆದ್ದಿತ್ತು. ಈಗ ಮತ್ತೊಮ್ಮೆ ಜನರಿಗೆ ಭರ್ಜರಿ ಕೊಡುಗೆ ನೀಡಿದ್ದು  ಬಹುನಿರೀಕ್ಷಿತ ಪೆರಾಕ್ ಬಾಬರ್‌ ಬೈಕ್‌ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

Advertisement

ಹೊಸ ಪರಾಕ್‌  ಬೈಕ್​ ವಿಭಿನ್ನವಾದ ಚಾಸಿಯನ್ನು ವಿನ್ಯಾಸ ಹೊಂದಿದ್ದು, ಎಂಜಿನ್‌ನಲ್ಲೂ ಬಹಳ ವ್ಯತ್ಯಾಸ ಕಂಡುಬರುತ್ತದೆ. ಮುಖ್ಯವಾಗಿ ಬಾಬರ್ ಬೈಕ್​ ಕೇವಲ ಒಂದು ಸೀಟು ಹೊಂದಿರುವ ವಿಶೇಷ ವಿನ್ಯಾಸ ಹೊಂದಿದ್ದು, ಹಿಂಭಾಗ ಭಿನ್ನ ರೀತಿಯ ಮೋನೋಶಾಕ್‌ ಮತ್ತು ಮುಂಭಾಗ ಟೆಲಿಸ್ಕೋಪಿಕ್‌ ಶಾಕ್ಸ್‌ ಅಬ್ಸರ್​​​ಗಳನ್ನು  ಹೊಂದಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ಬೈಕ್​ ನ ಬೆಲೆ 1.95 ಲಕ್ಷ  ಎಂದು ಕಂಪೆನಿ ತಿಳಿಸಿದೆ.

ಪೆರಾಕ್ ಬಾಬರ್ ವಿಶೇಷತೆ :

ನೂತನ ಬೈಕ್​ ಜಾವಾ ಪೆರಾಕ್​ ಬಾಬರ್​ ಬಿಎಸ್‌6 ಎಂಜಿನ್‌ ಹೊಂದಿದ್ದು, ಎಬಿಎಸ್‌ ಸ್ಟಾಂಡರ್ಡ್‌ ಫೀಚರ್‌ ಅನ್ನು ಒಳಗೊಂಡಿದೆ. ಇದು 334 ಸಿಸಿ ಸಿಂಗಲ್‌ ಸಿಲಿಂಡರ್‌ ಲಿಕ್ವಿಡ್‌ ಕೂಲ್ಡ್‌ ಎಂಜಿನ್‌ ಆಗಿದ್ದು, 31 ಎನ್‌ಎಂ ಟಾರ್ಕ್‌ ಉತ್ಪಾದಿಸಲಿದೆ. ಜತೆಗೆ ಮ್ಯಾಟ್‌ ಬ್ಲ್ಯಾಕ್‌ ಕಲರ್‌, ಭಿನ್ನ ರೀತಿಯ ಟೂಲ್‌ಬಾಕ್ಸ್‌, ಬಾರ್‌ ಎಂಡ್‌ ಮಿರರ್‌ಗಳು, ಆಕರ್ಷಕ ಫೆಂಡರ್‌ ಮತ್ತು ಉದ್ದನೆಯ ಸೈಲೆನ್ಸರ್‌ಗಳನ್ನು ಹೊಂದಿದೆ.

Advertisement

ಆದರೇ ಈ ಸೂಪರ್ ಬೈಕ್ ಭಾರತೀಯ ಗ್ರಾಹಕರ ಕೈಗೆ ಮುಂದಿನ ವರ್ಷ ಎಪ್ರಿಲ್‌ ನಲ್ಲಿ  ಲಭ್ಯವಾಗಲಿದೆ ಎಂದು ಕಂಪೆನಿ ಹೇಳಿಕೊಂಡಿದೆ. ವಿಶೇಷವೆಂದರೇ ಬಾಬರ್‌ ಶೈಲಿಯ ಬೈಕನ್ನು ಟ್ರಯಂಫ್ ಮಾತ್ರವೇ ಬಿಡುಗಡೆ ಮಾಡುತ್ತಿತ್ತು. ಇದೀಗ ಜಾವಾ ಕೂಡ ಹೊಸ ವಿನ್ಯಾಸದಲ್ಲಿ,  ಪೆರಾಕ್​ ಬೈಕ್​ ಅನ್ನು ಬಿಡುಗಡೆ ಮಾಡಿರುವುದು ಮಾರುಕಟ್ಟೆ ವಲಯದಲ್ಲಿ ಸಂಚಲನ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next