Advertisement
14 ಕುಸ್ತಿ ಪಂದ್ಯ:ಶ್ರೀ ಜಯಚಾಮರಾಜ ಒಡೆಯರ್ ಗರಡಿ ಸಂಘ ವಿವಿಧ ಗರಡಿ ಮನೆಗಳ ಸಹಯೋಗದಲ್ಲಿ ಆಯೋಜಿ ಸಿದ್ದ ನಾಡಕುಸ್ತಿ ಪಂದ್ಯಾವಳಿ ಇದಕ್ಕೆ ಸಾಕ್ಷಿಯಾಯಿತು. ಶಿವಮೊಗ್ಗ, ಬೆಳಗಾವಿ, ಚಿಕ್ಕನಾಯಕನಹಳ್ಳಿ ಸೇರಿ ರಾಜ್ಯದ ಮೂಲೆ-ಮೂಲೆಗಳಿಂದ 28ಕ್ಕೂ ಹೆಚ್ಚು ಪೈಲ್ವಾನರು ಆಗಮಿಸಿ ಜಟ್ಟಿ ತನ ಮೆರೆದರು. ಒಟ್ಟು 14 ಕುಸ್ತಿ ಪಂದ್ಯ ನಡೆದವು. ಬಗೆಬಗೆಯ ಹೂಗಳಿಂದ ಅಲಂಕಾರಗೊಂಡ ಮಟ್ಟಿ ಮೇಲೆ ಪೈಲ್ವಾನರು ವಿಭಿನ್ನ ಪಟ್ಟು ಪ್ರದರ್ಶಿಸಿದರು. ಮದಗಜಗಳ ರೀತಿ ಪೈಲ್ವಾನರು ಸೆಣೆಸುತ್ತಿದ್ದಂತೆ ಅಖಾಡದಲ್ಲಿ ಆಸೀನಾರಗಿದ್ದ ಪ್ರೇಕ್ಷರಿಂದ ನೆಚ್ಚಿನ ಪೈಲ್ವಾನರಿಗೆ ಜೈಕಾರ ಮೊಳಗಿದವು. ನೆಚ್ಚಿನ ಜಟ್ಟಿಗಳು ಪರಾಕ್ರಮ ಮೆರೆದು ಎದುರಾಳಿಯನ್ನು ಚಿತ್ ಮಾಡಿದಾಗ ಶಿಳ್ಳೆ, ಚಪ್ಪಾಳೆಗಳಿಂದ ಅಭಿನಂದನೆ ಸಲ್ಲಿಸುತ್ತಿದ್ದರು.
Related Articles
Advertisement
ಅಕ್ರಂಗೆ ಗೆಲುವು ಮೈಸೂರು ಪೈಲ್ವಾನ್ ವಿಷ್ಣು ಬಾಲಾಜಿ ಮತ್ತು ಶಿವಮೊಗ್ಗ ಪೈಲ್ವಾನ್ ಅಕ್ರಂ ನಡುವಿನ ಕುಸ್ತಿಆರಂಭದಿಂದಲೂ ರೋಚಕತೆಯಿಂದ ಕೂಡಿತ್ತು. ಪ್ರೇಕ್ಷಕರೂ ಕುತೂಹಲದಿಂದ ವೀಕ್ಷಿಸಿದರು. ಪಂದ್ಯದ ಪ್ರತಿ ಕ್ಷಣದಲ್ಲೂ ಚಪ್ಪಾಳೆ, ಸಿಳ್ಳೆ ಮೂಲಕ ಇವರಿಬ್ಬರನ್ನು ಪ್ರೋತಾಹಿಸಿದರು. ಆರಂಭದಿಂದಲೂ ಇಬ್ಬರುಪಟ್ಟಿಗೆ- ಪ್ರತಿಪಟ್ಟು ಹಾಕುತ್ತ ಮದಗಜಗಳ ರೀತಿ ಹೋರಾಡಿದರು. ಈ ವೇಳೆ ಎದುರಾಳಿ ಮೇಲೆ ಹಿಡಿತ ಸಾಧಿಸಿದ ಅಕ್ರಂ, ವಿಷ್ಣುರನ್ನುಚಿತ್ ಮಾಡಿದರು.
ಮತ್ತೂಂದು ಕುಸ್ತಿಯಲ್ಲಿ ಕುಂಬಾರ ಕೊಪ್ಪಲಿನ ಪೈ.ನಂದನ್ ವಿರುದ್ಧ ಶಿವಮೊಗ್ಗ ಪೈ.ಜಾವಿದ್ ಗೆಲುವಿನ ನಗೆ ಬೀರಿದರು. ಪೈ.ಫಯೀಜ್ ಕುರೈಶಿ ವಿರುದ್ಧ ಪೈ.ಬೈರನಾಯ್ಕ, ಪಡುವಾರಳ್ಳಿ ಪೈ. ಮಾಯಂಕ್ ವಿರುದ್ಧ ಕೆಸರೆ ಪೈ. ಗವಿರಂಗಪ್ಪ, ಆಲನಹಳ್ಳಿ ಪೈ. ಕಯಾಂ ವಿರುದ್ಧ ಪೈ.ನಿತಿನ್, ಇಟ್ಟಿಗೆಗೂಡು ಪೈ.ವರುಣ್ ವಿರುದ್ಧ ಚಿಕ್ಕನಾಯ್ಕನಹಳ್ಳಿ ಪೈ. ಹರ್ಷ ಜಯ ಸಾಧಿಸಿದರು.