Advertisement
“ಭಾರತದ ವೇಗದ ಬೌಲಿಂಗ್ ಆಕ್ರ ಮಣ ಬಹಳ ಸಮಯದ ಬಳಿಕ ಹೆಚ್ಚು ಅಪಾಯಕಾರಿಯಾಗಿ ಗೋಚರಿಸುತ್ತಿದೆ. ಬುಮ್ರಾ ಸೇರ್ಪಡೆಯಿಂದ ಈ ಬೌಲಿಂಗ್ ಪಡೆಯ ಬಲ ಹೆಚ್ಚಿದೆ. ಬುಮ್ರಾ ಸೂಪರ್‌ಸ್ಟಾರ್. ಮೂರೂ ಮಾದರಿಗಳಲ್ಲಿ ಅವರು ತಂಡದ ಪ್ರಧಾನ ಅಸ್ತ್ರವಾಗಿದ್ದಾರೆ’ ಎಂಬುದಾಗಿ ಗಿಲೆಸ್ಪಿ ಹೇಳಿದರು.
“ನಾನು ಆಸ್ಟ್ರೇಲಿಯವನ್ನು ಪ್ರತಿನಿಧಿಸುತ್ತಿದ್ದ ಕಾಲದಲ್ಲಿ ಜಾವಗಲ್ ಶ್ರೀನಾಥ್ ಇದ್ದರು. ಬಳಿಕ ಜಹೀರ್ ಖಾನ್ ಬಂದರು. ಶ್ರೀನಾಥ್ ಓರ್ವ ವಂಡರ್‌ಫುಲ್ ಬೌಲರ್. ಜಹೀರ್ ಭಾರತದ ಸೀಮ್ ದಾಳಿಗೆ ಹೊಸ ಆಕರ್ಷಣೆ ತಂದಿತ್ತರು. ಆದರೆ ಭಾರತದ ಅಂದಿನ ಹಾಗೂ ಇಂದಿನ ವೇಗದ ಬೌಲಿಂಗ್ ಪಡೆಯನ್ನು ತುಲನೆ ಮಾಡಲಾಗದು. ವೇಗದ ಬೌಲರ್‌ಗಳಿಗೆ ಬೇಕಿರುವುದು ಡೆಪ್ತ್. ಅದು ಈಗ ದೊಡ್ಡ ಮಟ್ಟದಲ್ಲಿ ಗೋಚರಿಸುತ್ತಿದೆ’ ಎಂದು ಗಿಲೆಸ್ಪಿ ಅಭಿಪ್ರಾಯಪಟ್ಟರು.