Advertisement

Team India; ಬುಮ್ರಾ -ಸಿರಾಜ್ ಕಾರಣದಿಂದ ಸ್ಪಿನ್ನರ್ ಗಳ ಒತ್ತಡ ಕಡಿಮೆಯಾಗಿದೆ: ಕುಲದೀಪ್

01:31 PM Oct 21, 2023 | Team Udayavani |

ಧರ್ಮಶಾಲಾ: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ನಲ್ಲಿ ಇದುವರಗೆ ಆಡಿರುವ ಎಲ್ಲಾ ನಾಲ್ಕು ಪಂದ್ಯಗಳನ್ನು ಗೆದ್ದಿರುವ ಭಾರತ ತಂಡವು ಇದೀಗ ನ್ಯೂಜಿಲ್ಯಾಂಡ್ ಸವಾಲಿಗೆ ಸಜ್ಜಾಗಿದೆ. ಧರ್ಮಶಾಲಾದಲ್ಲಿ ನಡೆಯಲಿರುವ ಈ ಮಹತ್ವದ ಪಂದ್ಯದಲ್ಲಿ ಭಾರತ 2019 ಸೆಮಿ ಫೈನಲ್ ಸೋಲಿಗೆ ಪ್ರತೀಕಾರ ತೀರಿಸಿಕೊಳ್ಳುವ ತವಕದಲ್ಲಿದೆ.

Advertisement

ಇದುವರೆಗೆ ಆಡಿರುವ ಎಲ್ಲಾ ನಾಲ್ಕು ಪಂದ್ಯಗಳನ್ನು ಸುಲಭದಲ್ಲಿಯೇ ಗೆದ್ದುಕೊಂಡಿದೆ. ಬೌಲರ್ ಗಳ ಉತ್ತಮ ಪ್ರದರ್ಶನದ ಕಾರಣದಿಂದ ರೋಹಿತ್ ಬಳಗ ಮೇಲುಗೈ ಸಾಧಿಸುತ್ತಿದೆ ಎಂದರೆ ತಪ್ಪಾಗಲಾರದು.

ಭಾರತದ ಬೌಲರ್‌ ಗಳು ತಮ್ಮ ನಾಲ್ಕು ಪಂದ್ಯಗಳಲ್ಲಿ 36 ವಿಕೆಟ್‌ಗಳನ್ನು ಕಿತ್ತಿದ್ದಾರೆ. ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳನ್ನು 200 ಕ್ಕಿಂತ ಕಡಿಮೆ ರನ್‌ ಗಳಿಗೆ ಔಟ್ ಮಾಡುವಲ್ಲಿ ಯಶಸ್ವಿಯಾದರು, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ವಿರುದ್ಧ ತಲಾ ಎಂಟು ವಿಕೆಟ್‌ ಗಳನ್ನು ಪಡೆದರು.

“ಮೊದಲ ಪವರ್‌ಪ್ಲೇಯೊಂದಿಗೆ ಉತ್ತಮವಾಗಿ ಪ್ರಾರಂಭಿಸುವುದು ಬಹಳ ಮುಖ್ಯ. ಜಸ್ಪ್ರೀತ್ ಬುಮ್ರಾ ಮತ್ತು ಸಿರಾಜ್ ನಿಜವಾಗಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ” ಎಂದು ಸ್ಪಿನ್ನರ್ ಕುಲದೀಪ್ ಯಾದವ್ ತಿಳಿಸಿದ್ದಾರೆ.

“ಕೇವಲ ವಿಕೆಟ್ ಕೀಳುವುದಲ್ಲ, ಅವರು ರನ್ ಕೂಡಾ ನಿಯಂತ್ರಣ ಮಾಡುತ್ತಾರೆ. ಇದು ನಾನು ಮತ್ತು ಜಡೇಜಾ ಬೌಲಿಂಗ್ ಗೆ ಬಂದಾಗ ಸಹಾಯ ಮಾಡುತ್ತದೆ” ಎಂದರು.

Advertisement

ಕೂಟದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಕುಲದೀಪ್ ಉತ್ತಮ ಎಕಾನಮಿ ದರವನ್ನು ಕಾಯ್ದುಕೊಂಡು ಆರು ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ.

“ನಾವು ಲೆಂತ್ ಮೇಲೆ ಕೆಲಸ ಮಾಡುತ್ತಿದ್ದೇವೆ. ನಾನು ಮತ್ತು ಜಡ್ಡು ಭಾಯ್ ಸರಳವಾಗಿ ಆಡುತ್ತಿದ್ದೇವೆ” ಎಂದು ಕುಲದೀಪ್ ಹೇಳಿದರು.

“ನಾವು ಉತ್ತಮ ವಿಕೆಟ್‌ಗಳನ್ನು ಪಡೆಯುತ್ತಿದ್ದೇವೆ, ಆದರೆ ಅದನ್ನು ಸರಳವಾಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ ಮತ್ತು ಪ್ರತಿ ಪಂದ್ಯದಲ್ಲೂ ಅದನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ನೀವು ಮಧ್ಯಮ ಓವರ್‌ ಗಳಲ್ಲಿ ಆರಂಭಿಕ ವಿಕೆಟ್ ಅನ್ನು ತೆಗೆದುಕೊಂಡರೆ, ಖಂಡಿತವಾಗಿಯೂ ಅದು ನಿಮಗೆ ಆತ್ಮವಿಶ್ವಾಸವನ್ನು ನೀಡುತ್ತದೆ. ಅಲ್ಲದೆ ರನ್ ರೇಟ್ ಅನ್ನು ನಿಯಂತ್ರಿಸುತ್ತದೆ.” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next