Advertisement

ಪರ್ಫಾರ್ಮ್ಯಾಕ್ಸ್‌ ಬ್ರ್ಯಾಂಡ್‌ ಅಂಬಾಸಿಡರ್ ಆಗಿ ಜಸ್‌ಪ್ರೀತ್ ಬುಮ್ರಾ

09:08 PM Sep 05, 2022 | Team Udayavani |

ಮುಂಬೈ: ರಿಲಯನ್ಸ್‌ ರಿಟೇಲ್‌ನ ತಾಂತ್ರಿಕವಾಗಿ ಸುಧಾರಿತ ಕ್ರೀಡಾ ಉಡುಪು ಬ್ರ್ಯಾಂಡ್‌ ಪರ್ಫಾರ್ಮ್ಯಾಕ್ಸ್‌(Performax) ಕ್ರಿಕೆಟ್ ಸ್ಟಾರ್, ಪ್ರಮುಖ ಬೌಲರ್ ಜಸ್‌ಪ್ರೀತ್ ಬುಮ್ರಾ ಅವರನ್ನು ಬ್ರ್ಯಾಂಡ್‌ ಅಂಬಾಸಿಡರ್ ಆಗಿ ನೇಮಿಸಿದೆ.

Advertisement

ಪರ್ಫಾರ್ಮ್ಯಾಕ್ಸ್‌ ಭಾರತೀಯ ಬ್ರ್ಯಾಂಡ್ ಆಗಿದ್ದು, ದೇಶದ ನಂ.1 ಕ್ರೀಡಾ ಉಡುಪು ಬ್ರ್ಯಾಂಡ್ ಆಗಿ ಹೊರಹೊಮ್ಮುವ ಗುರಿಯನ್ನು ಹೊಂದಿದೆ.

ಈ ಸಂದರ್ಭದಲ್ಲಿ ಮಾತನಾಡಿದ ರಿಲಯನ್ಸ್‌ ರಿಟೇಲ್‌ನ ಫ್ಯಾಷನ್‌ ಮತ್ತು ಲೈಫ್‌ಸ್ಟೈಲ್‌ನ ಸಿಇಒ ಅಖಿಲೇಶ್‌ ಪ್ರಸಾದ್ “ಜಸ್‌ಪ್ರೀತ್ ಬುಮ್ರಾ ಜೊತೆಗೆ ನಮ್ಮ ಸಹಭಾಗಿತ್ವವನ್ನು ಘೋಷಿಸುವುದಕ್ಕೆ ಹೆಮ್ಮೆಯಾಗುತ್ತಿದೆ. ಜಸ್‌ಪ್ರೀತ್ ಹಲವು ವರ್ಷಗಳಿಂದಲೂ ಭಾರತ ತಂಡದ ಪ್ರಮುಖ ಪೇಸರ್ ಆಗಿ ಕಾಣಿಸಿಕೊಂಡಿದ್ದಾರೆ. ಅದೇ ರೀತಿ, ಅಂತಾರಾಷ್ಟ್ರೀಯ ಮಾನ್ಯತೆ ಹೊಂದಿರುವ ಭಾರತದ ನಂ.1 ಕ್ರೀಡಾ ಬ್ರ್ಯಾಂಡ್ ಆಗಿ ಪರ್ಫಾರ್ಮ್ಯಾಕ್ಸ್ ಅನ್ನು ರೂಪಿಸುವ ಧ್ಯೇಯವನ್ನು ನಾವು ಹೊಂದಿದ್ದೇವೆ. ಪರ್ಫಾರ್ಮ್ಯಾಕ್ಸ್‌ ಅನ್ನು ನಮ್ಮ ಗ್ರಾಹಕರಿಗೆ ಒಂದು ಉತ್ತಮ ಮತ್ತು ಆದ್ಯತೆಯ ಬ್ರ್ಯಾಂಡ್ ಆಗಿಸುವ ನಿಟ್ಟಿನಲ್ಲಿ ನಾವು ಇಡುತ್ತಿರುವ ಹೆಜ್ಜೆಗಳಲ್ಲಿ ಇದು ಮೊದಲನೆಯಾಗಿದೆ.” ಎಂದರು.

ಬುಮ್ರಾ ಮಾತನಾಡಿ, ನನ್ನ ಧ್ಯೇಯಕ್ಕೂ ಈ ಬ್ರ್ಯಾಂಡ್‌ನ ಧ್ಯೇಯಕ್ಕೂ ಹೊಂದಿಕೆ ಆಗುವುದರಿಂದ ಇದರ ಜೊತೆಗೆ ನಾನು ಗುರುತಿಸಿಕೊಳ್ಳುತ್ತಿರುವುದು ಖುಷಿಯ ಸಂಗತಿ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next