Advertisement

ಬೇರ್‌ಸ್ಟೊ ಶತಕ; ಇಂಗ್ಲೆಂಡಿಗೆ 4-0 ಸರಣಿ

07:00 AM Oct 01, 2017 | Team Udayavani |

ಸೌತಾಂಪ್ಟನ್‌: ವೆಸ್ಟ್‌ ಇಂಡೀಸ್‌ ಮತ್ತೂಮ್ಮೆ ದೊಡ್ಡ ಮೊತ್ತ ಪೇರಿಸಿಯೂ ಸೋಲಿನ ಸುಳಿಗೆ ಸಿಲುಕಿದೆ. ಜಾನಿ ಬೇರ್‌ಸ್ಟೊ ಅವರ ಅಮೋಘ ಶತಕ ಸಾಹಸದಿಂದ ಇಂಗ್ಲೆಂಡ್‌ 9 ವಿಕೆಟ್‌ಗಳ ಭರ್ಜರಿ ಜಯದೊಂದಿಗೆ 5 ಪಂದ್ಯಗಳ ಏಕದಿನ ಸರಣಿಯನ್ನು 4-0 ಅಂತರದಿಂದ ವಶಪಡಿಸಿಕೊಂಡಿದೆ.

Advertisement

ಶುಕ್ರವಾರ ಇಲ್ಲಿನ “ರೋಸ್‌ಬೌಲ್‌ ಸ್ಟೇಡಿಯಂ’ನಲ್ಲಿ ನಡೆದ 5ನೇ ಹಾಗೂ ಅಂತಿಮ ಏಕದಿನದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ವೆಸ್ಟ್‌ ಇಂಡೀಸ್‌ 6 ವಿಕೆಟಿಗೆ 288 ರನ್‌ ಪೇರಿಸಿದರೆ, ಇಂಗ್ಲೆಂಡ್‌ ಕೇವಲ 38 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 294 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು. ಆರಂಭಕಾರರಾದ ಜಾಸನ್‌ ರಾಯ್‌ ಹಾಗೂ ಜಾನಿ ಬೇರ್‌ಸ್ಟೊ ಅವರ ಪ್ರಚಂಡ ಬ್ಯಾಟಿಂಗ್‌ ಆಂಗ್ಲರ ಗೆಲುವನ್ನು ನಿರೀಕ್ಷೆಗಿಂತಲೂ ಸುಲಭಗೊಳಿಸಿತು. ಇವರಿಬ್ಬರು ಮೊದಲ ವಿಕೆಟಿಗೆ 21.2 ಓವರ್‌ಗಳಿಂದ 156 ರನ್‌ ಪೇರಿಸಿದರು. ಬಳಿಕ ಬೇರ್‌ಸ್ಟೊ ಮತ್ತು ಜೋ ರೂಟ್‌ ಮುರಿಯದ 2ನೇ ವಿಕೆಟಿಗೆ 138 ರನ್‌ ರಾಶಿ ಹಾಕಿ ವಿಂಡೀಸ್‌ ದಾಳಿಯನ್ನು ಧೂಳೀಪಟಗೊಳಿಸಿದರು.

ಜಾನಿ ಬೇರ್‌ಸ್ಟೊ ಗಳಿಕೆ ಅಜೇಯ 141 ರನ್‌. ಇದು ಅವರ 2ನೇ ಶತಕ ಹಾಗೂ ಜೀವನಶ್ರೇಷ್ಠ ಬ್ಯಾಟಿಂಗ್‌. 114 ಎಸೆತ ಎದುರಿಸಿದ ಅವರು 17 ಬೌಂಡರಿ ಬಾರಿಸಿದರು. ಜಾಸನ್‌ ರಾಯ್‌ ನಾಲ್ಕೇ ರನ್ನಿನಿಂದ ಶತಕ ವಂಚಿತರಾಗಬೇಕಾಯಿತು. ಅವರ 96 ರನ್‌ 70 ಎಸೆತಗಳಿಂದ ಬಂತು. ಸಿಡಿದದ್ದು 11 ಬೌಂಡರಿ. ರೂಟ್‌ ಔಟಾಗದೆ 46 ರನ್‌ ಹೊಡೆದರು.

ವೆಸ್ಟ್‌ ಇಂಡೀಸ್‌ ಪರ ಶೈ ಹೋಪ್‌ ಸರ್ವಾಧಿಕ 72 ರನ್‌, ಕ್ರಿಸ್‌ ಗೇಲ್‌ 40 ರನ್‌ ಹೊಡೆದರು. ಕೈಲ್‌ ಹೋಪ್‌ (33), ಸಾಮ್ಯುಯೆಲ್ಸ್‌ (32), ಮೊದಲ ಪಂದ್ಯವಾಡಿದ ಸುನೀಲ್‌ ಆ್ಯಂಬ್ರಿಸ್‌ (ಅಜೇಯ 38), ಆ್ಯಶೆÉ ನರ್ಸ್‌ (31) ಮೂವತ್ತರ ಗಡಿ ದಾಟಿದರು.

ಜಾನಿ ಬೇರ್‌ಸ್ಟೊ ಪಂದ್ಯಶ್ರೇಷ್ಠ, ಮೊಯಿನ್‌ ಅಲಿ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಸರಣಿಯ ಒಂದು ಪಂದ್ಯ ಮಳೆಯಿಂದ ರದ್ದುಗೊಂಡಿತ್ತು.

Advertisement

ಸಂಕ್ಷಿಪ್ತ ಸ್ಕೋರ್‌: ವೆಸ್ಟ್‌ ಇಂಡೀಸ್‌-6 ವಿಕೆಟಿಗೆ 288 (ಶೈ ಹೋಪ್‌ 72, ಗೇಲ್‌ 40, ಆ್ಯಂಬ್ರಿಸ್‌ ಔಟಾಗದೆ 38, ಪ್ಲಂಕೆಟ್‌ 54ಕ್ಕೆ 2). ಇಂಗ್ಲೆಂಡ್‌-38 ಓವರ್‌ಗಳಲ್ಲಿ ಒಂದು ವಿಕೆಟಿಗೆ-294 (ಬೇರ್‌ಸ್ಟೊ ಔಟಾಗದೆ 141, ರಾಯ್‌ 96, ಕಮಿನ್ಸ್‌ 70ಕ್ಕೆ 1). ಪಂದ್ಯಶ್ರೇಷ್ಠ: ಬೇರ್‌ಸ್ಟೊ. ಸರಣಿಶ್ರೇಷ್ಠ: ಮೊಯಿನ್‌ ಅಲಿ.

Advertisement

Udayavani is now on Telegram. Click here to join our channel and stay updated with the latest news.

Next