Advertisement

ನಾಲ್ಕು ಎಸೆತದಲ್ಲಿ ನಾಲ್ಕು ವಿಕೆಟ್ ಕಿತ್ತು ದಾಖಲೆ ಬರೆದ ಜೇಸನ್ ಹೋಲ್ಡರ್

11:41 AM Jan 31, 2022 | Team Udayavani |

ಬಾರ್ಬಡೋಸ್: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಜಯ ಸಾಧಿಸಿದೆ. ವೇಗಿ ಜೇಸನ್ ಹೋಲ್ಡರ್ ನಾಲ್ಕು ಎಸೆತದಲ್ಲಿ ನಾಲ್ಕು ವಿಕೆಟ್ ಕಿತ್ತು ದಾಖಲೆ ಬರೆದರು.

Advertisement

ಮೊದಲು ಬ್ಯಾಟಿಂಗ್ ನಡೆಸಿದ ವಿಂಡೀಸ್ 4 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿದರೆ, ಇಂಗ್ಲೆಂಡ್ ತಂಡವು 162 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಈ ಮೂಲಕ 17 ರನ್ ಗಳ ಅಂತರದ ಜಯ ಸಾಧಿಸಿತು.

ವಿಂಡೀಸ್ ಪರ ಕೈರನ್ ಪೊಲಾರ್ಡ್ 41 ರನ್, ರೋಮನ್ ಪೊವೆಲ್ 35 ರನ್, ಬ್ರಾಂಡನ್ ಕಿಂಗ್ 34 ರನ್ ಮತ್ತು ಮೇಯರ್ಸ್ 31 ರನ್ ಗಳಿಸಿದರು. ಆದಿಲ್ ರಶೀದ್ ಮತ್ತು ಲಿವಿಂಗ್ಟಸನ್ ತಲಾ ಎರಡು ವಿಕೆಟ್ ಪಡೆದರು.

ಗುರಿ ಬೆನ್ನತ್ತಿದ ಇಂಗ್ಲೆಂಡ್ ಗೆ ಜೇಮ್ಸ್ ವಿನ್ಸ್ 55 ರನ್ ಮತ್ತು ಸ್ಯಾಮ್ ಬಿಲ್ಲಿಂಗ್ಸ್ 41 ರನ್ ಗಳಿಸಿ ಆಧರಿಸಿದರು. ಟಾಮ್ ಬ್ಯಾಂಟನ್ 16 ರನ್ ಗಳಿಸಿದರು. ಕೊನೆಯ ಓವರ್ ನಲ್ಲಿ ಇಂಗ್ಲೆಂಡ್ ಗೆ 20 ರನ್ ಅಗತ್ಯವಿತ್ತು. ಜೇಸನ್ ಹೋಲ್ಡರ್ ಕೇವಲ ಒಂದು ರನ್ ನೀಡಿ ಸತತ ನಾಲ್ಕು ಎಸೆತದಲ್ಲಿ ನಾಲ್ಕು ವಿಕೆಟ್ ಪಡೆದರು.

ಇದನ್ನೂ ಓದಿ:ಜನರ ಮೇಲೆ ಹರಿದ ಎಲೆಕ್ಟ್ರಿಕ್ ಬಸ್: 6 ಮಂದಿ ದುರ್ಮರಣ, ಹಲವರಿಗೆ ಗಾಯ

Advertisement

ಐದು ಪಂದ್ಯಗಳ ಸರಣಿಯನ್ನು ವೆಸ್ಟ್ ಇಂಡೀಸ್ ತಂಡ 3-2 ಅಂತರದಿಂದ ವಶಪಡಿಸಿಕೊಂಡಿತು. ಜೇಸನ್ ಹೋಲ್ಡರ್ ಅವರು ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next