Advertisement

ಸನ್‌ರೈಸರ್ನಿಂದ ಮಾರ್ಷ್‌ ಔಟ್‌ ; ಜಾಸನ್‌ ಹೋಲ್ಡರ್‌ ಸೇರ್ಪಡೆ

01:14 AM Sep 24, 2020 | mahesh |

ದುಬಾೖ: ಸನ್‌ರೈಸರ್ ಹೈದರಾಬಾದ್‌ ತಂಡದ ಆಸ್ಟ್ರೇಲಿಯನ್‌ ಆಲ್‌ರೌಂಡರ್‌ ಮಿಚೆಲ್‌ ಮಾರ್ಷ್‌ ಐಪಿಎಲ್‌ನಿಂದಲೇ ಹೊರಬೀಳುವ ಸಂಕಟಕ್ಕೆ ಸಿಲುಕಿದ್ದಾರೆ.

Advertisement

ಸೋಮವಾರದ ಆರ್‌ಸಿಬಿ ಎದುರಿನ ಪಂದ್ಯದ ವೇಳೆ ಬೌಲಿಂಗ್‌ ಮಾಡು ತ್ತಿದ್ದಾಗ ಅವರು ಪಾದಕ್ಕೆ ನೋವು ಮಾಡಿಕೊಂಡಿದ್ದರು. ಇದು ಗಂಭೀರ ಸ್ವರೂಪದ್ದಾಗಿದೆ ಎಂದು ತಂಡದ ಮೂಲಗಳು ತಿಳಿಸಿದ್ದವು. ಇದೀಗ ನಿಜವಾಗಿದೆ. ಇವರ ಬದಲು ವೆಸ್ಟ್‌ ಇಂಡೀಸಿನ ಆಲ್‌ರೌಂಡರ್‌ ಜಾಸನ್‌ ಹೋಲ್ಡರ್‌ ಸೇರ್ಪಡೆಗೊಂಡಿದ್ದಾರೆ ಎಂದು ಫ್ರಾಂಚೈಸಿ ಟ್ವೀಟ್‌ ಮಾಡಿದೆ.

ಓವರಿನ 2ನೇ ಎಸೆತದ ವೇಳೆ ಆರನ್‌ ಫಿಂಚ್‌ ಹೊಡೆದ ಚೆಂಡನ್ನು ತಡೆಯುವ ಪ್ರಯತ್ನ ಮಾಡು ತ್ತಿದ್ದಾಗ ಮಾರ್ಷ್‌ ಕಾಲು ಉಳುಕಿಸಿ ಕೊಂಡಿದ್ದರು. ಕೊನೆಗೆ ನಾಲ್ಕೇ ಎಸೆತ ಗಳನ್ನೆಸೆದು ಹೊರನಡೆದಿದ್ದರು. ತಂಡದ ಬ್ಯಾಟಿಂಗ್‌ ಕುಸಿತದ ವೇಳೆ 10ನೇ ಕ್ರಮಾಂಕದಲ್ಲಿ ಆಡಲಿಳಿದರೂ ಮಾರ್ಷ್‌ ಯಶಸ್ಸು ಕಂಡಿರಲಿಲ್ಲ.

ಸನ್‌ರೈಸರ್ ಹೈದರಾಬಾದ್‌ ತನ್ನ ಮುಂದಿನ ಪಂದ್ಯವನ್ನು ಶನಿವಾರ ಕೆಕೆಆರ್‌ ವಿರುದ್ಧ ಅಬುಧಾಬಿಯಲ್ಲಿ ಆಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next