Advertisement

ಬೆಳ್ಮಣ್‌: ಲಾಕ್‌ ಡೌನ್‌ ನಡುವೆಯೂ ಕದ್ದುಮುಚ್ಚಿ ಮಲ್ಲಿಗೆ ವ್ಯಾಪಾರ…!

11:39 AM Apr 12, 2020 | sudhir |

ಬೆಳ್ಮಣ್‌: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಎಲ್ಲ ಚಟುವಟಿಕೆಗಳು ಸ್ತಬ್ಧವಾಗಿದ್ದರೂ ಬೆಳ್ಮಣ್‌, ಸಾಂತೂರು, ಶಿರ್ವ, ಶಂಕರಪುರದಲ್ಲಿ ಕೆಲವು ಮಲ್ಲಿಗೆ ಕಟ್ಟೆಯವರು ಮನೆ ಮನೆಗೆ ಹೋಗಿ ಮಲ್ಲಿಗೆ ಖರೀದಿ ಮುಂದುವರಿಸಿದ್ದಾರೆ.

Advertisement

ಶಂಕರಪುರ ದರ ಕೇಂದ್ರದಲ್ಲಿ ನಡೆದ ಮಲ್ಲಿಗೆ ವ್ಯಾಪಾರಿಗಳ ಸಭೆಯಲ್ಲಿ ಮಲ್ಲಿಗೆ ಖರೀದಿಸಬಾರದು ಎಂದು ನಿರ್ಧರಿಸಲಾಗಿದ್ದರೂ ಹಣದಾಸೆಗೆ ಆದೇಶ ಮೀರಿ ವ್ಯಾಪಾರ ಮಾಡಲಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಸುರತ್ಕಲ್‌ ಭಾಗದಿಂದ ಕೆಲವು ವ್ಯಕ್ತಿಗಳು ಕದ್ದು ಮುಚ್ಚಿ ಈ ಭಾಗಕ್ಕೆ ಬಂದು ಮಲ್ಲಿಗೆ ಕೃಷಿಕರಿಗೆ ಚೆಂಡು ಒಂದರ ತಲಾ ಹತ್ತು ರೂ. ನೀಡಿ ಮಲ್ಲಿಗೆ ಖರೀದಿಸುತ್ತಿದ್ದಾರೆ.

ವೈದ್ಯಕೀಯ ಸಿಬಂದಿ, ಆರೋಗ್ಯ ಕಾರ್ಯಕರ್ತರು, ಪೌರ ಕಾರ್ಮಿಕರು ಪೊಲೀಸರು ನಾಗರಿಕರ ಆರೋಗ್ಯ ರಕ್ಷಣೆಗೆ ಹೋರಾಡುತ್ತಿರುವ ಸಂದರ್ಭ ಕೆಲವರು ಕಾನೂನು ಮೀರಿ ನಡೆಯುತ್ತಿದ್ದಾರೆ.

ಇವರ ವಿರುದ್ಧ ಕ್ರಮಕ್ಕೆ ಇಲ್ಲಿನ ನಾಗರಿಕರು ಆಗ್ರಹಿಸಿದ್ದಾರೆ.

Advertisement

ನಾಗರಿಕರ ಸಮಯಪ್ರಜ್ಞೆ
ಕಳೆದ ಎ.1 ರಂದು ಮಂಗಳೂರು ಭಾಗದಿಂದ ದ್ವಿಚಕ್ರವಾಹನದಲ್ಲಿ ಮಲ್ಲಿಗೆ ಖರೀದಿಸಲು ಬಂದವರನ್ನು ಬಂಟಕಲ್ಲು ಪರಿಸರದ ನಾಗರಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಈ ಕಾರಣದಿಂದಾಗಿ ಮಂಗಳೂರು ಭಾಗದ ವ್ಯಾಪಾರಿಗಳು ಸ್ಥಳೀಯ ಕಟ್ಟೆಗಳ ಏಜಂಟರ ಮೂಲಕವೇ ಮಲ್ಲಿಗೆ ಪಡೆದು ವ್ಯಾಪಾರ ಕುದುರಿಸಿಕೊಳ್ಳುತ್ತಿರುವುದೂ ಬೆಳಕಿಗೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next