Advertisement

ಮಲ್ಲಿಗೆ ಬೆಳೆಗಾರರಿಗೆ ಮಾರುಕಟ್ಟೆ ವ್ಯವಸ್ಥೆ

04:03 PM Apr 19, 2020 | Naveen |

ಹಗರಿಬೊಮ್ಮನಹಳ್ಳಿ: ಶಿವಮೊಗ್ಗ ಮಾರುಕಟ್ಟೆಗೆ ಮಲ್ಲಿಗೆ ಮೊಗ್ಗು ಸಾಗಣೆಗೆ ವಾಹನದ ಸೌಲಭ್ಯ ಕಲ್ಪಿಸಲಾಗುವುದು ಎಂದು ಶಾಸಕ ಎಸ್‌.ಭೀಮಾನಾಯ್ಕ ತಿಳಿಸಿದರು.

Advertisement

ತಾಲೂಕಿನ ಪಿಂಜಾರಹೆಗ್ಡಾಳ್‌ ಗ್ರಾಮದ ಮಲ್ಲಿಗೆ ಬೆಳೆಗಾರರ ತೋಟಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು. ತೋಟಗಾರಿಕೆ ಬೆಳೆನಷ್ಟ ಪರಿಹಾರಕ್ಕೆ ಸಿಎಂ ಬಳಿ ಚರ್ಚೆ ನಡೆಸಲಾಗುವುದು. ಕೊಟ್ಟೂರಿನ ಮಾರುಕಟ್ಟೆಯಲ್ಲಿ ಮಲ್ಲಿಗೆ ಮಾರಾಟಕ್ಕೆ ಅನುವು ಮಾಡಲು ತಹಸೀಲ್ದಾರ್‌ಗೆ ಸೂಚನೆ ನೀಡಿದರು. ಒಟ್ಟು 600 ಎಕರೆ ಪ್ರದೇಶದಲ್ಲಿ ನಿತ್ಯ 4 ಟನ್‌ಗೂ ಹೆಚ್ಚು ಮಲ್ಲಿಗೆ ಒಕ್ಕಣೆಯಾಗುತ್ತಿದೆ. ಗಂಗಾವತಿ ಮತ್ತು ಶಿವಮೊಗ್ಗ ಜಿಲ್ಲಾಧಿಕಾರಿಗಳಿಂದ ರೈತರಿಗೆ ಅಡ್ಡಿಪಡಿಸಿದಂತೆ ದೂರವಾಣಿಯಲ್ಲೇ ಕೋರಿದರು. ಶಾಸಕರ ಕ್ರಮಕ್ಕೆ ಮಲ್ಲಿಗೆ ಬೆಳೆಗಾರರು ಮೆಚ್ಚುಗೆ ವ್ಯಕ್ತಪಡಿಸಿದರು.

ಸರಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಬೆಳೆಗಾರರಾದ ಜೆ.ಎಂ. ವೀರಸಂಗಯ್ಯ, ಆರ್‌. ಎಸ್‌. ಬಸವರಾಜ, ಹೆಗಾxಳ್‌ ರಾಮಣ್ಣ ಇತರರು ಒತ್ತಾಯಿಸಿದರು. ನಾಗಭೂಷಣ, ಹನುಮಂತಪ್ಪ, ವೆಂಕಟೇಶ, ಬಿ.ಕೆ. ಬಸವರಾಜ, ಹೆಗ್ಡಾಳ್‌ ರಾಜ ಮುಂತಾದ ಬೆಳೆಗಾರರಿದ್ದರು. ತಹಶೀಲ್ದಾರ್‌ ಆಶಪ್ಪ ಪೂಜಾರ್‌, ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಡಾ| ಜಿ. ಪರಮೇಶ್ವರ, ಎಡಿಎ ಹುಸೇನ್‌ ಸಾಬ್‌ ರೈತರಿಂದ ಮಾಹಿತಿ ಪಡೆದರು. ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ, ಮುಖಂಡರಾದ ಕನ್ನಿಹಳ್ಳಿ ಚಂದ್ರಶೇಖರ, ಹಾಲ್ದಾಳ್‌ ವಿಜಯಕುಮಾರ, ಪವಾಡಿ ಹನುಮಂತಪ್ಪ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next