Advertisement

ಮಲ್ಲಿಗೆ ಬೆಳೆ:  ವೈಜ್ಞಾನಿಕ ಬೇಸಾಯ ಪದ್ಧತಿ ತರಬೇತಿ ಉದ್ಘಾಟನೆ

01:15 AM Feb 23, 2019 | |

ಶಿರ್ವ: ತೋಟಗಾರಿಕೆ ಇಲಾಖೆ ಜಿ. ಪಂ., ಪುಷ್ಪ ಹರಾಜು ಕೇಂದ್ರ ಉಡುಪಿ ಹಾಗೂ ರೋಟರಿ ಕ್ಲಬ್‌ ಶಿರ್ವ ಇವುಗಳ  ಸಂಯುಕ್ತ ಆಶ್ರಯದಲ್ಲಿ ಹೂ ಕೃಷಿಗೆ ಉತ್ತೇಜನ ಕಾರ್ಯಕ್ರಮದಡಿಯಲ್ಲಿ ರೈತರಿಗೆ ಮಲ್ಲಿಗೆ ಬೆಳೆಯ ವೈಜ್ಞಾನಿಕ ಬೇಸಾಯ ಪದ್ಧತಿ ಕುರಿತು ತರಬೇತಿ ಕಾರ್ಯಕ್ರಮವು ಗುರುವಾರ  ಮಂದಾರದ ಸಭಾಂಗಣದಲ್ಲಿ ನಡೆಯಿತು. 

Advertisement

ಶಿರ್ವ ಗ್ರಾ.ಪಂ. ಅಧ್ಯಕ್ಷೆ ವಾರಿಜಾ ಪೂಜಾರ್ತಿ  ಕಾರ್ಯಕ್ರಮ ಉದ್ಘಾಟಿಸಿ  ಅಧ್ಯಕ್ಷತೆ ವಹಿಸಿ ಮಾತನಾಡಿ ರೈತರು ಮಲ್ಲಿಗೆ ಕೃಷಿ  ಲಾಭದಾಯಕವಾಗುವಂತೆ ಕೃಷಿ ತಜ್ಞರಿಂದ ತರಬೇತಿ ಪಡೆದು ಸಾವಯವ ಕೃಷಿಯೊಂದಿಗೆ ತಾಂತ್ರಿಕ ಪದ್ಧತಿ ಅಳವಡಿಸಿಕೊಂಡು ಉತ್ತಮ ಆದಾಯ ಗಳಿಸಿ ಅಭಿವೃದ್ಧಿ ಪಥದತ್ತ ಸಾಗಬಹುದಾಗಿದೆ ಎಂದರು. ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಭಾಸ್ಕರ್‌ ಮಾತನಾಡಿ ವಿವಿಧ ಕಾರಣಗಳಿಂದ ಮಲ್ಲಿಗೆ ಬೆಳೆಗಾರರ ಸಂಖ್ಯೆ ಇಳಿಮುಖವಾಗುತ್ತಿದ್ದು, ಯುವ ರೈತರಿಗೆ ವೈಜ್ಞಾನಿಕ ಮಲ್ಲಿಗೆ ಕೃಷಿ ಪದ್ಧತಿಯ ತರಬೇತಿ ನೀಡಿ ಮಲ್ಲಿಗೆ ಬೆಳೆ  ಉಳಿಸಿ ಬೆಳೆಸಬೇಕಾಗಿದೆ. ಅದರೊಂದಿಗೆ ಮೈಸೂರು ಮಲ್ಲಿಗೆ, ಭಟ್ಕಳ ಮಲ್ಲಿಗೆ, ಜಾಜಿ ಮೊದಲಾದ 8 ರೀತಿಯ ಮಲ್ಲಿಗೆ ಗಿಡಗಳು ತೋಟಗಾರಿಕೆ ಇಲಾಖೆಯಲ್ಲಿ ಲಭ್ಯವಿದ್ದು ಹೊಸ ಬೆಳೆಗಳನ್ನು ಪರಿಚಯಿಸಲು ರೈತರು ಇಲಾಖೆಯ ಜತೆ ಕೈಜೋಡಿಸ ಬೇಕು ಎಂದರು. 

ಮುಖ್ಯ ಅತಿಥಿ ಶಿರ್ವ ರೋಟರಿ ಅಧ್ಯಕ್ಷ ದೆಂದೂರು ದಯಾನಂದ ಶೆಟ್ಟಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಬ್ರಹ್ಮಾವರ ಕೃಷಿ ಕೇಂದ್ರದ ವಿಜ್ಞಾನಿ  ಎಚ್‌.ಎಸ್‌. ಪ್ರಸನ್ನ ವೈಜ್ಞಾನಿಕ ಮಲ್ಲಿಗೆ ಬೇಸಾಯ ಪದ್ಧತಿಯ ಕುರಿತು  ಮಾಹಿತಿ ನೀಡಿದರು. ಕೃಷಿ ಅನುವುಗಾರ ರಾಘವೇಂದ್ರ ನಾಯಕ್‌ ಸ್ವಾಗತಿಸಿದರು. ಉಡುಪಿ ತೋಟಗಾರಿಕೆ ಮಾಹಿತಿ , ಸಲಹಾ ಕೇಂದ್ರದ ವಿಷಯ ತಜ್ಞೆ  ರಶ್ಮಾ ಚಾತ್ರ ಕೆ. ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next