ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿ.ಡಿ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಸಿ.ಡಿ ಯಲ್ಲಿ ಕಾಣಿಸಿಕೊಂಡಿದ್ದ ಯುವತಿಯ ಬಳಿಕ ಆರೋಪ ಕೇಳಿಬರುತ್ತಿರುವ ಮಾಜಿ ಪತ್ರಕರ್ತ ನರೇಶ್ ಕೂಡಾ ಇಂದು ವಿಡಿಯೋ ಬಿಡುಗಡೆ ಮಾಡಿದ್ದು, ತನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿಕೊಂಡಿದ್ದಾರೆ.
ಎಂಟು ನಿಮಿಷಗಳ ವಿಡಿಯೋ ಬಿಡುಗಡೆ ಮಾಡಿರುವ ನರೇಶ್, ನನಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ನನ್ನನ್ನು ಇದರಲ್ಲಿ ಸಿಕ್ಕಿಸಿ ಹಾಕಲು ವ್ಯವಸ್ಥಿತವಾಗಿ ಸಂಚು ರೂಪಿಸಲಾಗಿದೆ. ನಾನು ಈಗಲೇ ತನಿಖಾಧಿಕಾರಿಗಳ ಮುಂದೆ ಹಾಜರಾದರೆ ಏನು ನಡೆಯುತ್ತದೆ ಎಂದು ನನಗೆ ಗೊತ್ತಿದೆ. ಅದಕ್ಕಾಗಿ ಬರುತ್ತಿಲ್ಲ ಎಂದಿದ್ದಾರೆ.
ಇದನ್ನೂ ಓದಿ:ಸಿಡಿ ಕೇಸ್ : ರಾಜಕಾರಣಿಗಳತ್ತ ಸುಳಿಯುತ್ತಿದೆ ತನಿಖೆ ಜಾಡು…
ಯುವತಿಯ ಜೊತೆ ಸಂಪರ್ಕ ಇದ್ದಿದ್ದು ಸತ್ಯ. ನಾನೊಬ್ಬ ಪತ್ರಕರ್ತನಾಗಿರುವ ಕಾರಣ ಹುಡುಗಿ ಸ್ನೇಹಿತರ ಮೂಲಕ ನನಗೆ ಕರೆ ಮಾಡಿ ರಮೇಶ್ ಜಾರಕಿಹೊಳಿಯವರು ನನಗೆ ಮೋಸ ಮಾಡಿದ್ದಾರೆ ನ್ಯಾಯ ಕೊಡಿಸಿ ಎಂದು ಕೇಳಿ ಕೊಂಡಿದ್ದಳು. ದಾಖಲೆ ತರುವಂತೆ ಕೇಳಿದ್ದೆ. ಕೆಲ ದಿನಗಳ ನಂತರ ನನ್ನ ಸಮಸ್ಯೆಗಳಿಂದ ನಾನು ಬ್ಯುಸಿಯಿದ್ದೆ. ನನ್ನ ಮಗಳ ನಾಮಕರಣದ ಸಂದರ್ಭದಲ್ಲಿ ಆಕೆ ಮತ್ತೆ ಕರೆ ಮಾಡಿದ್ದಳು. ಆಗ ಆಕೆಯನ್ನೂ ನಾಮಕರಣಕ್ಕೆ ಕರೆದಿದ್ದೆ. ಆಕೆ ಸ್ನೇಹಿತರೊಂದಿಗೆ ಬಂದಿದ್ದರು. ನಾಮಕರಣಕ್ಕೆ ಜೆಡಿಸ್- ಬಿಜೆಪಿ- ಕಾಂಗ್ರೆಸ್ ನಾಯಕರು ಬಂದಿದ್ದಳು. ಇತರ ಪ್ರಮುಖ ಗಣ್ಯರು ಬಂದಿದ್ದರು. ಈ ವೇಳೆ ಒಟ್ಟಿಗೆ ಫೋಟೊ ತೆಗೆದುಕೊಂಡಿದ್ದರು ಅಷ್ಟೇ ಎಂದಿದ್ದಾರೆ.
ಇದನ್ನೂ ಓದಿ: ಕೇರಳ: ಫೈಯರ್ ಬ್ರ್ಯಾಂಡ್ ಶೋಭಾ ಸುರೇಂದ್ರನ್ ಗೆ ಬಿಜೆಪಿ ಟಿಕೆಟ್, ಗೆಲುವು ಯಾರಿಗೆ?
ನಾನು ದುಡ್ಡಿಲ್ಲದೆ ಕಷ್ದಲ್ಲಿದ್ದೇನೆ. ನನ್ನ ಮನೆಯಲ್ಲಿ ಕಷ್ಟದ ಪರಿಸ್ಥಿತಿಯಿದೆ. ರಮೇಶ್ ಜಾರಕಿಹೊಳಿಯವರು ಹೇಳಿದಂತೆ ನಾನು ಯಾವುದೇ ಕೋಟಿಗಟ್ಟಲೆ ಹಣ ಪಡೆದಿಲ್ಲ. ಅನ್ಯಾಯದ ದುಡ್ಡು ತೆಗೆದುಕೊಂಡಿಲ್ಲ. ನನ್ನ ತಪ್ಪು ಸಾಬೀತಾದರೆ ನಾನು ಶಿಕ್ಷೆಗೆ ಸಿದ್ದನಿದ್ದೇನೆ ಎಂದಿದ್ದಾರೆ.
ಹಾಜರಾಗುತ್ತೇನೆ: ಮುಂದಿನ 5-8 ದಿನದಲ್ಲಿ ತನಿಖಾಧಿಕಾರಿಗಳ ಎದುರು ಬರುತ್ತೇನೆ. ಸೂಕ್ತ ದಾಖಲೆಗಳನ್ನು ನೀಡುತ್ತೇನೆ ಎಂದು ನರೇಶ್ ಹೇಳಿಕೊಂಡಿದ್ದಾರೆ. ಇಡೀ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿಯವರನ್ನು ಸಂತ್ರಸ್ತ, ಹುಡುಗಿಯನ್ನು ಆರೋಪಿ ಎಂದು ಬಿಂಬಿಸಲಾಗಿದೆ. ನಾವು ಹುಡುಗಿ ಪರವಾಗಿ ನಿಲ್ಲಬೇಕಿದೆ ಎಂದು ಹೇಳಿದ್ದಾರೆ.