Advertisement

ಜಪ್ಪಿನಮೊಗರು- ಕಣ್ಣೂರು ರಸ್ತೆಗೆ ಗ್ರೀನ್‌ಸಿಗ್ನಲ್‌

03:57 PM Jun 05, 2017 | |

ಮಹಾನಗರ: ಮಂಗಳೂರು- ಬೆಂಗಳೂರು ರಾ.ಹೆ. 75 ಹಾಗೂ ಮಂಗಳೂರು- ಕಾಸರಗೋಡು ರಾ.ಹೆ. 66ನ್ನು ಜಪ್ಪಿನಮೊಗರು ನೇತ್ರಾವತಿ ಸೇತುವೆಯಿಂದ ಅಡ್ಯಾರಿನ  ಕಣ್ಣೂರುವರೆಗೆ ನದಿ ತೀರದಲ್ಲಿ ಸಂಪರ್ಕಿಸುವ ಬಹುನಿರೀಕ್ಷಿತ ಬೈಪಾಸ್‌ ರಸ್ತೆ ನಿರ್ಮಾಣಕ್ಕೆ
ಗ್ರೀನ್‌ಸಿಗ್ನಲ್‌ ದೊರಕಿದ್ದು, ರಾಜ್ಯ ಸರಕಾರದಿಂದ  10 ಕೋ.ರೂ. ಬಿಡುಗಡೆಯಾಗಿದೆ. 

Advertisement

ಶಾಸಕ ಜೆ.ಆರ್‌. ಲೋಬೋ ಅವರ  ಕನಸಿನ ಈ ಯೋಜನೆ ಸಾಕಾರಗೊಂಡರೆ, ನದಿ ತೀರ ಪ್ರದೇಶವು ಪ್ರವಾಸೋದ್ಯ ಮದಲ್ಲಿ ಹೊಸ ಮನ್ವಂತರ ವನ್ನು ಸೃಷ್ಟಿಸಲಿದ್ದು, ಈ  ಪ್ರದೇ ಶವು  ವಿವಿಧ ರೀತಿಯಲ್ಲಿ ಅಭಿವೃದ್ಧಿ ಕಾಣಲಿದೆ. 

ಜತೆಗೆ ವಿಶೇಷವಾಗಿ ಮಂಗಳೂರು ಜಂಕ್ಷನ್‌ (ಪಡೀಲ್‌)ರೈಲು  ನಿಲ್ದಾಣಕ್ಕೆ ಇದೇ ರಸ್ತೆಯ ಮೂಲಕ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲೂ ಹೊಸ ಸಾಧ್ಯತೆಯನ್ನು ಹುಟ್ಟುಹಾಕಲಿದೆ. ನೇತ್ರಾವತಿ ಸೇತುವೆಯಿಂದ ಅಡ್ಯಾರ್‌ ಕಣ್ಣೂರಿಗೆ ನೇರವಾಗಿ ನದಿ ತೀರದಲ್ಲೇ ಸಾಗಿದರೆ ಇರುವುದು ಕೇವಲ 6 ಕಿ.ಮೀ. ಸುಮಾರು 100 ಕೋ.ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣವಾಗಲಿದೆ.
 
50 ಮೀಟರ್‌ ಅಗಲದ ನಾಲ್ಕು ಪಥದ ಈ ರಸ್ತೆಗೆ ಆರಂಭಿಕವಾಗಿ 10 ಕೋ.ರೂ.  ಬಿಡುಗಡೆಯಾಗಿದ್ದು, ಡಿಪಿಆರ್‌ ಅಂತಿಮಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಬುಧವಾರ ಇದಕ್ಕೆ ಒಪ್ಪಿಗೆ ದೊರೆಯಲಿದ್ದು, ಬಳಿಕ ಉಳಿದ ಅನುದಾನ ಬಿಡುಗಡೆಯಾಗಲಿದೆ. 

ಈ ರಸ್ತೆ ನಿರ್ಮಾಣವಾದರೆ, ಕಾಸರಗೋಡು, ಬೆಂಗಳೂರು, ಮೈಸೂರು ಕಡೆ ಸಾಗುವ ಎಲ್ಲ ವಾಹನಗಳನ್ನು ನೇತ್ರಾವತಿ ಸೇತುವೆಯಿಂದಲೇ  ಬೈಪಾಸ್‌ ರಸ್ತೆಯಲ್ಲಿ ಸಾಗುವಂತೆ ಮಾಡಿ ಮಂಗಳೂರು- ಬೆಂಗಳೂರು ಹೆದ್ದಾರಿಗೆ ಸೇರಿಸಲಾಗುತ್ತದೆ.  
ಸೇತುವೆಯಿಂದ ಕಣ್ಣೂರು ಮಸೀದಿ ಪಕ್ಕದವರೆಗೆ ನದಿ ತೀರದಲ್ಲಿ ಈ ರಸ್ತೆ ನಿರ್ಮಾಣದ ಗುರಿ ಇರಿಸಲಾಗಿದೆ. 

ಲೋಕೋಪಯೋಗಿ ಇಲಾಖೆ ಕಾಮಗಾರಿ ಕೈಗೆತ್ತಿಕೊಳ್ಳಲಿದೆ. ಯೋಜನೆ ಕಾರ್ಯಗತಗೊಂಡರೆ ತೊಕ್ಕೊಟ್ಟು  ಕಡೆಯಿಂದ ಬೆಂಗಳೂರು, ಚಿಕ್ಕಮಗಳೂರಿಗೆ ಹೋಗುವ ವಾಹನಗಳು ಜಪ್ಪಿನಮೊಗರು ನದಿ ತೀರದ ಮೂಲಕ ಕಣ್ಣೂರಿಗೆ ಬಂದು ಮುಂದೆ ರಾ.ಹೆ.75ನ್ನು  ಸೇರಿ ಮುಂದೆ ಸಾಗಲಿದೆ. ಇದರಿಂದಾಗಿ ತಲಪಾಡಿ ಕಡೆಯಿಂದ ಬಿ.ಸಿ. ರೋಡ್‌, ಬೆಳ್ತಂಗಡಿ, ಚಿಕ್ಕಮಗಳೂರು  ಮೂಲಕ ಬೆಂಗಳೂರಿಗೆ ಸಾಗುವ ವಾಹನಗಳು ಪಂಪ್‌ವೆಲ್‌ಗೆ ಬರಬೇಕಾದ ಅಗತ್ಯವಿಲ್ಲ.

Advertisement

ಆಕರ್ಷಣೀಯ ಕುದ್ರುಗಳಿಗೆ  ಸಿಗಲಿದೆ ಹೊಸ ಲುಕ್‌..!
ಸಣ್ಣ  ದ್ವೀಪಗಳನ್ನು  ತುಳುವಿನಲ್ಲಿ  “ಕುದ್ರು’ ಎನ್ನಲಾಗುತ್ತಿದೆ. ನದಿ ಮತ್ತು  ಕರಾವಳಿ ತೀರಕ್ಕೆ  ಸನಿಹ ಸಮುದ್ರ ಮಧ್ಯದಲ್ಲಿ ಇಂತಹ ಸಣ್ಣ ದ್ವೀಪಗಳಿವೆ. ಜಪ್ಪಿನಮೊಗರಿನ ನೇತ್ರಾವತಿ ನದಿಯಲ್ಲಿ  ಹಾಗೂ ಮಂಗಳೂರಿನ ಹಳೆ ಬಂದರು ಪ್ರದೇಶದಲ್ಲಿ  ಮೂರು ದ್ವೀಪಗಳಿವೆ. ಜಪ್ಪಿನಮೊಗರು ಕಡೆಕಾರಿನ ಬಳಿ ನೇತ್ರಾವತಿ ನದಿ ಮಧ್ಯದಲ್ಲಿರುವ  ಸುಂದರ ಕುದ್ರು ಗಮನ ಸೆಳೆಯುತ್ತಿವೆ. ಇದನ್ನು  ಪ್ರವಾಸಿ ತಾಣವಾಗಿ ರೂಪಿಸುವ ನಿಟ್ಟಿನಲ್ಲಿ 2011ರಲ್ಲಿ ರಾಜ್ಯ ಸರಕಾರದ ಪ್ರವಾಸೋದ್ಯಮ ಇಲಾಖೆ ಆಸಕ್ತಿ ವಹಿಸಿ ಪರಿಶೀಲಿಸಿ ಪೂರಕ ಕ್ರಮ ಗಳಿಗೆ ಸಿದ್ಧತೆಗಳಾಗಿತ್ತು.  ದ್ವೀಪಕ್ಕೆ  ಬೋಟ್‌ ಸೌಲಭ್ಯಕ್ಕೂ  ಚಾಲನೆ ನೀಡಲಾಗಿತ್ತಾದರೂ ಮುಂದಕ್ಕೆ ಯಾವುದೇ  ಪ್ರಗತಿಯಾಗಿರಲಿಲ್ಲ. ಉದ್ದೇ ಶಿ ತ ಚತುಷ್ಪಥ ರಸ್ತೆ ನಿರ್ಮಾಣವಾದರೆ ಈ ಕುದ್ರುಗಳಿಗೆ ಹೊಸ ಭವಿಷ್ಯ ದೊರೆಯುವ ಸಾಧ್ಯತೆ ಇದೆ. 

ಪ್ರವಾಸೋದ್ಯಮ ಸಮಗ್ರ ಅಭಿವೃದ್ಧಿ ಗುರಿ
ಜಪ್ಪಿನಮೊಗರು ನೇತ್ರಾವತಿ ಸೇತುವೆಯಿಂದ ಅಡ್ಯಾರ್‌ ಕಣ್ಣೂರುವರೆಗೆ ನದಿ ತೀರದಲ್ಲಿ ಸಂಪರ್ಕಿಸುವ ಬಹುನಿರೀಕ್ಷಿತ  ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ರಾಜ್ಯ ಸರಕಾರ ವಿಶೇಷ ಒತ್ತು ನೀಡಲಿದೆ. ಇದಕ್ಕಾಗಿ ಈಗಾಗಲೇ 10 ಕೋ.ರೂ. ಬಿಡುಗಡೆ ಮಾಡಲಾಗಿದ್ದು, ಮುಂದಿನ ಅನುದಾನ ಶೀಘ್ರದಲ್ಲಿ ದೊರೆಯಲಿದೆ. ಈ ಮೂಲಕ ನದಿ ತೀರದಲ್ಲಿ ಆಕರ್ಷಕ ರಸ್ತೆ ನಿರ್ಮಿಸುವ ಮೂಲಕ ಕರಾವಳಿಯ ಪ್ರವಾಸೋದ್ಯಮಕ್ಕೆ ಹೊಸ ಲುಕ್‌ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಪೂರಕವಾಗಿ ರಸ್ತೆ ನಿರ್ಮಾಣವಾಗುವ ವ್ಯಾಪ್ತಿಯ ಪ್ರದೇಶವು ಸಮಗ್ರವಾಗಿ ಅಭಿವೃದ್ಧಿ ಕಾಣಲಿದೆ.

 - ಜೆ.ಆರ್‌.ಲೋಬೋ, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next