Advertisement

ಹೆಚ್ಚುವರಿ ಕೆಲಸ ಜೀವಕ್ಕೆ ಕುತ್ತು

08:00 AM Oct 07, 2017 | Karthik A |

ಹಾಂಕಾಂಗ್‌: ಬಿಡುವಿಲ್ಲದ ದುಡಿಮೆ ಮನುಷ್ಯನಿಗೆ ಸಾವನ್ನೂ ತಂದೊಡ್ಡುತ್ತದೆ. ಇದಕ್ಕೆ ನಿದರ್ಶನವಾಗುವಂಥ ಘಟನೆಯೊಂದು ಜಪಾನ್‌ನಲ್ಲಿ ನಡೆದಿದೆ. ಒಂದು ತಿಂಗಳಲ್ಲಿ ಬರೋಬ್ಬರಿ 159 ಗಂಟೆ ಹೆಚ್ಚುವರಿ ಅವಧಿ (ಓವರ್‌ಟೈಂ) ಕೆಲಸ ಮಾಡಿದ್ದ ವರದಿಗಾರ್ತಿಯೊಬ್ಬರು ಹೃದಯಾಘಾತಕ್ಕೀಡಾಗಿ ಮೃತರಾಗಿದ್ದಾರೆ. ಜಪಾನ್‌ನ ಎನ್‌ಎಚ್‌ಕೆಯಲ್ಲಿ ರಾಜಕೀಯ ವರದಿಗಾರಿಕೆ ಮಾಡುತ್ತಿದ್ದ ಮಿವಾ ಸಾಡೊ(31) ಅವರ ಮೃತದೇಹ 2013ರಲ್ಲಿ ಟೋಕಿಯೊದಲ್ಲಿ ತಮ್ಮ ಹಾಸಿಗೆ ಮೇಲೆ ಪತ್ತೆಯಾಗಿತ್ತು. ಆಕೆ ಆ ತಿಂಗಳಿನಲ್ಲಿ 159 ಗಂಟೆಗಳ ಹೆಚ್ಚುವರಿ ಕೆಲಸ ಮಾಡಿದ್ದರು ಮತ್ತು ಮೃತರಾಗುವ 2 ದಿನಗಳ ಮೊದಲು ಆ ಇಡೀ ತಿಂಗಳಿನಲ್ಲಿ ಕೇವಲ 2 ದಿನ ರಜೆ ತೆಗೆದುಕೊಂಡಿದ್ದರು. 

Advertisement

‘ಅವರು ನಿಧನರಾಗಿದ್ದು ಅತ್ಯಧಿಕ ಅವಧಿ ಕೆಲಸ ಮಾಡಿದ್ದರಿಂದ’ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಅವರ ಸಾವಿನ 4 ವರ್ಷಗಳ ಬಳಿಕ ಎನ್‌ಎಚ್‌ಕೆ ಈ ವಿಷಯವನ್ನು ಸಾರ್ವಜನಿಕರ ಗಮನಕ್ಕೆ ತಂದಿದೆ. ಈ ಸಾವು ಜಪಾನ್‌ನಲ್ಲಿ ಅವ್ಯಾಹತವಾಗಿರುವ ದೀರ್ಘಾವಧಿಯ ಕೆಲಸದ ವಿರುದ್ಧ ಜನರು ಜಾಗೃತರಾಗುವಂತೆ ಪ್ರೇರೇಪಿಸಿದೆ. ಅಷ್ಟೇ ಅಲ್ಲದೆ ಜಪಾನ್‌ನಲ್ಲಿ ಕರೋಶಿ (ಅಧಿಕ ಕೆಲಸದಿಂದ ಬರುವ ಸಾವು) ಸಮಸ್ಯೆಯನ್ನು ಎತ್ತಿ ತೋರಿಸಿದೆ ಎಂದು ಎನ್‌ಎಚ್‌ಕೆ ಹೇಳಿದೆ.  ಕೆಲಸದ ಅವಧಿಯಲ್ಲಿ ಬದಲಾವಣೆ ತರಲಾಗುವುದು ಎಂದು ಈಗ ಎನ್‌ಎಚ್‌ಕೆ ಶಪಥ ಮಾಡಿದೆ. ಅಲ್ಲದೇ ಇತರ ಕಂಪೆನಿಗಳಲ್ಲಿ ಈವರೆಗೂ ದೀರ್ಘಾವಧಿ ಕೆಲಸಗಳಿಂದ ಉಂಟಾಗಿರುವ ಸಾವುಗಳ ಬಗ್ಗೆಯೂ ಕೂಲಂಕಶ ವರದಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next