ಲಕ್ನೋ : ಉತ್ತರ ಪ್ರದೇಶದ ವಾರಾಣಸಿಯಲ್ಲಿ ಡ್ರಗ್ ತಿನ್ನಿಸಿ ತನ್ನನ್ನು ದೋಚಲಾಯಿತು ಎಂದು ಜಪಾನಿ ಪ್ರವಾಸಿಯೊಬ್ಬರು ಇಂದು ಶುಕ್ರವಾರ ದೂರಿದ್ದಾರೆ.
“ನನಗೆ ಡ್ರಗ್ ತಿನ್ನಿಸಿ ನನ್ನ ಬಳಿ ಇದ್ದ ನಗದು, ಕ್ಯಾಮೆರಾ, ಮೊಬೈಲ್, ಪಾಸ್ ಪೋರ್ಟ್, ವೀಸಾ ಮತ್ತು ಇತರ ದಾಖಲೆ ಪತ್ರಗಳನ್ನು ಅಪರಿಚಿತ ದುಷ್ಕರ್ಮಿಯು ದೋಚಿದ್ದಾನೆ” ಎಂದು ಜಪಾನಿ ಪ್ರವಾಸಿಗ ಹೇಳಿದ್ದಾರೆ. ಸ್ಥಳೀಯ ಪೊಲೀಸರು ಈ ಘಟನೆ ಬಗ್ಗೆ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಈ ವಾರದ ಆದಿಯಲ್ಲಿ ಫ್ರೆಂಚ್ ಪ್ರವಾಸಿ ಮಹಿಳೆಯರ ಗುಂಪೊಂದರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಲೈಂಗಿಕ ಕಿರುಕುಳ ನೀಡಿದ್ದ ಘಟನೆ ಉತ್ತರ ಪ್ರದೇವದ ಮಿರ್ಜಾಪುರದಲ್ಲಿ ನಡೆದಿತ್ತು.
ಆದರೆ ಪೊಲೀಸರು ಈ ಪ್ರಕರಣದ ಬಗ್ಗೆ ಹೇಳಿಕೆ ನೀಡಿ “ಹಲ್ಲೆಗೆ, ಲೈಂಗಿಕ ಕಿರುಕುಳಕ್ಕೆ ಗುರಿಯಾದವರು ವಿದೇಶೀ ಪ್ರವಾಸಿಗರಲ್ಲ; ಬದಲು ವಾರಣಾಸಿಯ ಓರ್ವ ಮಹಿಳೆ’ ಎಂದು ತಿಳಿಸಿದ್ದರು.
Related Articles
ಮಿರ್ಜಾಪುರದ ಲಖಾನಿಯಾ ದರೀ ಜಲಪಾತ ತಾಣದಲ್ಲಿ ನಡೆದಿದ್ದ ಈ ಘಟನೆಗೆ ಸಂಬಂಧಿಸಿ ಪೊಲೀಸರು ನಾಲ್ವರನ್ನು ಬಂಧಿಸಿದ್ದರು; ಅನಂತರ ಇನ್ನೂ ನಾಲ್ವರನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಸೆರೆ ಹಿಡಿದಿದ್ದರು.