Advertisement

ಜಪಾನ್‌ ಸಂಸ್ಥೆಯಿಂದ ‘ಸಿ-ಮಾಸ್ಕ್’

01:34 AM Jul 02, 2020 | Hari Prasad |

ಟೋಕಿಯೊ: ಮುಖಕ್ಕೆ ಮಾಸ್ಕ್ ಹಾಕಿಕೊಂಡವರು ಫೋನ್‌ನಲ್ಲಿ ಮಾತನಾಡುವಾಗ ಪದೇ ಪದೆ ಮಾಸ್ಕ್ ತಗೆಯುವ ಕಷ್ಟ ಅರಿತ ಜಪಾನ್‌ನ ಡೋನಟ್‌ ರೋಬೋಟಿಕ್ಸ್‌ ಎಂಬ ಸಂಸ್ಥೆ, ‘ಸಿ-ಮಾಸ್ಕ್’ ಎಂಬ ಮಾಸ್ಕ್ ಕವರ್‌ ತಯಾರಿಸಿದೆ.

Advertisement

ಅದನ್ನು ಮಾಸ್ಕ್ ನ‌ ಮೇಲೆ ಧರಿಸಬೇಕು. ಇದು ನಿಮ್ಮಿಂದ ಹೊರಹೊಮ್ಮುವ ಧ್ವನಿ ತರಂಗಗಳನ್ನು ಬ್ಲೂಟೂತ್‌ ಮೂಲಕ ಮೊಬೈಲಿಗೆ ತಲುಪಿಸುತ್ತದೆ.

ಜತೆಗೆ ಮಾಸ್ಕ್ ನಿಂದಾಗಿ ಕ್ಷೀಣಿಸುವ ನಿಮ್ಮ ಧ್ವನಿ ತರಂಗಗಳಿಗೆ ಶಕ್ತಿ ತುಂಬಿ (ಆ್ಯಂಪ್ಲಿಫೈ) ಕೇಳುಗರಿಗೆ ಸ್ಪಷ್ಟವಾಗಿ ನಿಮ್ಮ ಧ್ವನಿ ಕೇಳುವಂತೆ ಮಾಡುತ್ತದೆ.

ಇದರಲ್ಲದೆ ಇದರ ಮೂಲಕ, ವಾಯ್ಸ್ ಡಯಲಿಂಗ್‌, ವಾಯ್ಸ್ ಬೇಸ್ಡ್ ಇಂಟರ್ನೆಟ್‌ ಬ್ರೌಸಿಂಗ್‌ ಮತ್ತಿತರ ಕಾರ್ಯಗಳನ್ನೂ ನೆರವೇರಿಸಬಹುದಾಗಿದೆ. ಅಲ್ಲದೆ ಇದು ಜಪಾನಿ ಭಾಷೆಯ ಮಾತುಗಳನ್ನು 8 ಇತರ ಭಾಷೆಗಳಿಗೆ ಭಾಷಾಂತರಿಸಬಲ್ಲದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next