Advertisement

Japanese Company: ರಾತ್ರಿ ಪಾಳಿ ನಿಷೇಧದಿಂದ ಹೆಚ್ಚಿದ ಫ‌ಲವತ್ತತೆ

10:13 PM Jul 17, 2023 | Team Udayavani |

ಟೋಕಿಯೊ: ಜಪಾನ್‌ನಲ್ಲಿ ಕಂಪನಿಯೊಂದು 2010ರ ನಂತರ ರಾತ್ರಿ ಪಾಳಿಯನ್ನು ರದ್ದುಪಡಿಸಿತು. ಇದರ ಪರಿಣಾಮವಾಗಿ ಕಂಪನಿಯ ಉತ್ಪಾದಕತೆಯಲ್ಲಿ ಹೆಚ್ಚಳವಾಗಿದೆ. ಒಂದು ದಶಕದಲ್ಲಿ ಕಂಪನಿಯ ಆದಾಯ ಐದು ಪಟ್ಟು ಹೆಚ್ಚಳವಾಗಿದೆ. ಅಲ್ಲದೇ ಉದ್ಯೋಗಿಗಳ ಆರೋಗ್ಯದಲ್ಲಿ ಸುಧಾರಣೆಯ ಜತೆಗೆ ಫ‌ಲವತ್ತತೆ ಪ್ರಮಾಣ ಹೆಚ್ಚಳವಾಗಿದೆ ಎಂದು ಕಂಪನಿ ತಿಳಿಸಿದೆ.

Advertisement

ಜನಸಂಖ್ಯೆ ಕಡಿಮೆ ಇರುವ ಜಪಾನ್‌ನಲ್ಲಿ ಮಕ್ಕಳನ್ನು ಪಡೆಯಲು ಹೆಚ್ಚು ಪ್ರಾಧಾನ್ಯತೆ ನೀಡುತ್ತಾರೆ. ಇಟೊಚು ಕಾರ್ಪ್‌ ಕಂಪನಿಗೆ 2010ರಲ್ಲಿ ಮಸಾಹಿರೊ ಒಕಾಫ‌ುಜಿ ಸಿಇಒ ಆದರು. ಹುದ್ದೆ ಆಲಂಕರಿಸಿದ ನಂತರ ಕಂಪನಿಯ ನಿಯಮಗಳಲ್ಲಿ ಹಲವು ಬದಲಾವಣೆಗಳನ್ನು ತಂದರು. ಮುಖ್ಯವಾಗಿ ಉದ್ಯೋಗಿಗಳು ರಾತ್ರಿ ಪಾಳಿ ಕೆಲಸ ಮತ್ತು ಓವರ್‌ಟೈಮ್‌ ಕೆಲಸ ಮಾಡುವುದನ್ನು ನಿಷೇಧಿಸಿದರು.

ರಾತ್ರಿ 8 ಗಂಟೆ ನಂತರ ಯಾವುದೇ ಉದ್ಯೋಗಿ ಕೆಲಸ ಮಾಡುವಂತಿಲ್ಲ. ಒಂದು ವೇಳೆ ಆಗಲು ಉದ್ಯೋಗಿ ಕಚೇರಿಯಲ್ಲಿ ಇದ್ದರೆ, ಸೆಕ್ಯೂರಿಟಿ ಗಾರ್ಡ್‌ಗಳು ಮತ್ತು ಮಾನವ ಸಂಪನ್ಮೂಲ ಸಿಬ್ಬಂದಿ ಅವರನ್ನು ಮನೆಗೆ ಹೋಗುವಂತೆ ಪದೇ ಪದೆ ಸೂಚಿಸುತ್ತಾರೆ.

“ಈ ಕ್ರಮದ ಪರಿಣಾಮ ಉದ್ಯೋಗಿಗಳ ಕೆಲಸದ ದಕ್ಷತೆ, ಉತ್ಪಾದಕತೆ ಹೆಚ್ಚಳವಾಗಿದೆ. ಅವರ ಆರೋಗ್ಯ ಸುಧಾರಿಸಿದ್ದು, ಫ‌ಲವತ್ತತೆ ಕೂಡ ಹೆಚ್ಚಿದೆ. ಜತೆಗೆ ಕಂಪನಿಯ ಆದಾಯವೂ 5 ಪಟ್ಟು ಹೆಚ್ಚಿದೆ,’ ಎಂದು ಮಸಾಹಿರೊ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next