Advertisement
ಬಾಹ್ಯಾಕಾಶದಲ್ಲಿ ಲೋಹದ ಅವಶೇಷಗಳ ಸಮಸ್ಯೆ ಹೆಚ್ಚುತ್ತಿರುವ ನಡುವೆ ಸಾವಯವ ವಸ್ತುಗಳಿಂದ ಉಪಗ್ರಹ ತಯಾರಿಸಲು ಯೋಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮರದ ಉಪಗ್ರಹವನ್ನು ಸಿದ್ಧಪಡಿಸಲಾಗಿದೆ.
-ಇದುವರೆಗೆ ಲೋಹದ ಉಪಗ್ರಹಗಳು ಕಕ್ಷೆ ಸೇರುತ್ತಿದ್ದವು. ಅವಧಿ ಮುಗಿದ ಅವು ಭೂಮಿಗೆ ಮರಳುವಾಗ ಪೂರ್ಣ ಸುಟ್ಟುಹೋಗುತ್ತಿರಲಿಲ್ಲ.
-ಇದರಿಂದ ಅಲ್ಯುಮಿನಾ ಕಣಗಳು ಸೃಷ್ಟಿಯಾಗಿ ಅಂತರಿಕ್ಷದಲ್ಲಿ ತೇಲುವುದು ಮಾಮೂಲಿ. ಕಾಲಾಂತರದಲ್ಲಿ ಇವು ಭೂಮಿಗೆ ಮಾರಕವಾಗುತ್ತವೆ.
-ಅದಕ್ಕಾಗಿ ವಿಜ್ಞಾನಿಗಳಿಂದ ಮ್ಯಾಗ್ನೊಲಿಯ ಮರ ಬಳಕೆ. ಇದು ಭೂಮಿಯ ವಾತಾವರಣಕ್ಕೆ ಮರಳುವ ಸಂದರ್ಭದಲ್ಲಿ ಪೂರ್ಣ ಸುಟ್ಟು ಹೋಗುತ್ತದೆ.
-ಭೂಮಿಯ ವಾತಾವರಣವನ್ನು ಕಾಪಾಡಲು, ಲೋಹ ಸಂಪನ್ಮೂಲ ಸಂರಕ್ಷಿಸಲು ಈ ಕ್ರಮ. ವಿಜ್ಞಾನಿಗಳು ಮಾಡಿದ್ದೇನು?
ಕ್ಯೋಟೋ ಸಂಶೋಧಕರು ಅನೇಕ ಪ್ರಯೋಗ ನಡೆಸಿ ಮರದ ಉಪಗ್ರಹ ಸಿದ್ಧಪಡಿಸಿ ದ್ದಾರೆ. ಹಲವು ರೀತಿಯ ಮರಗಳನ್ನು ಬಳಸಲಾಗಿತ್ತು. ಬಾಹ್ಯಾಕಾಶದ ಉಷ್ಣತೆ, ವಾತಾವರಣವನ್ನು ಪ್ರಯೋಗಾಲಯದಲ್ಲಿ ಮರುಸೃಷ್ಟಿಸ ಲಾಗಿತ್ತು. ಉಡಾವಣೆಯ ಒತ್ತಡವನ್ನು ಸಹಿಸಿಕೊಂಡು, ದೀರ್ಘಕಾಲ ಅಂತರಿಕ್ಷದಲ್ಲಿ ಸುತ್ತಬಲ್ಲ ಸಾಮರ್ಥ್ಯವನ್ನು ಪರಿಶೀಲಿಸಲಾಗಿದೆ. ಎಲ್ಲ ಪ್ರಯೋಗಗಳ ಅನಂತರ ಮ್ಯಾಗ್ನೊಲಿಯ ಮರದಿಂದ ಮಾಡಿದ ಉಪಗ್ರಹ ಸಮರ್ಥ ಎನ್ನುವುದು ವಿಜ್ಞಾನಿಗಳಿಗೆ ಖಾತ್ರಿಯಾಗಿದೆ.
Related Articles
-ಟಕಾವೊ ಡೋಯಿ , ಬಾಹ್ಯಾಕಾಶ ಎಂಜಿನಿಯರ್, ಕ್ಯೋಟೋ ವಿ.ವಿ.
Advertisement