Advertisement

ಜಪಾನ್‌ನಲ್ಲಿನ್ನು ವಾರಕ್ಕೆ 4 ದಿನ ಕೆಲಸ! ವಿತ್ತೀಯ ಸುಧಾರಣೆಗಾಗಿ ಮಾರ್ಗಸೂಚಿ ಪ್ರಕಟ

02:56 PM Jun 27, 2021 | Team Udayavani |

ಟೋಕಿಯೋ: ಜಪಾನ್‌ನಲ್ಲಿ ಕಂಪನಿಗಳ ವಾರದ ಕೆಲಸವನ್ನು ಐದು ದಿನದಿಂದ ನಾಲ್ಕು ದಿನಕ್ಕೆ ಇಳಿಸಿ ಅಲ್ಲಿನ ಸರ್ಕಾರ ಆದೇಶ ಹೊರಡಿಸಿದೆ.

Advertisement

ಶನಿವಾರ ಅಲ್ಲಿ ವಿತ್ತೀಯ ಸುಧಾರಣೆಗಾಗಿ ಕೆಲವಾರು ಮಾರ್ಗಸೂಚಿಗಳು ಪ್ರಕಟವಾಗಿದ್ದು, ಅದರಲ್ಲಿ, ವಾರದ ಕರ್ತವ್ಯದ ಅವಧಿಯನ್ನು ನಾಲ್ಕು ದಿನಗಳಿಗೆ ಇಳಿಸುವಂತೆ ದೇಶದ ಎಲ್ಲಾ ಕಂಪನಿಗಳಿಗೆ ಸೂಚಿಸಲಾಗಿದೆ.

ಉದ್ಯೋಗಸ್ಥರು ಹೆಚ್ಚು ಗಂಟೆಗಳ ಕಾಲ ಕಚೇರಿಯಲ್ಲಿ ಉಳಿದರೆ ಅವರ ಕಾರ್ಯಕ್ಷಮತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಅಪಾಯವಿರುತ್ತದೆ.

ಹಾಗಾಗಿ, ಅವರಿಗೆ ವಾರಕ್ಕೆ ನಾಲ್ಕು ದಿನಗಳ ಕಚೇರಿ ಕೆಲಸ ಸಾಕು ಎಂದು ಜಪಾನ್‌ ಸರ್ಕಾರದ ಹೊಸ ನಿಲುವು. ಹಾಗಾಗಿ, ಉದ್ಯೋಗಸ್ಥರ ಕ್ಷಮತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ :ರೈಲ್ವೆ ಟಿಕೆಟ್‌ಗೆ ಇನ್ನು ಆಧಾರ್‌, ಪ್ಯಾನ್‌ ಕಡ್ಡಾಯ? ಮಧ್ಯವರ್ತಿಗಳ ತಡೆಗೆ ಇಲಾಖೆ ನಿರ್ಧಾರ

Advertisement
Advertisement

Udayavani is now on Telegram. Click here to join our channel and stay updated with the latest news.

Next