Advertisement

Japan:ಭೂಕಂಪ ಸ್ಥಳದಿಂದ ಬೆಳಗ್ಗೆ ಹೊರಟ್ವಿ, ಮಧ್ಯಾಹ್ನ ಅಲ್ಲಿ ಭೂಮಿ ಕಂಪಿಸಿತು!

11:57 PM Jan 01, 2024 | Team Udayavani |

ಉದಯವಾಣಿ ಸಮಾಚಾರ.ಬೆಂಗಳೂರು: ” ರಜೆ ಇತ್ತು. ಹೊಸ ವರ್ಷ ಆಚರಣೆಗೆಂದು ಅಲ್ಲಿಗೆ ಹೋಗಿದ್ದೆವು. ಬೆಳಗ್ಗೆಯಷ್ಟೇ ಹೊರಟು ವಾಪಸ್‌ ಬರುತ್ತಿದ್ದೆವು. ಮಧ್ಯಾಹ್ನ ಆಗುವಷ್ಟರಲ್ಲಿ ಅಲ್ಲಿ ಭಾರೀ ಭೂಕಂಪ ಸಂಭವಿಸಿತು…’

Advertisement

ಇದು ಜಪಾನ್‌ ರಾಜಧಾನಿ ಟೋಕಿ ಯೋದ ಐಟಿ ಕಂಪನಿಯೊಂದರಲ್ಲಿ ಪ್ರಾಜೆಕ್ಟ್ ಮ್ಯಾನೇಜರ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ ಮೈಸೂರು ಮೂಲದ ಸಿರೀಶ್‌ ಚಂದ್ರ ಶೇಖರ್‌ ಅವರ ನಿಟ್ಟುಸಿರು. ಭೂಕಂಪ ಸಂಭವಿಸಿದ ಪೂರ್ವ ಜಪಾನ್‌ನ ಇಶಿಕಾವ ಪ್ರಾಂತದಿಂದ ಪಶ್ಚಿಮದ ಟೋಕಿಯೋಗೆ ಪ್ರಯಾಣಿಸುತ್ತ ಮಾರ್ಗ ಮಧ್ಯೆಯೇ ‘ಉದಯವಾಣಿ’ ಜತೆ ಮಾತನಾಡಿದ ಅವರು ತಮ್ಮ ಅನುಭವವನ್ನು ತೆರೆದಿ ಟ್ಟರು. ಅದನ್ನು ಅವರ ಮಾತುಗಳಲ್ಲೇ ಓದಿ..

ಹೊಸ ವರ್ಷಾಚರಣೆಗೆಂದು ಹೋಗಿದ್ವಿ. ಅದು ಟೋಕಿಯೋದಿಂದ ಪಶ್ಚಿಮಕ್ಕೆ ಇರುವ ಇಶಿಕಾವ ಪ್ರಾಂತ. ನಾನು, ನನ್ನ ಪತ್ನಿ, 10 ತಿಂಗಳ ಮಗಳು ಇದ್ವಿ. ಹೊಸವರ್ಷ ಸಂಭ್ರಮ ಮುಗಿಸಿ ಇಶಿಕಾವದಿಂದ 30 ಕಿ.ಮೀ. ದೂರದ ಹಿಮಿ ಎಂಬಲ್ಲಿಂದ ಸೋಮವಾರ ಬೆಳಗ್ಗೆ ವಾಪಸ್‌ ಟೋಕಿಯೋಗೆ ಹೊರಟಿದ್ವಿ.

ಸುಮಾರು 340 ಕಿ.ಮೀ. ಪ್ರಯಾ ಣಿಸಿ ಮಧ್ಯಾಹ್ನ ಊಟಕ್ಕೆಂದು ನಿಲ್ಲಿ ಸಿದ್ವಿ. ಆಗ ಭೂಕಂಪ ಮುನ್ನೆಚ್ಚರಿಕೆ ಸಂದೇಶ ನನ್ನ ಮೊಬೈಲ್‌ಗೆ ಬಂತು. ಇಲ್ಲಿ ಸಾಮಾನ್ಯವಾಗಿ ಭೂಕಂಪ ಸಂಭ ವಿಸುವ 2-3 ನಿಮಿಷ ಮುನ್ನ ಈ ರೀತಿ ಸಂದೇಶ ಬರುತ್ತದೆ. ಸೂಕ್ತ ಸುರಕ್ಷ ಕ್ರಮ ಕೈಗೊಳ್ಳುವಂತೆ ಸೂಚನೆ ಇರು ತ್ತದೆ. ಈ ಬಾರಿ ಸಂದೇಶ ಬಂದು 4-5 ನಿಮಿಷ ಆದರೂ ಯಾವುದೇ ಕಂಪನದ ಅನುಭವ ಆಗಲಿಲ್ಲ. ಯಾವುದೋ ಪರೀ ಕ್ಷಾರ್ಥ ಸಂದೇಶ ಇರಬೇಕೆಂದು ಸುಮ್ಮ ನಾದೆ. 10 ನಿಮಿಷ ಕಳೆಯುವಷ್ಟರಲ್ಲಿ ಭೂಕಂಪನದ ಅನುಭವ ಆಯಿತು. ಇಶಿಕಾವ ಪ್ರಾಂತದ ಕರಾವಳಿ ಭಾಗದ ನ್ಯಾಂಟೋ ಎಂಬಲ್ಲಿ ಕೇಂದ್ರೀಕೃತವಾಗಿತ್ತು 7.5 ತೀವ್ರತೆಯ ಭಾರೀ ಭೂಕಂಪ. ನಾವು ಆಗಲೇ ಜಪಾನ್‌ ಪರ್ವತ ಶ್ರೇಣಿಯನ್ನು ದಾಟಿ ಬಂದಿದ್ದೆವು. ನಾವು ಅದೃಷ್ಟವಶಾತ್‌ ಭೂಕಂಪಕ್ಕೆ ಸಿಲುಕದೆ ಪಾರಾದ್ವಿ ಅನ್ನಿಸಿತು…
ಕನ್ನಡಿಗರು ಸೇಫ್: ಜಪಾನ್‌ನಲ್ಲಿ ಸುಮಾರು 50 ಸಾವಿರ ಕನ್ನಡಿಗರಿದ್ದಾರೆ. ಈ ಪೈಕಿ ಸುಮಾರು 40 ಸಾವಿರ ಮಂದಿ ಪೂರ್ವ ಭಾಗದ ಟೋಕಿಯೋದಲ್ಲೇ ಇದ್ದಾರೆ. ಭೂಕಂಪ ಸಂಭವಿಸಿದ್ದು ಪಶ್ಚಿ ಮದ ಇಶಿಕಾವ ಪ್ರಾಂತದಲ್ಲಿ. ಹಾಗಾಗಿ, ಇಲ್ಲಿ ಬಹುತೇಕ ಕನ್ನಡಿಗರು ಸುರಕ್ಷಿತ ವಾಗಿದ್ದಾರೆ. ಇಶಿಕಾವದಲ್ಲಿ ಸಿಲುಕಿದ್ದ ಇನ್ನೊಂದು ಕನ್ನಡಿಗ ಕುಟುಂಬವೂ ಸುರಕ್ಷಿತವಾಗಿ ಪಾರಾಗಿದೆ.

ಇನ್ನೂ ಏಳು ದಿನ ಇರಲಿದೆ ಭೀತಿ
ಇಶಿಕಾವಾದಲ್ಲಿ 7.6 ತೀವ್ರತೆಯಲ್ಲಿ ಭೂಮಿ ಕಂಪಿಸಿರುವ ಕಾರಣ, ಮುಂದಿನ 3ರಿಂದ 7 ದಿನಗಳ ಕಾಲ ಪ್ರಬಲ ಪಶ್ಚಾತ್‌ ಕಂಪನಗಳು ಸಂಭವಿಸಲಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಎಲ್ಲೆಲ್ಲಿ ಭೂಮಿಯು ತೀವ್ರವಾಗಿ ಕಂಪಿಸಿದೆಯೋ ಅಲ್ಲಿ ಕಟ್ಟಡಗಳು ಕುಸಿದುಬೀಳುವ ಮತ್ತು ಭೂಕುಸಿತಗಳು ಸಂಭವಿಸುವ ಭೀತಿಯೂ ಇದೆ. ಹೀಗಾಗಿ, ಎಲ್ಲರೂ ಎಚ್ಚರಿಕೆ ವಹಿಸಿ ಎಂದು ಸೂಚಿಸಲಾಗಿದೆ.

Advertisement

2004ರ ಸುನಾಮಿ ನೆನಪಿಸಿದ ಭೂಕಂಪ!
2024ರ ಜ.1ರಂದು ಜಪಾನ್‌ನಲ್ಲಿ ನಡೆದ ಭೂಕಂಪ ಮತ್ತು ಸುನಾಮಿಯ ಆತಂಕವು 2004ರ ಸುನಾಮಿಯನ್ನು ನೆನಪಿಸಿತು. 2004ರ ಡಿ.26ರಂದು ಇಡೀ ಜಗತ್ತೇ ಕ್ರಿಸಮಸ್‌ ಮುಗಿಸಿ, ಹೊಸ ವರ್ಷದ ಆಗಮನಕ್ಕೆ ಕಾದಿತ್ತು. ಅದೇ ದಿನ ಜಗತ್ತು ಹಿಂದೆಂದೂ ಕಂಡರಿಯದ ಭೀಕರ ಪ್ರಾಕೃತಿಕ ವಿಕೋಪಕ್ಕೆ ಸಾಕ್ಷಿಯಾಯಿತು. ಸಮುದ್ರದಲ್ಲಿ ಎದ್ದ ರಾಕ್ಷಸ ಅಲೆಗಳು ಒಂದೇ ದಿನ 2.50 ಲಕ್ಷ ಜನರನ್ನು ಬಲಿಪಡೆಯಿತು. ಇಂಡೋನೇಷ್ಯಾದ ಸುಮಾತ್ರ ಕರಾವಳಿಯಲ್ಲಿ ಸಮುದ್ರದಡಿ 9.0 ತೀವ್ರತೆಯಲ್ಲಿ ಸಂಭವಿಸಿದ ಕಂಪನವು ಕ್ಷಣಮಾತ್ರದಲ್ಲಿ ಲಕ್ಷಾಂತರ ಜೀವಗಳನ್ನು ಕಸಿದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next