Advertisement

ರೇಷ್ಮೆ ಬೆಳೆಯಲು ಜಪಾನ್‌ ತಂತ್ರಜ್ಞಾನ ಅಳವಡಿಕೆ

12:12 AM Sep 30, 2019 | Lakshmi GovindaRaju |

ದೇವನಹಳ್ಳಿ: ರೇಷ್ಮೆ ಬೆಳೆ ಬೆಳೆಯಲು ಕಾರ್ಮಿಕರು ಅಗತ್ಯ.ಆದರೆ, ಇತ್ತೀಚಿನ ದಿನಗಳಲ್ಲಿ ಕಾರ್ಮಿಕರ ಕೊರತೆ ಬಹುವಾಗಿ ಕಾಡುತ್ತಿದೆ.ಇದಕ್ಕೆ ಪರಿಹಾರ ಎನ್ನುವಂತೆ ತಾಲೂಕಿನ ರೈತರೊಬ್ಬರು ವಿದೇಶಿ ತಂತ್ರಜ್ಞಾನದ ಮೂಲಕ ಯಶಸ್ಸು ಕಂಡಿದ್ದಾರೆ.

Advertisement

ಕೊಯಿರಾ ಗ್ರಾಮದ ರೈತ ಚಿಕ್ಕೇಗೌಡ ರೇಷ್ಮೆ ಹುಳು ಸಾಕಾಣಿಕೆ ಮಾಡಲು ಬಳಸುವ ಪ್ಲಾಸ್ಟಿಕ್‌ ಚಂದ್ರಿಕೆಗಳಲ್ಲಿ ಪ್ರಸ್ಸಿಂಗ್‌ ಮಾಡುವ ಜಪಾನ್‌ ತಂತ್ರಜ್ಞಾನ ಅಳವಡಿಸಿಕೊಂಡಿದ್ದಾರೆ. ಈ ಹಿಂದೆ ರೇಷ್ಮೆ ಬೆಳೆಗಾರರು ಗೂಡು ಕಟ್ಟಲು ಬಿದರಿನ ಚಂದ್ರಿಕೆ ಬಳಸುತ್ತಿದ್ದರು. ಕಾಲಕ್ರಮೇಣ ಪ್ಲಾಸ್ಟಿಕ್‌ ಬಲೆಯಂತೆ ಹಣೆದಿರುವ ಸಿದ್ಧ ಚಂದ್ರಿಕೆ ಬಳಕೆಗೆ ಬಂತು. ರೇಷ್ಮೆ ಇಲಾಖೆ ರಿಯಾಯಿತಿ ಧರದಲ್ಲಿ ಇವುಗಳನ್ನು ರೈತರಿಗೆ ನೀಡುತ್ತಿದೆ.

ಒಂದು ಬಾರಿ ಬಳಕೆಯಾದ ಹೊಸ ತಂತ್ರಜ್ಞಾನದ ಮೂಲಕ ಪ್ರಸ್ಸಿಂಗ್‌ ಮಾಡಲಾದ ಚಂದ್ರಿಕೆಯನ್ನು ಕ್ರಿಮಿನಾಶಕ ಸಿಂಪಡಿಸಿ ತೊಳೆದು, ಮತ್ತೆ ಪ್ರಸಿಂಗ್‌ ಮಾಡಿ ಬಂಡಲ್‌ ಕಟ್ಟಿ ಇಡಬೇಕಾಗುತ್ತದೆ. ಈ ಹಿಂದೆ 2 ಗಂಟೆ ಸಮಯದಲ್ಲಿ 4 ಜನ ಮಾಡಬೇಕಿದ್ದ ಕೆಲಸವನ್ನು ಪ್ರಸಿಂಗ್‌ ಯಂತ್ರದ ಸಹಾಯದಿಂದ ಇಬ್ಬರು ಕಾರ್ಮಿಕರು ಮಾಡಬಹುದಾಗಿದೆ.

ಬುಕ್‌ನಲ್ಲಿ ಜಪಾನ್‌ ತಂತ್ರಜ್ಞಾನ ಚಂದ್ರಿಕೆ ನೋಡಿ ಅದೇ ಮಾದರಿಯಲ್ಲಿ ಯಂತ್ರ ರೂಪಿಸಲಾಗಿದೆ. ಇದಕ್ಕೆ 15 ಸಾವಿರ ರೂ. ವೆಚ್ಚ ತಗುಲುತ್ತದೆ. ಸುಮಾರು 6-7ವರ್ಷಗಳವರೆಗೆ ಈ ಯಂತ್ರವನ್ನು ಉಪಯೋಗಿಸಬಹುದಾಗಿದೆ. ಈಗ ಬೆ„ವೋಲ್ಟನ್‌ ತಳಿ ರೇಷ್ಮೇ ಗೂಡಿಗೆ ಪ್ರಸ್ಸಿಂಗ್‌ ಪದ್ಧತಿ ಅನಿವಾರ್ಯವಾಗಿದೆ ಎಂದು ರೈತ ಚಿಕ್ಕೇಗೌಡ ತಿಳಿಸುತ್ತಾರೆ.

ಜಿಲ್ಲೆಯಲ್ಲಿ 256 ರೈತರು ಮಾತ್ರ ಬೆ„ವೋಲ್ಟನ್‌ ತಳಿ ರೇಷ್ಮೆ ಬೆಳೆಯುತ್ತಾರೆ. ರೇಷ್ಮೆ ಚಾಕಿ ಪ್ರಾರಂಭದಲ್ಲಿ ಕಾರ್ಮಿಕರ ಅವ್ಯಕತೆ ಅಷ್ಟಾಗಿ ಇರುವುದಿಲ್ಲ. ಆದರೆ ಹುಳು ಸಾಕಾಣಿಕೆಯ ದಿನ ಕಳೆದಂತೆ ಕಾರ್ಮಿಕರು ಅವಶ್ಯಕತೆ ಹೆಚ್ಚುತ್ತೆ. ನಾಲ್ಕನೇ ಜ್ವರ ಕಾಲಿಟ್ಟ ನಂತರ ಹುಳು ಅತಿಯಾಗಿ ಹಿಪ್ಪು ನೇರಳೆ ಸೊಪ್ಪು ತಿನ್ನುವುದರಿಂದ ಮೊಟ್ಟೆಗಳ ಅಗತ್ಯಕ್ಕೆ ತಕ್ಕಂತೆ ಕನಿಷ್ಟ 30-40 ಕಾರ್ಮಿಕರು ಬೇಕಾಗುತ್ತಾರೆ.

Advertisement

ರೈತರು ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡರೆ ರೇಷ್ಮೆಯಲ್ಲಿ ಹೆಚ್ಚಿನ ಬೆಳೆ ಮಾಡಲು ಅನುಕೂಲವಾಗುತ್ತದೆ. ನೂತನ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ತಿಳಿದುಕೊಂಡು ಅಳವಡಿಸಿಕೊಂಡರೆ ರೈತರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಗೂಡು ಕಟ್ಟಿ ಬಿಡಿಸುವ ಸಂದರ್ಭದಲ್ಲಿ ಅಷ್ಟಾಗಿ ಕಾರ್ಮಿಕರ ಅವಶ್ಯ ಇರುವುದಿಲ್ಲ. ಕುಟುಂಬದ ಸದಸ್ಯರೇ ನಿರ್ವಹಣೆ ಮಾಡಬಹುದು.
-ಚಿಕ್ಕೇಗೌಡ, ರೈತ ಕೊಯಿರಾ

ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ರೈತರು ಹೊಸತನ ಅಳವಡಿಸಕೊಂಡಿದ್ದಾರೆ. ಈ ಹಿಂದೆ ಬೆ„ವೋಲ್ಟನ್‌ ರೇಷ್ಮೆ ತಳಿಗೆ ರೈತರು ಭಯ ಪಡುತ್ತಿದ್ದರು. ಈಗ ಹೊಸ ತಂತ್ರಜ್ಞಾನ ರೈತರಲ್ಲಿ ಉತ್ಸಾಹ ಮೂಡಿಸಿದರೆ. ಒಂದು ಚಂದ್ರಿಕೆ ಬೆಲೆ ರೂ.83ರಂತೆ ರಿಯಾಯಿತಿ ದರದಲ್ಲಿ ರೈತರಿಗೆ 33ರೂ.ಗಳಿಗೆ ಲಭಿಸಲಿದೆ. ರೈತರ ಉತ್ಸಾಹ ಮೂಡಿಸಿದೆ.
-ಗಾಯಿತ್ರಿ ರೇಷ್ಮೇ ಸಹಾಯಕ ನಿರ್ದೇಶಕಿ

Advertisement

Udayavani is now on Telegram. Click here to join our channel and stay updated with the latest news.

Next