Advertisement

ಜಪಾನ್‌ 14 ದೇಶಗಳ ಪ್ರವೇಶಕ್ಕೆ ನಿರ್ಬಂಧ

04:07 PM Apr 29, 2020 | sudhir |

ಜಪಾನ್‌: ಕೋವಿಡ್‌-19 ವೈರಸ್‌ ವ್ಯಾಪಕವಾಗಿ ಹರಡುತ್ತಿರುವುದರಿಂದ ರಷ್ಯಾ, ಪೆರು ಮತ್ತು ಸೌದಿ ಅರೇಬಿಯಾ ಸೇರಿದಂತೆ 14 ದೇಶಗಳ ಪ್ರವೇಶವನ್ನು ನಿರ್ಬಂಧಿಸಿರುವುದಾಗಿ ಜಪಾನ್‌ ಪ್ರಧಾನಿ ಶಿಂಜೊ ಅಬೆ ಹೇಳಿದ್ದಾರೆ.

Advertisement

ಜಪಾನ್‌ ಈಗಾಗಲೇ 70 ಕ್ಕೂ ಹೆಚ್ಚು ದೇಶಗಳ ಪ್ರವೇಶವನ್ನು ನಿಷೇಧಿಸಿದೆ. ವಿಶ್ವದ ಇತರೆ ಭಾಗಗಳಿಗೂ ವೀಸಾಗಳನ್ನು ಅಮಾನ್ಯಗೊಳಿಸಿದೆ. 14 ದೇಶಗಳನ್ನು ನಿಷೇಧಿತ ಪಟ್ಟಿಗೆ ಸೇರಿಸಿದೆ. ಹಾಗಾಗಿ ಈ ದೇಶಗಳಿಂದ ಬರಲು ಹಾಗೂ ಹೋಗಲು ಅವಕಾಶವಿಲ್ಲ ಎಂದಿದ್ದಾರೆ.

ಪ್ರವೇಶ ನಿಷೇಧ ಹಾಗೂ ವೀಸಾ ನಿರ್ಬಂಧಗಳು ಆರಂಭದಲ್ಲಿ ಏಪ್ರಿಲ್‌ 30ರ ವರೆಗೆ ನಿಷೇದಿಸಲಾಗಿತ್ತು. ಆದರೀಗ ಅದನ್ನು ಮೇ ಅಂತ್ಯದವರೆಗೆ ವಿಸ್ತರಿಸಲಾಗಿದೆ. ಜತೆಗೆ ಮೇ 6 ರವರೆಗೆ ದೇಶದಲ್ಲಿ ತುರ್ತು ಪರಿಸ್ಥಿತಿಯೂ ಜಾರಿಯಲ್ಲಿದೆ.

ಇದುವರೆಗೆ ದೇಶದಲ್ಲಿ 13,385 ಪಾಸಿಟಿವ್‌ ಪ್ರಕರಣಗಳಿದ್ದು, ಈ ವರ್ಷದ ಆರಂಭದಲ್ಲಿ ಟೋಕಿಯೋ ಬಳಿ ಸಂಪರ್ಕ ಹೊಂದಿದ್ದ ಕ್ರೂಸ್‌ ಹಡಗಿನ 712 ಪ್ರಕರಣಗಳಲ್ಲಿ 364 ಸಾವು ಸಂಭವಿಸಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next