ಹೊಸದಿಲ್ಲಿ : ಜನವರಿ ತಿಂಗಳ ಸಗಟು ಬೆಲೆ ಸೂಚ್ಯಂಕ ಹಣದುಬ್ಬರವು (WPI Inflation) ಕಳೆದ 30 ತಿಂಗಳ ಗರಿಷ್ಠ ಮಟ್ಟವಾಗಿ ಶೇ.5.25ಕ್ಕೆ ನೆಗೆದಿದೆ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಇದು ಶೇ.3.39ರಲ್ಲಿ ದಾಖಲಾಗಿತ್ತು.
ಆಹಾರ ಬೆಲೆಗಳು ಸ್ವಲ್ಪಮಟ್ಟಿಗೆ ಇಳಿದಿರುವ ಹೊರತಾಗಿಯೂ ಜಾಗತಿಕ ಕಚ್ಚಾತೈಲ ಬೆಲೆಗಳ ಏರಿಕೆಯು ದೇಶೀಯ ತೈಲ ವೆಚ್ಚದ ಮೇಲೆ ಪ್ರತಿಫಲಿತವಾಗಿರುವುದೇ ಸಗಟು ಬೆಲೆ ಸೂಚ್ಯಂಕದ ಭಾರೀ ನೆಗೆತಕ್ಕೆ ಕಾರಣವೆಂದು ತಿಳಿಯಲಾಗಿದೆ.
2014ರ ಜುಲೈ ತಿಂಗಳಲ್ಲಿ ದಾಖಲಾಗಿದ್ದ ಶೇ.5.41ರ ಪ್ರಮಾಣದ ಸಗಟು ಬೆಲೆ ಸೂಚ್ಯಂಕ ಈ ಹಿಂದಿನ ಗರಿಷ್ಠ ಮಟ್ಟವಾಗಿತ್ತು.
ಸಗಟು ಬೆಲೆ ಸೂಚ್ಯಂಕ ಅಂಕಿ ಅಂಶಗಳನ್ನು ಇಂದು ಬಿಡುಗಡೆ ಮಾಡಿರುವ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ, 2016ರ ಜನವರಿಯಲ್ಲಿ ವಾರ್ಷಿಕ ಹಣದುಬ್ಬರ ಪ್ರಮಾಣವು (-) ಶೇ.1.07ರಲ್ಲಿ ದಾಖಲಾಗಿತ್ತು.
Related Articles
2017ರ ಜನವರಿ ತಿಂಗಳಲ್ಲಿ ಸರ್ವ ಸರಕುಗಳ ಸಗಟು ಬೆಲೆ ಸೂಚ್ಯಂಕವು ಶೇ.182.8 (ತಾತ್ಕಾಲಿಕ) ದಿಂದ ಶೇ.184.6ಕ್ಕೆ (ತಾತ್ಕಾಲಿಕ) ಏರುವ ಮೂಲಕ ಶೇ.1.0 ಏರಿಕೆಯನ್ನು ದಾಖಲಿಸಿದೆ ಎಂದು ಸಚಿವಾಲಯ ಮೂಲಗಳು ಹೇಳಿವೆ.