Advertisement
ಬುಧವಾರ ರಾತ್ರಿಯವರೆಗೂ ಸಹ ಸಮಾವೇಶದ ಸಿದ್ಧತೆಗಳು ಭರದಿಂದಲೇ ಸಾಗಿದ್ದವು. ಸಮಾವೇಶದ ವೇದಿಕೆ ಬಳಿ ಸೇರಿದಂತೆ ರಸ್ತೆ ಮಾರ್ಗಗಳಲ್ಲಿ ಬಿಜೆಪಿಯ ಕಟೌಟ್, ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದವು. ಆದರೆ, ಮಂಗಳವಾರ ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆ, ಬುಧವಾರ ತಡರಾತ್ರಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜನೋತ್ಸವ ಸಮಾರಂಭವನ್ನು ರದ್ದು ಮಾಡಿರುವ ಕುರಿತು ಪ್ರಕಟಿಸಿದ್ದು, ಸಮಾವೇಶ ಸಿದ್ಧತೆಗಳಿಗಾಗಿ ವೆಚ್ಚ ಮಾಡಿದ ಕೋಟ್ಯಂತರ ರೂ. ನೀರಲ್ಲಿ ಹೋಮ ಮಾಡಿದಂತಾಗಿದೆ.
ಊಟವನ್ನು ತಯಾರಿಸಲಿಲ್ಲ. ಮಾಡಿದ್ದ ಅಡುಗೆ ವಿವಿಧ ಆಶ್ರಮಗಳಿಗೆ: ಬೆಳಗ್ಗೆ 25
ಸಾವಿರ ಜನ ಕಾರ್ಯಕರ್ತರಿಗೆ ಪಲಾವ್ ಸಿದ್ಧಪಡಿಸಲಾಗಿತ್ತು. ಮಧ್ಯಾಹ್ನದ ಊಟಕ್ಕೆ ಪಲಾವ್, ಮೊಸರನ್ನ, ಬಾದುಷ ಮಾಡಲು ಸಿದ್ಧತೆ ನಡೆಸಿ, 1 ಲಕ್ಷ 15 ಸಾವಿರ ಬಾದುಷ ರೆಡಿಯಾಗಿತ್ತು. ಬೆಳಗ್ಗೆ ಸಮಾವೇಶ ರದ್ದಾಗಿರುವ ಕುರಿತು ಸುದ್ದಿ ಬರುತ್ತಿದ್ದಂತೆಯೇ ಮಾಡಿದ್ದ ಅಡುಗೆಯನ್ನು ವಿವಿಧ ಆಶ್ರಮಗಳಿಗೆ ಹಾಗೂ ವಸತಿ ಶಾಲೆಗಳಿಗೆ ನೀಡಲಾಗಿದೆ ಎಂದು ಕಾರ್ಯಕರ್ತರು ತಿಳಿಸಿದರು.
Related Articles
Advertisement
ರಸ್ತೆ ಬದಿಯಲ್ಲಿದ್ದ ಫ್ಲೆಕ್ಸ್, ಬಾವುಟ ತೆರವು ಕಳೆದ 10 ದಿನಗಳಿಂದ ಸಿದ್ಧಪಡಿಸಲಾಗಿದ್ದ ಬೃಹತ್ ವೇದಿಕೆಯನ್ನು ಗುರುವಾರ ಬೆಳಗಿನಿಂದಲೇ ತೆರವು ಮಾಡಿ, ಸಾಮಗ್ರಿಗಳನ್ನು ವಾಹನಗಳಿಗೆ ತುಂಬಲಾಯಿತು. ರಸ್ತೆ ಬದಿಗಳಲ್ಲಿ ಅಳವಡಿಸಿದ್ದ ಬಿಜೆಪಿಯ ಫ್ಲೆಕ್ಸ್‌ಗಳು, ಬಂಟಿಂಗ್ಸ್ ಹಾಗೂ ಬಾವುಟಗಳನ್ನು ಸಹ ತೆರವು ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.