ಪುರಸ್ಕೃತ, ಉದ್ಯಮಿ ಜಗದೀಶ ಗುಡಗುಂಟಿಮಠ ಹೇಳಿದರು.
Advertisement
ನಗರದ ನಾಡೋಜ ಗುಡಗುಂಟಿಮಠರ ಸಾಕ್ಷಾತ್ಕಾರ ಭವನದಲ್ಲಿ ರವಿವಾರ ತಾಲೂಕು ಜಂಗಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಜಂಗಮ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಧರ್ಮ ಪ್ರಚಾರ ಜಂಗಮ ಸಮಾಜದ ಮುಖ್ಯ ಕಾಯಕವಾಗಿದೆ. ಜಂಗಮರಲ್ಲಿ ಸ್ಥಿರ ಮತ್ತು ಚರ ಜಂಗಮರಿದ್ದಾರೆ. ಆಚಾರ-ವಿಚಾರಗಳಲ್ಲಿ ಎಲ್ಲರೂ ಉತ್ತಮವಾಗಿದ್ದರೇ ನಮ್ಮೆಲ್ಲರ ಜೀವನ ಆದರ್ಶಮಯವಾಗಲಿದೆ. ಜಂಗಮರು ಉತ್ತಮ ಸಂಸ್ಕೃತಿ ರೂಢಿಸಿಕೊಳ್ಳಬೇಕು. ಭವ್ಯ ಭಾರತ ದೇಶದಲ್ಲಿ ವಿದ್ಯಾರ್ಥಿಗಳು ಒಳ್ಳೆಯ ಪ್ರಜೆಗಳಾಗಬೇಕು ಎಂದರು.
Related Articles
ಪಿಯು ಮತ್ತು ಪದವಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
Advertisement
ಜಂಗಮದ ಸಮಾಜದ ಚುನಾಯಿತ ಪ್ರತಿನಿಧಿಗಳಿಗೆ, ಪದೋನ್ನತಿ ಹೊಂದಿದ ಮತ್ತು ನಿವೃತ್ತಿ ಹೊಂದಿರುವ ಹಾಗೂ ವಿಶೇಷ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿದರು. ವೇದಿಕೆಯಲ್ಲಿ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಯಮನೂರ ಮೂಲಂಗಿ, ಬಿಜೆಪಿ ನಗರ ಘಟಕ ಅಧ್ಯಕ್ಷ ಅಜಯ ಕಡಪಟ್ಟಿ, ಸಿಪಿಐ ಶಿವಯ್ಯ ಮಠಪತಿ, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಸಿ.ಎಸ್. ಗಡ್ಡದೇವರಮಠ, ಎಸ್.ಎಸ್.ನಾಯ್ಕಲಮಠ, ರುದ್ರಯ್ಯ ಕರಡಿ, ಸಂಗು ಮುತ್ತಿನಕಂತಿಮಠ, ಗುರುಮೂರ್ತಯ್ಯ ಮಠಪತಿ, ಆರ್.ಎಸ್.ಅಕ್ಕಿ, ಅಶೋಕ ಗಾವಿ, ಡಾ| ಮಲ್ಲು ಮಠ, ಚಿಕ್ಕಯ್ಯ ಮಠಪತಿ, ಆಶಾದೇವಿ ಗುಡಗುಂಟಿಮಠ, ಭಾರತಿ ಮಠಪತಿ, ಸೋಮಲಿಂಗ ಹಿರೇಮಠ, ವಿರೂಪಾಕ್ಷಯ್ಯ ಕಂಬಿ ಇದ್ದರು.