Advertisement

ಜಂಗಮ ಸಮಾಜ ಒಗ್ಗೂಡಲಿ: ಚಿಂತಪಳ್ಳಿ

06:52 AM Feb 01, 2019 | Team Udayavani |

ಕಾಳಗಿ: ಜಂಗಮರು ಒಗ್ಗೂಡಿದಾಗ ಮಾತ್ರ ಸರ್ಕಾರ ಸಮಾಜಕ್ಕೂ ಸ್ಥಾನಮಾನ ನೀಡಲು ಸಾಧ್ಯವಾಗುತ್ತದೆ ಎಂದು ಜಂಗಮ ಸಮಾಜದ ಮುಖಂಡ ವೀರಭದ್ರಯ್ಯ ಚಿಂತಪಳ್ಳಿ ಹೇಳಿದರು.

Advertisement

ತಾಲೂಕಿನ ಟೆಂಗಳಿ ಗ್ರಾಮದ ವೀರಭದ್ರೇಶ್ವರ ದೇವಾಲಯ ಆವರಣದಲ್ಲಿ ಹೈದ್ರಾಬಾದ ಕರ್ನಾಟಕ ಜಂಗಮ ಸಮಾಜ ಸಂಸ್ಥೆ ರಾಜ್ಯಾಧ್ಯಕ್ಷ ಅಮರೇಶ್ವರ ರಾವೂರಮಠ ಆದೇಶದ ಮೇರೆಗೆ ಕರೆಯಲಾಗಿದ್ದ ಬೇಡರ ಜಂಗಮ ಜಾತಿ ಪ್ರಮಾಣ ಪತ್ರದ ಮಾಹಿತಿ ಸಭೆಯಲ್ಲಿ ಅವರು ಮಾತನಾಡಿದರು.

ಹೈದ್ರಾಬಾದ ಕರ್ನಾಟಕದಲ್ಲಿ ಸುಮಾರು 2 ಲಕ್ಷ ಜಂಗಮರು ಇದ್ದಾರೆ. ಎಲ್ಲರೂ ಒಂದಾಗಿ ಹೋರಾಡಿದಾಗ ಮಾತ್ರ ಸರ್ಕಾರದ ಗಮನ ಸೆಳೆಯಲು ಸಾಧ್ಯ. ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಹತ್ತಿರ ಹೋಗಿ ಎಲ್ಲ ಜಂಗಮ ಬಾಂಧವರು ಅರ್ಜಿ ಸಲ್ಲಿಸಬೇಬೇಕು. ನಂತರ ಪಂಚನಾಮೆ ಮಾಡಿದ ಮೇಲೆ ಅರ್ಜಿ ಸ್ವೀಕೃತಿಯಾಗಿ ಪ್ರಮಾಣ ಪತ್ರ ನೀಡುತ್ತಾರೆ ಎಂದರು.

ಗ್ರಾಪಂ ಸದಸ್ಯ ವೀರಭದ್ರಯ್ಯ ಸಾಲಿಮಠಸಿದ್ಧಯ್ಯಸ್ವಾಮಿ ಶಾಂತೇಶ್ವರಮಠ, ಹೈ.ಕ ಜಂಗಮ ಸಮಾಜದ ಪ್ರಧಾನ ಕಾರ್ಯದರ್ಶಿ ಎಂ.ಬಿ. ಕಳ್ಳಿಮಠ, ಗ್ರಾಪಂ ಮಾಜಿ ಅಧ್ಯಕ್ಷೆ ಶ್ರೀದೇವಿ ಸ್ಥಾವರಮಠ, ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next