Advertisement
ಮಧ್ಯಾಹ್ನದ ಮಹಾ ಪೂಜೆಯ ಬಳಿಕ ದೇವಸ್ಥಾನದಲ್ಲಿ ಪೂಜಿಸಲ್ಪಟ್ಟ ದೇವಿಯ ಉತ್ಸವ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿರಿಸಿ ತಲೆಯ ಮೇಲೆ ಹೊತ್ತು ಕಾಲ್ನಡಿಗೆಯಲ್ಲಿ ಗ್ರಾಮದ ಮನೆಮನೆಗೆ ತೆರಳಲಾಗುತ್ತದೆ. ಇದರೊಂದಿಗೆ ಭಜನಾ ತಂಡ, ಅರ್ಚಕರು, ಪ್ರತಿನಿಧಿಗಳು ಇರುತ್ತಾರೆ.
ಈ ಕಾರ್ಯಕ್ರಮದ ರೂಪುರೇಷೆ, ಪರಿಕಲ್ಪನೆಯ ಬಗ್ಗೆ ಆಡಳಿತ ಮಂಡಳಿ ಅಧ್ಯಕ್ಷರಾದ ಉದಯ ಕುಮಾರ್ ಹಟ್ಟಿಯಂಗಡಿ ವಿವರಿಸುತ್ತಾ, ಬಗ್ವಾಡಿಯಲ್ಲಿ ಹಲವಾರು ಹೊಸ ಹೊಸ ಕಾರ್ಯಕ್ರಮಗಳು, ಪ್ರಾರಂಭಗೊಂಡು ಯಶಸ್ವಿಯಾಗಿ ಮುನ್ನಡೆಯುತ್ತಿದೆ. ನವರಾತ್ರಿಯ ಸಮಯದಲ್ಲಿ ಶಕ್ತಿಸ್ವರೂಪಿಣಿ ಮಹಿಷಾಮರ್ದಿನಿ ದೇವಿ ಬಗ್ವಾಡಿ ಗ್ರಾಮದ ಮನೆ ಮನ ಅಲಂಕರಿಸಬೇಕು ಎನ್ನುವ ಪರಿಕಲ್ಪನೆಯಲ್ಲಿ ಬಗ್ವಾಡಿ ಗ್ರಾಮದ ಪ್ರತಿಮನೆಗೆ ಭಜನೆ ತಂಡದೊಂದಿಗೆ ಪೂಜಿಸಲ್ಪಟ್ಟ ಮಹಿಷಾಸುರಮರ್ದಿನಿ ದೇವಿಯೊಂದಿಗೆ ತೆರಳಿ ಪ್ರತಿಮನೆಯಲ್ಲಿ ಆರಾಧಿ ಸುವ ಧಾರ್ಮಿಕ ಪ್ರಕ್ರಿಯೆ ಇದಾಗಿದೆ ಎಂದು ಹೇಳಿದರು.
Related Articles
Advertisement
ಶಕ್ತಿ ಸಂಚಯನ, ಭಕ್ತಿ ಸಂಚಯನದೇವರೇ ಮನೆಗೆ ಭೇಟಿ ನೀಡುವುದರಿಂದ ಶಕ್ತಿ ಸಂಚಯವಾಗುತ್ತದೆ. ಧನಾತ್ಮಕವಾದ ಲವಲವಿಕೆ ಮೂಡುತ್ತದೆ. ಮನೆಯಲ್ಲಿ ತಾಳ, ಘಂಟೆ, ಜಾಗಟೆ ನಾದದೊಂದಿಗೆ ಭಜನೆಯಿಂದ ಋಣಾತ್ಮಕ ಶಕ್ತಿಗಳು ನಾಶವಾಗುತ್ತವೆ ಎನ್ನುವುದು ಯೋಜನೆಯ ಮೂಲ ಚಿಂತನೆ. ಕಾರ್ಯಕ್ರಮ ಆರಂಭದ ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಮುಂಬಯಿ ಇದರ ಅಧ್ಯಕ್ಷರಾದ ರಾಜು ಮೆಂಡನ್ ವಂಡ್ಸೆ ಮೆಚ್ಚುಗೆ ವ್ಯಕ್ತಪಡಿಸಿದರು. ಗಣೇಶ ಮೆಂಡನ್ ಮುಂಬಯಿ, ಎನ್.ಡಿ ಚಂದನ್, ಕೃಷ್ಣಮೂರ್ತಿ ನಾಯ್ಕ ಮುಂಬಯಿ, ರಾಘವೇಂದ್ರ ಚಂದನ್ ಮುಂಬಯಿ, ಎಂ.ಎಂ.ಸುವರ್ಣ, ಎಂ.ಆರ್ ನಾಯ್ಕ, ಸಂತೋಷ್ ಶೆಟ್ಟಿ ಬಗ್ವಾಡಿ, ನಿವೃತ್ತ ಮುಖ್ಯ ಶಿಕ್ಷಕ ರಾಜೀವ ಶೆಟ್ಟಿ ಬಗ್ವಾಡಿ, ಆನಂದ ಕೆ.ನಾಯ್ಕ, ನಾಗೇಶ ಪಿ.ಕಾಂಚನ್, ದಿನೇಶ ಕಾಂಚನ್, ಪ್ರಭಾಕರ ಸೇನಾಪುರ, ಶ್ಯಾಮಲ ಜಿ.ಚಂದನ್, ರಾಜೀವ ಸೌರಭ, ಶೋಭಾ ಪುತ್ರನ್, ವಾಸು ಜಿ.ನಾಯ್ಕ, ಕ್ಷೇತ್ರದ ಪ್ರಧಾನ ಅರ್ಚಕರು ಉಪಸ್ಥಿತರಿದ್ದರು. ಶ್ರೀ ಮಹಿಷಾಸುರಮರ್ದಿನಿ ಭಜನಾ ತಂಡದ ಸದಸ್ಯರು, ಶ್ರೀ ಮಾತಾ ಭಜನಾ ಮಂಡಳಿ ಹಕ್ರೆಮಠ ಕೊಡೇರಿ ಇಲ್ಲಿನ ಭಜನಾ ತಂಡದವರು ಭಾಗವಹಿಸಿದ್ದರು. -ಡಾ| ಸುಧಾಕರ ನಂಬಿಯಾರ್