Advertisement

ಕಾಂಚಾಣ ಹಿಂದೆ “ಜನ್‌ಧನ್‌’!

09:18 AM Jan 16, 2020 | Lakshmi GovindaRaj |

ಈಗಾಗಲೇ ಕಪ್ಪು ಹಣ ವಿಷಯಕ್ಕೆ ಸಂಬಂಧಿಸಿದಂತೆ ಒಂದಷ್ಟು ಚಿತ್ರಗಳು ಬಂದಿವೆ. ಅದೇ ಸಾಲಿಗೆ ಸೇರುವ “ಜನ್‌ಧನ್‌’ ಹೊಸ ವಿಷಯಗಳೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದೆ. ಜ.17 ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರದಲ್ಲಿ ನೋಟ್‌ ಬ್ಯಾನ್‌ ಕಥೆ ಹೈಲೈಟ್‌. ಡಿಮಾನಿಟೇಜಶನ್‌ ಬಳಿಕ ಏನೆಲ್ಲಾ ಸಮಸ್ಯೆ ಎದುರಾಯ್ತು. ಜನರು ಹೇಗೆ ಕಷ್ಟ ಅನುಭವಿಸಿದರು. ಅದರ ಲಾಭ ಯಾರೆಲ್ಲ ಪಡೆದರು, ಯಾರೆಲ್ಲಾ ಪರದಾಡಿದರು ಎಂಬ ವಿಷಯ ಇಟ್ಟುಕೊಂಡು ಮರಡಿಹಳ್ಳಿ ನಾಗಚಂದ್ರ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ.

Advertisement

ಇನ್ನು, ಶ್ರೀ ಸಿದ್ಧಿ ವಿನಾಯಕ ಫಿಲಂಸ್‌ ಬ್ಯಾನರ್‌ನಡಿ ಟಿ.ನಾಗಚಂದ್ರ ಗೆಳೆಯರ ಜೊತೆ ಸೇರಿ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಅಂದಹಾಗೆ ಇದು ಬೆಂಗಳೂರಿನಿಂದ ಶಿರಾವರೆಗೂ ನಡೆಯುವ ಒಂದು ದಿನದ ಕಥೆಯಾಗಿದ್ದು, ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಬೆಳಗ್ಗೆ 4 ಗಂಟೆಯಿಂದ ಶುರುವಾಗುವ ಜರ್ನಿ, ಸಂಜೆ ಹೊತ್ತಿಗೆ ಮುಗಿಯುತ್ತದೆ. ಇಲ್ಲಿ ಬಡವರ ಭಾವನೆಗಳ ಜೊತೆ ಹೇಗೆಲ್ಲಾ ಚೆಲ್ಲಾಟ ಆಡುತ್ತಾರೆ ಎಂಬ ವಿಷಯದೊಂದಿಗೆ, ಸಮಾಜದಲ್ಲಿ ಎಂಥೆಂಥಾ ಮಂದಿ ಇರುತ್ತಾರೆ ಎಂಬಿತ್ಯಾದಿ ಅಂಶಗಳ ಜೊತೆ ಚಿತ್ರಿಸಲಾಗಿದೆ. ಚಿತ್ರದಲ್ಲಿ ಸುನೀಲ್‌ ಶಶಿ ಹೀರೋ ಆಗಿ ನಟಿಸಿದ್ದಾರೆ.

ಅವರಿಗೆ ಇದು ಮೊದಲ ಅನುಭವ. ಉಳಿದಂತೆ ರಚನಾ, ಮಾ.ಲಕ್ಷ್ಮಣ್‌, ಅರುಣ್‌, ಟಾಪ್‌ಸ್ಟಾರ್‌ ರೇಣು, ಜಯಲಕ್ಷ್ಮೀ, ಸುನೀಲ್‌ ವಿನಾಯಕ, ಸುಮನ್‌, ತೇಜೇಶ್ವರ್‌ ಇತರರು ನಟಿಸಿದ್ದಾರೆ. ಒಟ್ಟಾರೆ ಕಾಮನ್‌ ಮ್ಯಾನ್‌ ಮತ್ತು ರಾಯಲ್‌ ಮ್ಯಾನ್‌ ನಡುವಿನ ಕಥೆಯಲ್ಲಿ “ಪ್ರಧಾನ ಮಂತ್ರಿಗಳು ನೋಟ್‌ ಬ್ಯಾನ್‌ ಘೋಷಣೆ ಮಾಡಿದ ಬಳಿಕ ಆದಂತಹ ಘಟನೆಗಳೇ ಚಿತ್ರದ ಜೀವಾಳ. ಚಿತ್ರದಲ್ಲಿ ಫ್ರೆಂಡ್‌ಶಿಪ್‌, ಪ್ರೀತಿ, ಪ್ರೇಮ ವಿಷಯಗೂ ಇವೆ. ಮೂರು ಭರ್ಜರಿ ಫೈಟ್‌ಗಳೂ ಇವೆ. ಈಗಾಗಲೇ ಟ್ರೇಲರ್‌, ಹಾಡಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಸೌಂದರ್‌ ರಾಜ್‌ ಸಂಕಲನವಿದೆ. ಜಾಗ್ವಾರ್‌ ಸಣ್ಣಪ್ಪ ಸಾಹಸವಿದೆ. ಉಮೇಶ್‌ ಕಂಪ್ಲಾಪುರ ಅವರು ಛಾಯಾಗ್ರಹಣ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next