ತ್ತಿ ರುವ ಜನರ ಬಳಿ ಹೋಗಿ ಅವುಗಳನ್ನು ಆಲಿಸಿ ಪರಿಹಾರ ಒದಗಿಸಲು ನಿರ್ಧರಿಸಿದ್ದೇನೆ” ಎಂದು ಮುಖ್ಯಮಂತ್ರಿ ಮಂಗಳವಾರ ಹೇಳಿದರು.
Advertisement
ಗೃಹ ಕಚೇರಿ ಕೃಷ್ಣಾದಲ್ಲಿ ಜನತಾ ದರ್ಶನ ನಡೆಸಿದ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಜನರು ತಮ್ಮ ಕಷ್ಟ ಕಾರ್ಪಣ್ಯಗಳನ್ನು ಹೇಳಿಕೊಳ್ಳಲು ದೂರದ ಊರುಗಳಿಂದ ಬರುತ್ತಾರೆ. ಮೊದಲೇ ಸಮಸ್ಯೆಯಲ್ಲಿರುವ ಅವರು ತಮ್ಮನ್ನು ಕಾಣಲು ಅಷ್ಟು ದೂರದಿಂದ ಬರಲು ಸಾಕಷ್ಟು ಪಡಿಪಾಟಲು ಅನುಭವಿಸುತ್ತಿದ್ದಾರೆ. ತಂದೆ, ತಾಯಿ ಅಥವಾ ಗಂಡ ಇಲ್ಲದ ಹೆಣ್ಣು ಮಕ್ಕಳು ಕಷ್ಟ ಪರಿಹರಿಸುವಂತೆ ಕೇಳಲೋ ಆಥವಾಶಾಲಾ-ಕಾಲೇಜು ಶುಲ್ಕ ಸಂಬಂಧ, ಉದ್ಯೋಗ, ವೈದ್ಯಕೀಯ ಸೌಲಭ್ಯ ಇನ್ನಿತರೆ ಸಹಾಯಕ್ಕಾಗಿ ದೂರದ ಊರುಗಳಿಂದ ಜನ ಬರಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ತೆರಳಿ ಜಿಲ್ಲೆಗಳಲ್ಲೇ ಜನತಾ ದರ್ಶನ ನಡೆಸಲಾ ಗುವುದು. ಅಹವಾಲು ಸ್ವೀಕರಿಸಿ ಅಲ್ಲೇ ಅದನ್ನು ಅಧಿಕಾರಿಗಳಿಗೆ ನೀಡಿ ಕಾಲಮಿತಿಯೊಳಗೆ ಸಮಸ್ಯೆ ಬಗೆಹರಿಸುವಂತೆ ಸೂಚಿಸುತ್ತೇನೆ. ಈ ದೂರುಗಳ ವಿಲೇವಾರಿಗಾಗಿಯೇ ಪ್ರತ್ಯೇಕ ವ್ಯವಸ್ಥೆ ಜಾರಿಗೆ ತರುತ್ತೇನೆ ಎಂದು ಅವರು ಹೇಳಿದರು.