Advertisement

‘ಸಂಘಟನೆಗೆ ಕಾರ್ಯಾಲಯ ಸದುಪಯೋಗವಾಗಲಿ’

12:44 PM Aug 09, 2018 | |

ಉಳ್ಳಾಲ : ರಾಜ್ಯ ಸರಕಾರದ ಸವಲತ್ತುಗಳನ್ನು ಪಡೆಯಲು ಹಾಗೂ ಜನಸಾಮಾನ್ಯರ ದೈನಂದಿನ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಕಾರ್ಯಪ್ರವೃತ್ತರಾಗುವುದರೊಂದಿಗೆ ಉಳ್ಳಾಲದಲ್ಲಿ ಪಕ್ಷದ ಸಂಘಟನೆಯನ್ನು ಇನ್ನಷ್ಟು ಬಲಗೊಳಿಸಬೇಕು ಈ ನಿಟ್ಟಿನಲ್ಲಿ ಕಾರ್ಯಾಲಯ ಸದುಪಯೋಗವಾಗಲಿ ಎಂದು ಜಾತ್ಯತೀತ ಜನತಾದಳದ ದ.ಕ.ಜಿಲ್ಲಾ ಅಧ್ಯಕ್ಷ ಮೊಹಮ್ಮದ್‌ ಕುಂಞ ಅಭಿಪ್ರಾಯಪಟ್ಟರು.

Advertisement

ಉಳ್ಳಾಲ ನಗರ ಜನತಾದಳ(ಜಾತ್ಯತೀತ)ದ ಉಳ್ಳಾಲ ವ್ಯಾಪ್ತಿಯ ನೂತನ ಕಾರ್ಯಾಲಯವನ್ನು ಉದ್ಘಾಟಿಸಿ ಉಳ್ಳಾಲ ನಗರ ಸಭೆಯ ಕಾಂಗ್ರೆಸ್‌ ಕೌನ್ಸಿಲರ್‌ ಅಶ್ರಫ್‌ ಬಾವಾ ಅವರನ್ನು ಜಾತ್ಯಾತೀತ ಜನತಾದಳ ಪಕ್ಷಕ್ಕೆ ಸೇರ್ಪಡೆಗೊಳಿಸಿ ಮಾತನಾಡಿದರು. ಜಾತ್ಯತೀತ ಜನತಾದಳದ ರಾಜ್ಯ ನಾಯಕ ಅಬೂಬಕ್ಕರ್‌ ನಾಟೆಕಲ್‌ ನೂತನ ಕಾರ್ಯಾಲಯ ಕಾರ್ಯಕರ್ತರ ಆಶೋತ್ತರಗಳಿಗೆ ಸದುಪಯೋಗವಾಗಲಿ ಎಂದರು.

ಕೌನ್ಸಿಲರ್‌ ಅಶ್ರಫ್‌ ಬಾವಾ, ಕ್ಷೇತ್ರ ಸಮಿತಿಯ ಅಧ್ಯಕ್ಷ ಮೋಹನ್‌ದಾಸ್‌ ಶೆಟ್ಟಿ, ಗಂಗಾಧರ ಉಳ್ಳಾಲ್‌, ಅಝೀಝ್ ಮಲಾರ್‌, ದಿನಕರ್‌ ಉಳ್ಳಾಲ್‌, ಯು.ಎಚ್‌. ಫಾರೂಕ್‌ ಅವರು ಮಾತನಾಡಿದರು. ಚುನಾವಣಾ ಪ್ರಚಾರ ಸಮಿತಿಯ ಸಂಚಾಲಕ ನಝೀರ್‌ ಉಳ್ಳಾಲ್‌ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನಗರಾಧ್ಯಕ್ಷ ಪುತ್ತುಮೋನು ಹುಸೈನ್‌ ಕಾರ್ಯಕ್ರಮದಲ್ಲಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next