Advertisement

ಹೈಕೋರ್ಟ್‌ ಪೀಠದಲ್ಲಿಜನತಾ ಅದಾಲತ್‌

10:58 AM Dec 09, 2018 | Team Udayavani |

ಕಲಬುರಗಿ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಕರ್ನಾಟಕ ಹೈಕೋರ್ಟ್‌ ಕಲಬುರಗಿ ಪೀಠದಲ್ಲಿ ಜನತಾ ನ್ಯಾಯಾಲಯ ಹಮ್ಮಿಕೊಳ್ಳಲಾಗಿತ್ತು. ಜನತಾ ನ್ಯಾಯಾಲಯದಲ್ಲಿ ರಾಜ್ಯ ಹೈಕೋರ್ಟ್‌ ನ್ಯಾಯಾಧೀಶ ಅರವಿಂದ ಕುಮಾರ, ನ್ಯಾ| ಎಚ್‌.ಟಿ. ನರೇಂದ್ರ ಪ್ರಸಾದ, ನ್ಯಾ| ಪಿ.ಜಿ.ಎಂ. ಪಾಟೀಲ ಭಾಗವಹಿಸಿ ಒಟ್ಟು 141 ಎಂ.ಎಫ್‌.ಎ ಪ್ರಕರಣ ಇತ್ಯರ್ಥಪಡಿಸಿ ಒಟ್ಟು 2,43,32,000 ರೂ. ಹೆಚ್ಚುವರಿ ಪರಿಹಾರ ನೀಡುವಂತೆ ಆದೇಶ ನೀಡಿದ್ದಾರೆ ಎಂದು ಕಾನೂನು ಸೇವೆಗಳ ಸಮಿತಿ ಕಾರ್ಯದರ್ಶಿ ಎಸ್‌.ಆರ್‌.ಮಾಣಿಕ್ಯ ತಿಳಿಸಿದ್ದಾರೆ.

Advertisement

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ಜನತಾ ಅದಾಲತ್‌ ಹಮ್ಮಿಕೊಂಡು ಹಲವು ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಯಿತು. ಜನತಾ ನ್ಯಾಯಾಲಯದಲ್ಲಿ 176 ವ್ಯಾಜ್ಯ ಪೂರ್ವ ಪ್ರಕರಣ ಇತ್ಯರ್ಥಪಡಿಸಿ 40,38,196 ರೂ. ವಸೂಲಿಗಾಗಿ ಆದೇಶ ನೀಡಲಾಗಿದೆ.

ಮೋಟಾರ್‌ ವಾಹನ ಅಪಘಾತ ಮೊಕದ್ದಮೆಯ 27 ಪ್ರಕರಣ ಇತ್ಯರ್ಥ ಪಡಿಸಿ 48.86 ಲಕ್ಷ ರೂ. ಪರಿಹಾರ ಮಂಜೂರು ಮಾಡಲಾಗಿದೆ. ಎರಡು ಅಸಲು ದಾವೆ ಪ್ರಕರಣದಲ್ಲಿ 40 ಸಾ.ರೂ. ಪಾವತಿಗಾಗಿ ಮತ್ತು ಮೂರು ಚೆಕ್‌ ಬೌನ್ಸ್‌ ಪ್ರಕರಣಗಳಲ್ಲಿ 10.15 ಲಕ್ಷ ರೂ. ವಸೂಲಿಗೆ ಆದೇಶಿಸಲಾಗಿದೆ. 48 ಕ್ರಿಮಿನಲ್‌ ಮಿಸೆಲಿನಿಯಸ್‌ ಪ್ರಕರಣಗಳನ್ನು ಇದೇ ಸಂದರ್ಭದಲ್ಲಿ ರಾಜಿ ಸಂಧಾನ ಮೂಲಕ ಇತ್ಯರ್ಥ ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next