Advertisement

ಜನಸ್ಪಂದನ: ಕುಣಿದು ಕುಪ್ಪಳಿಸಿದ ಸಚಿವರು,ನಾಯಕರು: ಕಾಂಗ್ರೆಸ್ ಟೀಕೆ

06:51 PM Sep 10, 2022 | Team Udayavani |

ಬೆಂಗಳೂರು : ಜನಸ್ಪಂದನ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು, ಸಚಿವರು ಕುಣಿದು ಕುಪ್ಪಳಿಸಿರುವುದು ಕಾಂಗ್ರೆಸ್ ಟೀಕೆಗೆ ಗುರಿಯಾಗಿದ್ದು, ಸಂಪುಟ ಸದಸ್ಯರೊಬ್ಬರ ಸಾವಿನ ಸೂತಕವೇ ಕಳೆದಿಲ್ಲ. ಆಗಲೇ ಕುಣಿದು ಕುಪ್ಪಳಿಸುತ್ತಿದ್ದಾರೆ ಎಂದು ಟೀಕಿಸಿದೆ.

Advertisement

ಜನಸ್ಪಂದನ ಕಾರ್ಯಕ್ರಮದ್ದು ಎನ್ನಲಾದ ವಿಡಿಯೋವನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್ , ಇನ್ನೂ ಸಂಪುಟ ಸಚಿವರೊಬ್ಬರ ಸಾವಿನ ಸೂತಕವೇ ಕಳೆದಿಲ್ಲ. ಜೀವ ಬಿಟ್ಟ ತಮ್ಮದೇ ಪಕ್ಷದ ನಿಷ್ಠಾವಂತ ಕಾರ್ಯಕರ್ತನ ಕುಟುಂಬದ ಕಣ್ಣೀರು ಆರಿಲ್ಲ. ತಮ್ಮವರ ಸಾವುಗಳೇ ಬಿಜೆಪಿಗೆ ಕೊಂಚವೂ ಬೇಸರ ಮೂಡಿಸಿಲ್ಲ ಎಂದಾದರೆ ಜನರ ನೋವಿಗೆ ಮರುಕಪಡುವರೆ? ಬಿಜೆಪಿಗೆ ಕನಿಷ್ಠ ಅಂತಃಕರಣವಿಲ್ಲ. ಭ್ರಷ್ಟೋತ್ಸವದ ಮುಂದೆ ಮಾನವೀಯತೆ ಕಳೆದುಹೋಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

ಕೆಪಿಸಿಸಿ ಕಚೇರಿಯಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್, ಇದು ಜನಸ್ಪಂದನಾ ಕಾರ್ಯಕ್ರಮವಲ್ಲ, ಸಮಾವೇಶ ಜನಸ್ಪಂದನ ಆಗಿದ್ದರೆ‌ ಜನರ‌ ಕಷ್ಟ ಆಲಿಸಬೇಕಾಗಿತ್ತು.ಈಗ ಭಾರೀ ಮಳೆಯಿಂದ ಬೆಂಗಳೂರು ಮುಳುಗಿದೆ.ರಾಜ್ಯದ ವಿವಿಧ ಭಾಗಗಳು ಮುಳುಗುತ್ತಿವೆ.ಸಮಾವೇಶ ಮಾಡಿ ಅವರನ್ನ ಅವರೇ ಹೊಗಳಿಕೊಳ್ಳುತ್ತಿದ್ದಾರೆ.ರಾಜ್ಯದ ಜನ ಇದನ್ನು ಸಹಿಸುವುದಿಲ್ಲ.ಸಮಾವೇಶದಲ್ಲಿ ಸಚಿವರು, ಶಾಸಕರು ಡ್ಯಾನ್ಸ್ ಮಾಡುತ್ತಾರೆ.ಜನರನ್ನ ಎಂಥ ಮೂರ್ಖರನ್ನಾಗಿ ಮಾಡಿದ್ದೇವೆ ಎಂಬ ಖುಷಿಯಲ್ಲಿ ಕುಣಿಯುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಪ್ರಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು ವೇದಿಕೆಯಲ್ಲಿ ಪ್ರಸ್ತುತ ಪಡಿಸಿದ ಕುಲದಲ್ಲಿ ಮೇಲ್ಯಾವುದೋ ..ಎಂಬ ಹಾಡಿಗೆ ಸಚಿವ ಎಂಟಿಬಿ ನಾಗರಾಜ್, ಯಲಹಂಕ ಶಾಸಕ ಎಸ್ .ಆರ್. ವಿಶ್ವನಾಥ್ ಅವರು ನರ್ತಿಸಿದ್ದರು. ಸಭೆಯಲ್ಲಿ ನೆರೆದಿದ್ದ ಹಲವು ಮಂದಿಯೂ ಹೆಜ್ಜೆ ಹಾಕಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next