Advertisement

ಪೊಲೀಸ್‌ ಜತೆ ಕೈಜೋಡಿಸಿ ಅಪರಾಧ ತಡೆಗಟ್ಟಿ

12:19 PM Mar 13, 2021 | Team Udayavani |

ಚನ್ನಪಟ್ಟಣ: ಸಾರ್ವಜನಿಕರ ಆಸ್ತಿ ಪಾಸ್ತಿ ರಕ್ಷಣೆ ಮಾಡುವ ಜತೆಗೆ ಜನರ ಕಾವಲಿಗಿರುವ ಪೊಲೀಸ್‌ ಇಲಾಖೆಯ ಜೊತೆ ಸಾರ್ವಜನಿಕರು ಕೈಜೋಡಿಸಿದರೆ, ಅಪರಾಧ ತಡೆಗಟ್ಟಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಪಾತ್ರ ಬಹಳ ಮಹತ್ವವಾಗಿದೆ ಎಂದು ಡಿವೈಎಸ್ಪಿ ರಮೇಶ್‌ ತಿಳಿಸಿದರು.

Advertisement

ತಾಲೂಕಿನ ಎಂ.ಕೆ.ದೊಡ್ಡಿ ಪೊಲೀಸ್‌ ಠಾಣೆ ಆವರಣದಲ್ಲಿ ಆಯೋಜಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ಹಾಗೂ ಪೊಲೀಸರ ನಡುವೆ ಉತ್ತಮಬಾಂಧವ್ಯವಿರಬೇಕು. ಯಾವುದೇ ಕಷ್ಟ ಕಾರ್ಪಣ್ಯಗಳನ್ನುಮುಕ್ತವಾಗಿ ಪೊಲೀಸರ ಮುಂದೆ ನಿವೇದಿಸಿಕೊಂಡು ಪರಿಹಾರಕಂಡುಕೊಳ್ಳಬೇಕು. ಪೊಲೀಸರೆಂದರೆ ಅಂಜಿಕೆ, ಭಯವನ್ನು ಮೊದಲು ತಮ್ಮ ಮನಸ್ಸಿಂದ ಕಿತ್ತು ಹಾಕಬೇಕೆಂದು ತಿಳಿಸಿದರು.

ಗ್ರಾಮದಲ್ಲಿ ಹಾಗೂ ನಿಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಮ್ಮ ಕಣ್ಣೆದುರಿಗೆ ನಡೆಯುವ ಹಾಗೂ ಇತರೆ ಕಡೆಗಳಲ್ಲಿ ನಡೆಯುವ ಅಪರಾಧ ಪ್ರಕರಣ ನಿಯಂತ್ರಣ ಮಾಡಲುಸಹಕರಿಸಬೇಕು, ನಮಗ್ಯಾಕೆ ಎಂದು ಸುಮ್ಮನೆ ಹೋಗಬೇಡಿ,ಸಾಧ್ಯವಾದಷ್ಟು ಅಪರಾಧ ಚಟುವಟಿಕೆಗಳು ನಡೆದಿದ್ದಲ್ಲಿ ಮಾಹಿತಿನೀಡಿ, ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುತ್ತದೆ ಎಂದರು.ಪ್ರತಿ ತಿಂಗಳು ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸಲು ಸಭೆ ನಡೆಸಲಾಗುತ್ತದೆ.ಸಾರ್ವಜನಿಕರು ಇಂತಹ ಸಭೆಗಳಲ್ಲಿ ತಮಗೆ ಪೊಲೀಸ್‌ ಠಾಣೆಗಳಲ್ಲಿ ಯಾವುದೇ ರೀತಿಯ ಅನ್ಯಾಯಗಳನ್ನು ಎದುರಾಗಿದ್ದರೆ ನಿವೇದಿಸಿಕೊಳ್ಳಬಹುದು ಎಂದರು.

ಠಾಣೆ ವ್ಯಾಪ್ತಿಯ ರೌಡಿಗಳ ಬಗ್ಗೆ ಮಾತನಾಡಿದ ಅವರು, ಯಾವುದೋ ಕಾರಣಕ್ಕೆ ರೌಡಿಗಳಾಗಿ ಅನಿವಾರ್ಯವಾಗಿ ನಿಮ್ಮ ಮೇಲೆ ಕಳಂಕವನ್ನು ಹೊತ್ತಿರುವ ನೀವು ನಿಮ್ಮ ಭವಿಷ್ಯವನ್ನುಹಾಳು ಮಾಡಿಕೊಂಡಿದ್ದೀರಿ. ಮುಂದಾದರೂ ಒಳ್ಳೆಯಮನುಷ್ಯರಾಗಿ ಸಮಾಜದಲ್ಲಿ ಬದುಕುವದನ್ನು ಕಲಿತುಕೊಳ್ಳಿಎಂದು ಎಚ್ಚರಿಕೆ ನೀಡುವುದರ ಜೊತೆಗೆ ಗ್ರಾಮದಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಮ್ಮಿಂದ ಯಾವುದೇ ರೀತಿಯಅಪರಾಧಗಳು ಕಂಡು ಬಂದರೆ ನಿರ್ದಕ್ಷಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಗ್ರಾಮಾಂತರ ವೃತ್ತ ನಿರೀಕ್ಷಕ ಬಿ.ಶಿವಕುಮಾರ್‌, ಎಂ.ಕೆ.ದೊಡ್ಡಿ ಪೊಲೀಸ್‌ ಠಾಣೆಯ ಪಿಎಸ್‌ಐ ಸದಾನಂದ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next