Advertisement

ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂ ಒಪ್ಪಿಗೆ: ಜನ್ಮ ಇರುವವರೆಗೂ ಗಂಗಾವತಿ ಮರೆಯಲ್ಲ: ಶಾಸಕ ರೆಡ್ಡಿ

08:44 AM Oct 03, 2024 | Team Udayavani |

ಗಂಗಾವತಿ: ಜನ್ಮವಿರುವ ವರೆಗೂ ಗಂಗಾವತಿ ಜನತೆಯನ್ನು ಮರೆಯುವುದಿಲ್ಲ. ಸುಪ್ರೀಂಕೋರ್ಟ್ ಬಳ್ಳಾರಿ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದ್ದು ದೇಶದ ಸಂವಿಧಾನ, ನ್ಯಾಯಾಂಗ ವ್ಯವಸ್ಥೆಯಲ್ಲಿ ತಮಗೆ ನಂಬಿಕೆ ಇದೆ ಎಂದು ಶಾಸಕ ಹಾಗೂ ಬಿಜೆಪಿಯ ಹಿರಿಯ ಮುಖಂಡ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

Advertisement

ಅವರು ನಗರದ ಶ್ರೀ ಚನ್ನಬಸವ ಸ್ವಾಮಿ ಮಠದಲ್ಲಿ ಬೆಳ್ಳಿ ರಥದ ಹರಕೆಯನ್ನು ಪತ್ನಿ ಅರುಣ ಲಕ್ಷ್ಮಿ ಜೊತೆಗೂಡಿ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ತಮ್ಮ ಹಾಗೂ ತಮ್ಮ ಕುಟುಂಬದ ತೇಜು ಅವರೆಗಾಗಿ ಅಂದಿನ ಕಾಂಗ್ರೆಸ್ ಸರ್ಕಾರ ಷಡ್ಯಂತ್ರ ನಡೆಸಿ ತಮ್ಮನ್ನು ಜೈಲಿಗೆ ಕಳಿಸಿತ್ತು ನಂತರ ದಿನಗಳಲ್ಲಿ ನ್ಯಾಯಾಂಗ ಹೋರಾಟದ ಮೂಲಕ ತಮಗೆ ಗೆಲುವು ಸಿಕ್ಕಿದ್ದು ಗಂಗಾವತಿ ಜನರು ರಾಜಕೀಯ ಮರು ಪ್ರವೇಶ ನೀಡಿದ್ದಾರೆ. ಗಂಗಾವತಿ ಜನರ ಋಣವನ್ನು ಎಂದಿಗೂ ಮರೆಯುವುದಿಲ್ಲ ಮತ್ತು ಸಾಯುವ ತನಕ ಮರೆಯುವುದಿಲ್ಲ.

ತಾವು ಸದ್ಯ ಬಳ್ಳಾರಿ ಪ್ರವೇಶ ಮಾಡುತ್ತಿದ್ದು ಮುಂಬರುವ ದಿನಗಳಲ್ಲಿ ಸಂಡೂರು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನ ಗೆಲ್ಲಿಸುವ ಮೂಲಕ ಬಿಜೆಪಿಗೆ ಬಲವನ್ನು ತಂದು ಕೊಡಲಾಗುತ್ತದೆ. ಜೊತೆಗೆ ರಾಜ್ಯಾದ್ಯಂತ ಪಕ್ಷವನ್ನು ಸಂಘಟಿಸಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಅತ್ಯಧಿಕ ಸ್ಥಾನಗಳ ಪಡೆದು ಅಧಿಕಾರಕ್ಕೆ ತರಲಾಗುತ್ತದೆ.

ಪಕ್ಷದ ಮುಖಂಡರ ತಮ್ಮ ಬಗ್ಗೆ ಇಟ್ಟಿರುವ ನಿರೀಕ್ಷೆಯನ್ನು ಹುಸಿ ಮಾಡುವುದಿಲ್ಲ. ಕಾರ್ಯಕರ್ತರು ಮತ್ತು ಗಂಗಾವತಿ ಭಾಗದ ಜನರ ಬೇಡಿಕೆಯನ್ನು ಆದ್ಯತೆ ಮೇರೆಗೆ ಪೂರೈಸಲಾಗುತ್ತದೆ.

Advertisement

ಐತಿಹಾಸಿಕ ಕಿಷ್ಕಿಂಧಾ ಅಂಜನಾದ್ರಿ ಕ್ಷೇತ್ರ ಮತ್ತು ಗಂಗಾವತಿಯನ್ನು ಮಾದರಿಯ ಕ್ಷೇತ್ರವನ್ನಾಗಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಮುಖ್ಯಮಂತ್ರಿ ಮತ್ತು ರಾಜ್ಯ ಸರ್ಕಾರ ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿ ಸರ್ವಶವಾಗಿದ್ದು ,ರಾಜ್ಯವನ್ನು ಅಭಿವೃದ್ಧಿ ರಹಿತ ಮಾಡುತ್ತಿದ್ದಾರೆ.

ಹೈಕೋರ್ಟ್ ಸಿಎಂ ವಿರುದ್ಧ ದೂರು ದಾಖಲಿಸಿ ತನಿಖೆ ನಡೆಸಲು ಆದೇಶ ನೀಡಿದ್ದು ಭ್ರಷ್ಟಾಚಾರ ಬಯಲಿಗೆ ಬರಲಿದೆ ಮುಂಬರುವ ದಿನಗಳಲ್ಲಿ ಸಿಎಂ ರಾಜೀನಾಮೆ ನೀಡಲಿದ್ದಾರೆಂದರು. ಈ ಸಂದರ್ಭದಲ್ಲಿ ಬಿಜೆಪಿಯ ಮುಖಂಡರು ಕಾರ್ಯಕರ್ತರು ರೆಡ್ಡಿ ಅಭಿಮಾನಿಗಳು ಇದ್ದರು. ಸಂಜೆ ಕಿಷ್ಕಿಂಧಾ ಅಂಜನಾದ್ರಿ ಮತ್ತು ಪಂಪ ಸರೋವರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಇದನ್ನೂ ಓದಿ: Test Bowling Rankings: ಟೆಸ್ಟ್‌ ಬೌಲಿಂಗ್‌ ರ್‍ಯಾಂಕಿಂಗ್‌… ಬುಮ್ರಾ ಮರಳಿ ನಂಬರ್‌ 1

Advertisement

Udayavani is now on Telegram. Click here to join our channel and stay updated with the latest news.

Next